ಕ್ಷಯ ರೋಗದಿಂದ ಸಾಯುವ ಪ್ರತೀ ನಾಲ್ಕು ಮಕ್ಕಳಲ್ಲಿ ಒಂದು ಭಾರತದ ಮಗು

Update: 2017-08-26 18:50 GMT

ಜಾಗತಿಕವಾಗಿ ಮಕ್ಕಳಲ್ಲಿ ಕಾಯಿಲೆಯ ಹೊರೆಗೆ ಪ್ರಮುಖ ಕಾಣಿಕೆ ನೀಡುವ ಒಂದು ಕಾಯಿಲೆಯೆಂದು ಕ್ಷಯರೋಗವನ್ನು ಪರಿಗಣಿಸಲಾಗಿದೆ. ಪ್ರತಿವರ್ಷ ಒಂದು ಮಿಲಿಯ ಮಕ್ಕಳು ಟಿಬಿಗೆ ತುತ್ತಾಗುತ್ತಾರೆ ಮತ್ತು ವಿಶ್ವದಾದ್ಯಂತ ವರದಿಯಾಗುವ ಒಟ್ಟು ಟಿಬಿ ಪ್ರಕರಣಗಳಲ್ಲಿ ಶೇ.11 ಮಕ್ಕಳು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.



ಮಕ್ಕಳಲ್ಲಿ ಟಿಬಿ ಕಾಯಿಲೆಯ ಪ್ರಮಾಣ ಹೆಚ್ಚೇ ಇದ್ದರೂ ಅದನ್ನೂ ಜಾಗತಿಕವಾಗಿ ಕಡೆಗಣಿಸಲಾಗಿದೆ ಎನ್ನುತ್ತಾರೆ ತಜ್ಞರು. 2015ರಲ್ಲಿ ಜಗತ್ತಿನಲ್ಲಿ ಕ್ಷಯರೋಗದಿಂದ ಸುಮಾರು 2,39,000 ಮಕ್ಕಳು ತೀರಿಕೊಂಡರು, ಎನ್ನುತ್ತದೆ ಇತ್ತೀಚೆಗೆ ದಿ ಲಾನ್ಸೆಟ್ ಗ್ಲೋಬಲ್ ಹೆಲ್ತ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನದ ವರದಿ; ಅಮೆರಿಕ ಮತ್ತು ಬ್ರಿಟನ್‌ನಲ್ಲಿ ವಿಜ್ಞಾನಿಗಳ ತಂಡವೊಂದು ನಡೆಸಿದ ಈ ಅಧ್ಯಯನದ ಅಂದಾಜುಗಳು, ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿರುವ ಸಂಖ್ಯೆಗಳಿಗೆ ಹೋಲುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯು 2015ರಲ್ಲಿ 2,10,000 ಮಕ್ಕಳು ಟಿಬಿಯಿಂದಾಗಿ ಮೃತಪಟ್ಟಿದ್ದವೆಂದು ಹೇಳಿತ್ತು.

 ಅಧ್ಯಯನ ನಡೆಸಿದ ವಿಜ್ಞಾನಿಗಳು ಮಾರಣಾಂತಿಕ ಆಧಾರಿತವಾದ ಒಂದು ಗಣಿತದ ಮಾದರಿಯನ್ನು ಬಳಸಿದರು. ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ಡಾ.ಪೀಟರ್ ಡಾಡ್‌ರವರ ಪ್ರಕಾರ, ಮಾರಣಾಂತಿಕ ಆಧಾರಿತ ಪ್ರಕರಣಗಳ ಅಂದಾಜು ಅಂದರೆ, ಒಂದು ನಿರ್ದಿಷ್ಟ ವರ್ಷದಲ್ಲಿ ಕ್ಷಯರೋಗ ಪೀಡಿತರಾಗುವ ಮಕ್ಕಳ ಸಂಖ್ಯೆಯ ಒಂದು ಅಂದಾಜಿನಿಂದ ಆರಂಭಿಸಿ, ಆ ಮಕ್ಕಳು ಸಾಯುವ ಸಂಭಾವ್ಯ ಆಧಾರದ ಮೇಲೆ ಆ ವರ್ಷ ಎಷ್ಟು ಮಕ್ಕಳು ಮೃತಪಟ್ಟಿರಬಹುದೆಂಬ ಬಗ್ಗೆ ತೀರ್ಮಾನಕ್ಕೆ ಬರುವುದು. ಡಾಡ್‌ರವರ ತಂಡದ ಅಧ್ಯಯನವು 217ದೇಶಗಳಲ್ಲಿ ಮಕ್ಕಳಲ್ಲಿ ಕ್ಷಯರೋಗದ ಪ್ರಕರಣಗಳನ್ನು ವಿಶ್ಲೇಷಿಸಿತು.

