ತಮಿಳುನಾಡಿನಲ್ಲಿ ಎಐಎಡಿಎಂಕೆ ಸರಕಾರಕ್ಕೆ ಸಂಕಷ್ಟ

Update: 2017-08-22 07:47 GMT

ಚೆನ್ನೈ, ಆ.22: ತಮಿಳುನಾಡಿನಲ್ಲಿ ಎಐಎಡಿಎಂಕೆ ಸರಕಾರಕ್ಕೆ 19 ಮಂದಿ ಶಾಸಕರು ಬೆಂಬಲ ವಾಪಸ್ ಪಡೆಯುವ ಬಗ್ಗೆ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಗೆ ಪತ್ರ ಬರದಿದ್ದಾರೆ, ಇದರೊಂದಿಗೆ  ಮುಖ್ಯ ಮಂತ್ರಿ ಎ.ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರಕಾರ ಬಹುಮತ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಟಿಟಿವಿ ದಿನಕರನ್ ಅವರ ಪರ ಇರುವ 19 ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿ ಸಲ್ಲಿಸಿರುವ ಪತ್ರದಲ್ಲಿ ಎ.ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಪಾಪಸ್  ಪಡೆಯುವುದಾಗಿ ಹೇಳಿದ್ದಾರೆ . ಇದರೊಂದಿಗೆ ಪಳನಿಸ್ವಾಮಿ ಸರಕಾರಕ್ಕೆ  ಬಹುಮತ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಸೋಮವಾರ ಮುಖ್ಯ ಮಂತ್ರಿ ಎ.ಪಳನಿಸ್ವಾಮಿ ಮತ್ತು ಮಾಜಿ ಮುಖ್ಯ ಮಂತ್ರಿ ಓ.ಪನ್ನೀರ್ ಸೆಲ್ವಂ ವಿಲೀನಗೊಂಡಿತ್ತು. ಇದರ ಪರಿಣಾಮವಾಗಿ  ನೂತನ  ಉಪಮುಖ್ಯ ಮಂತ್ರಿಯಾಗಿ ಎಐಎಡಿಎಂಕೆಯ  ಓ.ಪನ್ನೀರ್ ಸೆಲ್ವಂ ಮತ್ತು ಸಂಪುಟ ಸಚಿವರಾಗಿ  ಕೆ.ಪಾಂಡಿರಾಜನ್‌ ಪ್ರಮಾಣ ವಚನ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News