ನಜೀಬ್ ಅಹ್ಮದ್ ನಾಪತ್ತೆ ಪ್ರಕರಣ: ತನಿಖೆ ನಡೆಸಲು ಸಿಬಿಐಗೆ ದಿಲ್ಲಿ ಹೈಕೋರ್ಟು ಸೂಚನೆ

Update: 2017-09-07 10:53 GMT

ಹೊಸದಿಲ್ಲಿ,ಆ.7: ಜವಹರಲಾಲ್ ನೆಹರೂ ಯುನಿವರ್ಸಿಟಿಯ ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆ ಕುರಿತು ತನಿಖೆ ನಡೆಸಲು ದಿಲ್ಲಿ ಹೈಕೋರ್ಟು ಸಿಬಿಐಗೆ ಸೂಚನೆ ನೀಡಿದೆ.

ಸಿಬಿಐ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ಬಳಿಕ ಜಸ್ಟೀಸ್ ಜಿ.ಎಸ್. ಸಿಸ್ತಾನಿ, ಜಸ್ಟಿಸ್  ಚಂದ್ರಶೇಖರ್ ಪೀಠ ಸಿಬಿಐ ತನಿಖೆಗೆ ಆದೇಶ ಹೊರಡಿಸಿದ್ದು, ನಜೀಬ್ ಅಹ್ಮದ್ ಕಳೆದವರ್ಷ ಅಕ್ಟೋಬರ್ ಹದಿನೈದರಂದು ನಿಗೂಢ  ರೀತಿಯಲ್ಲಿ ನಾಪತ್ತೆಯಾಗಿದ್ದರು.  ಪುತ್ರನನ್ನು ಪತ್ತೆಹಚ್ಚಬೇಕೆಂದು ನಜೀಬ್‍ರ ತಾಯಿ ಫಾತಿಮಾ ನಫೀಸ್ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಕೋರ್ಟು ಸಿಬಿಐ ತನಿಖೆಗೆ ಆದೇಶಿಸಿದೆ.

ಪ್ರಕರಣದ ಸಾಕ್ಷಿಗಳ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲದ್ದರಿಂದ  ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಸಲಿಸಲಾಯಿತು ಎಂದು ಸಿಬಿಐ ವಕೀಲರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 26 ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಇವರಲ್ಲಿ ನಜೀಬ್‍ನ ಗೆಳೆಯರು, ವಿರೋಧಿಗಳು, ಜೆಎನ್‍ಯು ಅಧಿಕಾರಿಗಳು ಸೇರಿದ್ದಾರೆ ಎಂದು ಸಿಬಿಐ ಕೋರ್ಟಿಗೆತಿಳಿಸಿದೆ. ಜೆಎನ್‍ಯು ಪ್ರಥಮ ವರ್ಷ ಎಂಎಸ್ಸಿ ಬಯೊಟೆಕ್ನಾಲಜಿ ವಿದ್ಯಾರ್ಥಿಯಾಗಿದ್ದ ನಜೀಬ್ ಅಹ್ಮದ್ ಕ್ಯಾಂಪಸ್‍ನಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಎಬಿವಿಪಿ ಕಾರ್ಯಕರ್ತರೊಂದಿಗೆ ಕ್ಯಾಂಪಸ್‍ನಲ್ಲಿ ನಡೆದ ಜಗಳದ ನಂತರ ನಜೀಬ್ ಕಾಣೆಯಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News