ಗೌರಿ ಲಂಕೇಶ್‍ ಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ದಸಂಸ ಕಾರ್ಯುಕರ್ತರ ಧರಣಿ

Update: 2017-09-06 12:18 GMT

ಹೊಳೆನರಸೀಪುರ, ಸೆ.6: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‍ ಅವರ  ಹತ್ಯೆ ಮಾಡಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ತಾಲೂಕು ದಲಿತ ಸಂಘರ್ಷ ಸಮಿತಿ ಧರಣಿ ತಹಶೀಲ್ದಾರ್ ವೈ.ಎಂ.ರೇಣುಕುಮಾರ್‍ ಅವರಿಗೆ ಮನವಿ ಸಲ್ಲಿಸಿದರು.

ಈ ಧರಣಿನಿರತರರು ಮಾತನಾಡಿ, ವೇಳೆ ಗೌರಿ ಲಂಕೇಶ್‍ ಅವರು ಸಮಾಜದಲ್ಲಿ ನಡೆಯುವ ಅಕ್ರಮ, ಅನ್ಯಾಯ, ಭ್ರಷ್ಟಾಚಾರ, ಅವ್ಯವಹಾರ, ಖಂಡಿಸಿ ತಮ್ಮ ಬರವಣಿಗೆಯ ಮೂಲಕ ದುಷ್ಟ ಶಕ್ತಿಗಳಿಗೆ ಚಾಟಿ ಬೀಸುತ್ತಿದ್ದ ಸಮಾಜ ಚಿಂತಕಿಯನ್ನು ಹತ್ಯೆ ಮಾಡಿರುವುದು ಖಂಡನೀಯ. ತಮ್ಮ ಬರವಣಿಗೆಯ ಮೂಲಕ ನಾಗರಿಕರಿಗೆ ಎಚ್ಚರಿಸುವ ಕೆಲಸ ಮಾಡುತ್ತಿದ್ದರು. ಇಂತಹ ದಕ್ಷ ಪ್ರಾಮಾಣಿಕ ಬರಹಗಾರ್ತಿ ಹಾಗೂ ಪತ್ರಕರ್ತೆಯನ್ನು ಕಿಡಿಗೇಡಿಗಳು ಗುಂಡಿಕ್ಕಿ ಹತ್ಯೆಗೈದಿರುವುದು ಸಮಾಜದಲ್ಲಿ ತಲೆತಗ್ಗಿಸು ವಂತಾಗಿದೆ ಎಂದು ಹೇಳಿದರು.

ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವ ಆರೋಪಿಗಳ ಮೇಲೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ ಅವರು,ಗೌರಿ ಲಂಕೇಶ್ ಅರವರ ಹತ್ಯೆ ಅತ್ಯಂತ ಅಘಾತಕಾರಿ ಹೇಯಕೃತ್ಯ. ಮಾನವೀಯತೆ ಇರುವವರು ಇಂತಹ ಕೆಲಸ ಮಾಡುವುದಿಲ್ಲ. ಇವರ ಹತ್ಯೆಯನ್ನುದಲಿತ ಸಂಘರ್ಷ ಸಮಿತಿತೀವ್ರವಾಗಿ ಖಂಡಿಸುತ್ತದೆ. ಇದುಇಡೀ ಸಮಾಜಕ್ಕೆ ಮತ್ತು ಪತ್ರಿಕಾರಂಗಕ್ಕೆದುಃಖಉಂಟುಮಾಡಿದೆ. ಹತ್ಯೆಕೋರರನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆಯನ್ನು ಕೊಡಬೇಕೆಂದು ತಾಲೂಕು ದಲಿತ ಸಂಘರ್ಷ ಸಮಿತಿ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಸಂಚಾಲಕ ಕುಪ್ಪೆ ಉಮೇಶ, ಜಿಲ್ಲಾ ಸಂಘಟನಾ ಸಂಚಾಲಕ ಅಬ್ದುಲ್ ಸಮದ್‍, ಗಣೇಶ್,  ಜಿಲ್ಲಾ ಸಂಚಾಲಕ ಎಚ್.ಆರ್.ಜವರೇಶ್‍, ತಾಲೂಕು ಸಂಚಾಲಕ  ಮೋಹನ್‍, ಎಂ.ಆರ್‍. ರಾಮಚಂದ್ರ, ತಾಲೂಕು ಸಂಘಟನಾ ಸಂಚಾಲ ಎಚ್.ಕೆ.ಸೋಮಶೇಖರ, ತಾಲೂಕು ಸಂಘಟನಾ ಸಂಚಾಲಕ ಗಣೇಶ್, ಖಜಾಂಚಿ ಶಶಿಧರ, ತಾಲೂಕು ಸಂಘಟನಾ ಸಂಚಾಲಕ ಕುಮಾರ್‍, ನಾಗೇಶ್‍  ಹಾಜರಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News