ಮಹಿಳಾ ಸಬಲೀಕರಣದ ವಿವಿಧ ಆಯಾಮಗಳು...

Update: 2017-08-28 18:37 GMT

‘ಮಹಿಳಾ ಸಶಕ್ತೀಕರಣ: ಒಂದು ಪರಿಕಲ್ಪನೆ’ ಹೇಮಲತಾ ಎಚ್. ಎಮ್. ಅವರ ಅಧ್ಯಯನಾ ಕೃತಿ. ಲೇಖಕಿ ಇಪತ್ತೈದು ವರ್ಷಗಳಿಂದ ಓದಿದ, ಬರೆದ ಸಂಶೋಧಿಸಿದ, ಭಾವಿಸಿದ ಅನುಭವಿಸಿದ, ಚರ್ಚಿಸಿದ ವಿಷಯಗಳು ಇಲ್ಲಿ ಸಂಗ್ರಹ ರೂಪದಲ್ಲಿ ಮೂಡಿ ಬಂದಿದೆ. ಮಹಿಳಾ ಸಶಕ್ತೀಕರಣ ಒಂದು ಪ್ರಕ್ರಿಯೆಯಾಗಿ ಪರಮವಾದುದಲ್ಲ. ಸಾಪೇಕ್ಷವಾದುದು ಮತ್ತು ನಿರಂತರವಾಗಿ ಪರಿವರ್ತನೆಗೊಳ್ಳುತ್ತಾ ಹೋಗುವಂತಹದು ಎನ್ನುವ ಮನಸ್ಥಿತಿಯನ್ನು ಇಟ್ಟುಕೊಂಡೇ ಅವರು ಈ ಕೃತಿಯನ್ನು ರಚಿಸಿದ್ದಾರೆ. ಆದುದರಿಂದ, ಈ ಕೃತಿ ಅಂತಿಮವಲ್ಲ. ಈ ಶೋಧ ಮತ್ತು ಪರಿಶೋಧ ಮುಂದುವರಿಕೆಯನ್ನು ಬೇಡುವಂತಹದು. ಶಕ್ತಿಯ ಕಲ್ಪನೆಯ ವಿವಿಧ ಆಯಾಮಗಳು, ಸಶಕ್ತೀಕರಣ ಅನ್ನುವುದರ ಅರ್ಥವ್ಯಾಪ್ತಿಯನ್ನು ವಿವರಿಸಿ ಮಹಿಳಾ ಸಬಲೀಕರಣದ ವಿವಿಧ ಆಯಾಮಗಳನ್ನು ಸ್ತ್ರೀವಾದ, ಸಾಮಾಜಿಕ, ಅಭಿವೃದ್ಧಿ, ರಾಜಕೀಯ, ಆರ್ಥಿಕ ಮನೋವಿಶ್ಲಾಷಣಾತ್ಮಕ ಹಾಗೂ ಕಾನೂನು ಚಿಂತನೆಗಳ ದೃಷ್ಟಿಯಿಂದ ಕೃತಿಯಲ್ಲಿ ಪರಿಶೀಲಿಸಿದ್ದಾರೆ. ಮಹಿಳಾ ಸಶಕ್ತೀಕರಣದ ಬೆಳವಣಿಗೆಗಳ ಹಂತಗಳನ್ನು ತಳಮಟ್ಟದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗೆ ವಿವಿಧ ಹಂತಗಳಲ್ಲಿ ಗುರುತಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ಈ ಪರಿಕಲ್ಪನೆಯ ಪರಿಣಾಮಗಳು, ಅದರ ಅನುಷ್ಠಾನಕ್ಕೆ ಇರುವ ಅಡ್ಡಿ ಮತ್ತು ಸವಾಲುಗಳು ಹಾಗೂ ಅಳವಡಿಸಿಕೊಳ್ಳಬೇಕಾದ ಕಾರ್ಯತಂತ್ರಗಳನ್ನೂ ಪರಿಚಯಿಸಿದ್ದಾರೆ. ಮಹಿಳಾ ಅಧ್ಯಯನದಲ್ಲಿ ಶಾಸ್ತ್ರೀಯ ಶಿಸ್ತಿನ ಜೊತೆಗೆ ತೊಡಗಿರುವವರಿಗೆ ಮತ್ತು ಸ್ತ್ರೀವಾದದ ವಿವಿಧ ಮಗ್ಗುಲುಗಳ ಬಗ್ಗೆ ಆಸಕ್ತರಾದವರಿಗೆ ಈ ಕೃತಿ ಉಪಯುಕ್ತವಾಗಿದೆ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈ ಕೃತಿಯನ್ನು ಪ್ರಕಟಿಸಿದ್ದು, ಮುಖಬೆಲೆ 75 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News