ಜಾಗತಿಕವಾಗಿ ಮಕ್ಕಳಲ್ಲಿ ಕಾಯಿಲೆಯ ಹೊರೆಗೆ ಪ್ರಮುಖ ಕಾಣಿಕೆ ನೀಡುವ ಒಂದು ಕಾಯಿಲೆಯೆಂದು ಕ್ಷಯರೋಗವನ್ನು ಪರಿಗಣಿಸಲಾಗಿದೆ. ಪ್ರತಿವರ್ಷ ಒಂದು ಮಿಲಿಯ ಮಕ್ಕಳು ಟಿಬಿಗೆ ತುತ್ತಾಗುತ್ತಾರೆ ಮತ್ತು ವಿಶ್ವದಾದ್ಯಂತ ವರದಿಯಾಗುವ ಒಟ್ಟು ಟಿಬಿ ಪ್ರಕರಣಗಳಲ್ಲಿ ಶೇ.11 ಮಕ್ಕಳು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.

ಟಿಬಿಯಿಂದ ಸಂಭವಿಸುವ ಸಾವುಗಳನ್ನು ಎರಡು ವರ್ಗಗಳಲ್ಲಿ ಅಂದಾಜಿಸಲಾಗುತ್ತದೆ:

5 ವರ್ಷದೊಳಗಿನ ಮಕ್ಕಳು ಮೊದಲ ವರ್ಗ, ಮತ್ತು 5ರಿಂದ 14ವರ್ಷದ ನಡುವಿನ ಮಕ್ಕಳು ಎರಡನೆ ವರ್ಗ.

ಟಿಬಿಯಿಂದಾಗಿ ಸಂಭವಿಸಿದ 2,39,000 ಸಾವುಗಳಲ್ಲಿ, ಬೃಹತ್ ಸಂಖ್ಯೆಯ ಶೇ.80, ಅಂದರೆ ಸುಮಾರು ಎರಡು ಲಕ್ಷ ಸಾವುಗಳು.

5 ವರ್ಷದ ಕೆಳಗಿನ ಮಕ್ಕಳ ಸಾವುಗಳು:
ಒಟ್ಟು ಸಾವುಗಳಲ್ಲಿ ಶೇ.75ಕ್ಕಿಂತಲೂ ಹೆಚ್ಚು ಸಾವುಗಳು ದಕ್ಷಿಣ- ಪೂರ್ವ ಏಷ್ಯಾ ಮತ್ತು ಆಫ್ರಿಕಾದಲ್ಲಿ ಸಂಭವಿಸಿದವು.

ಒಟ್ಟು ಸಾವುಗಳಲ್ಲಿ ವಿಶ್ವದಾದ್ಯಂತ ಸಂಭವಿಸಿದ ಕ್ಷಯರೋಗ ಪೀಡಿತ ಮಕ್ಕಳ ಶೇ.17(39,000)ಸಾವುಗಳು ಎಚ್‌ಐವಿ ಸೋಂಕು ಪೀಡಿತ ಮಕ್ಕಳ ಸಾವುಗಳು. ಟಿಬಿ ಜೊತೆಗೆ ಎಚ್‌ಐವಿ ಸೋಂಕು ಕೂಡ ಇದ್ದ ಆಫ್ರಿಕಾ ಭೂಭಾಗದ ಮಕ್ಕಳ ಸಾವುಗಳು, 39,000 ಸಾವುಗಳಲ್ಲಿ ಶೇ.80ದಷ್ಟಿದ್ದವು. ಅಧ್ಯಯನದ ಪ್ರಕಾರ, ಮಕ್ಕಳಲ್ಲಿ ಕ್ಷಯರೋಗದಿಂದ ಸಂಭವಿಸುವ ಸಾವುಗಳಿಗೆ ಭಾರತದ ಕಾಣಿಕೆಯೂ ಸಾಕಷ್ಟು ಇದೆ: 2015ರಲ್ಲಿ ಭಾರತದಲ್ಲಿ 60,000ಕ್ಕೂ ಹೆಚ್ಚು ಮಕ್ಕಳು ಕ್ಷಯರೋಗದಿಂದ ಮರಣಹೊಂದಿದವು.

ತಡೆಯಬಹುದಾದ ಸಾವುಗಳು:
ಆಘಾತಕಾರಿ ವಿಷಯವೆಂದರೆ, ಕಾಯಿಲೆಗೆ ಮಕ್ಕಳಿಗೆ ಚಿಕಿತ್ಸೆ ದೊರಕದೆ ಶೇ.96ಕ್ಕಿಂತಲೂ ಹೆಚ್ಚು ಕ್ಷಯರೋಗ ಸಾವುಗಳು ಸಂಭವಿಸಿದವು ಎಂದು ಅಧ್ಯಯನವು ಹೇಳಿದೆ.
ಕೆನಡಾದ ಮ್ಯಾಕ್‌ಗಿಲ್ ವಿಶ್ವವಿದ್ಯಾನಿಲಯದ ಮ್ಯಾಕ್‌ಗಿಲ್ ಅಂತಾರಾಷ್ಟ್ರೀಯ ಟಿಬಿ ಕೇಂದ್ರದ ಸಹ ನಿರ್ದೇಶಕ ಡಾ. ಮಧುಕರ್ ಪೈ ಹೇಳುವಂತೆ, ಡಾಡ್ ಮತ್ತು ಅವರ ಸಹೋದ್ಯೋಗಿಗಳು ಪ್ರತಿವರ್ಷ 15 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಕ್ಷಯರೋಗವು ಸುಮಾರು 2,50,000 ಮಕ್ಕಳನ್ನು ಕೊಲ್ಲುತ್ತದೆ. ಎಂದಿದ್ದಾರೆ. ‘‘ಇದು ತುಂಬ ದುಃಖದ ವಿಷಯ ಮತ್ತು ಟಿಬಿ ಗುಣಪಡಿಸಬಹುದಾದ ಒಂದು ಸೋಂಕು ಆಗಿರುವುದರಿಂದ ಇವುಗಳಲ್ಲಿ ಹೆಚ್ಚಿನ ಸಾವುಗಳು ತಡೆಯಬಹುದಾಗಿದೆ.’’ಡಾಡ್ ಅಧ್ಯಯನವು ಮಕ್ಕಳಲ್ಲಿ ಟಿಬಿ ಸಾವುಗಳನ್ನು ಕಡಿಮೆ - ಅಂದಾಜಿಸಿದೆ ಎನ್ನುತ್ತಾರೆ, ಛತ್ತೀಸ್‌ಗಡದ ಜನ್ ಸ್ವಾಸ್ಥ ಸಹಯೋಗ್‌ನ ಡಾ.ಯೋಗೇಶ್ ಜೈನ್; ‘‘ಒಂದು ದೇಶವು ವರದಿಮಾಡುವ ಟಿಬಿ ಪ್ರಕರಣಗಳ ದತ್ತಾಂಶಗಳನ್ನು ನಂಬುವ ಒಂದು ಗಣಿತ ಮಾದರಿಯನ್ನಾಧರಿಸಿದ ಸಾವುಗಳ ಅಂಕಿ ಸಂಖ್ಯೆಗಳು ಅವು.’’ ಸಾವುಗಳ ನಿಜವಾದ ಸಂಖ್ಯೆ ಇನ್ನೂ ಹೆಚ್ಚು ಇರಬಹುದು ಎಂಬುದು ಅವರ ಅಭಿಪ್ರಾಯ.

ಮಕ್ಕಳಲ್ಲಿ ಕ್ಷಯರೋಗ:
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಟಿಬಿಗೆ ನಿರ್ದಿಷ್ಟವಲ್ಲದ ಮತ್ತು ರೋಗ ಪರೀಕ್ಷೆ(ಡಯಾಗ್ನೋಸ್) ಮಾಡಲು ಸುಲಭವಲ್ಲದ ರೋಗ ಲಕ್ಷಣಗಳಿರುವುದರಿಂದ, ಮಕ್ಕಳಲ್ಲಿರುವ ಟಿಬಿ ಕಾಯಿಲೆಯನ್ನು ಬಹಳಷ್ಟು ಸಂದರ್ಭಗಳಲ್ಲಿ ಕಡೆಗಣಿಸಲಾಗುತ್ತದೆ.‘‘ಇದಕ್ಕೆ ಭಾರತವು ಒಂದು ಉತ್ತಮ ಉದಾಹರಣೆ. ಭಾರತದ ರಾಷ್ಟ್ರೀಯ ಟಿಬಿ ಕಾರ್ಯಕ್ರಮವು ಕಫ ಪರೀಕ್ಷೆಯನ್ನಾಧರಿಸಿದೆ. ಆದರೆ ಚಿಕ್ಕ ಮಕ್ಕಳು ಕಫವನ್ನು ಉತ್ಪಾದಿಸಲು ಸಮರ್ಥರಿರುವುದಿಲ್ಲ; ಮತ್ತು ಒಂದು ವೇಳೆ ಕಫ ಇದ್ದಾಗಲೂ, ಕಫದ ಸ್ಯಾಂಪಲ್‌ನಲ್ಲಿ ಬ್ಯಾಕ್ಟೀರಿಯಾಗಳ ಸಂಖ್ಯೆ ತುಂಬಾ ಕಡಿಮೆ ಇರುವುದರಿಂದ ಟಿಬಿಯನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ.’’

ಜೈನ್ ಹೇಳುವ ಪ್ರಕಾರ, ‘‘ಟಿಬಿ ವಿರುದ್ಧದ ಹೋರಾಟದಲ್ಲಿ ಮಕ್ಕಳ ಪೌಷ್ಟಿಕಾಹಾರದ ಕೊರತೆಯ ಸಮಸ್ಯೆಯನ್ನು ಬಗೆಹರಿಸುವುದು ಬಹಳ ಮುಖ್ಯ. ಈ ಸಮಸ್ಯೆಯನ್ನು ಪರಿಹರಿಸದೇ ಇದ್ದಲ್ಲಿ ಟಿಬಿ ಕಾಯಿಲೆಯ ಪ್ರಕರಣಗಳು ಕಡಿಮೆಯಾಗುವುದಿಲ್ಲ.

Writer - ವೌನ ನಾಗರಾಜು

contributor

Editor - ವೌನ ನಾಗರಾಜು

contributor

Similar News