ಸ್ಪೈಸ್‍ ಪಾರ್ಕ್ ನಿರ್ಮಿಸಲು ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ಮನವಿ: ಕೆಂಜಿಗೆ ಕೇಶವ

Update: 2017-09-07 11:34 GMT

ಮೂಡಿಗೆರೆ, ಸೆ.7: ಕಪ್ಪು ಬಂಗಾರ ಎಂದೇ ಹೆಸರು ಪಡೆದಿರುವ ಕಾಳು ಮೆಣಸಿನ ಬೆಲೆ ಕಳೆದ ಒಂದು ವರ್ಷದಿಂದ ದೈನಂದಿನ ಆಧಾರದ ಮೇಲೆ ಕುಸಿಯುತ್ತಿದ್ದು, ಮೆಣಸು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತೀ ಹೆಚ್ಚು ಮೆಣಸು ಬೆಳೆಯುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಪೈಸ್‍ ಪಾರ್ಕ್ ನಿರ್ಮಿಸಲು ಅಧಿ ಸೂಚನೆ ಹೊರಡಿಸಲು ಕೇಂದ್ರಕ್ಕೆ ಮನವಿ ಮಾಡಿರುವುದಾಗಿ ಬಿಜಿಎಲ್ ಸಂಸ್ಥೆಯ ಅಧ್ಯಕ್ಷ ಕೆಂಜಿಗೆ ಕೇಶವ ತಿಳಿಸಿದ್ದಾರೆ.

ಅವರು ಈ ಕುರಿತು ಗುರುವಾರ ಹೇಳಿಕೆ ನೀಡಿದ್ದು, ಇತ್ತೀಚೆಗೆ ಕೇಂದ್ರ ವಾಣಿಜ್ಯ ಮಂತ್ರಿ ನಿರ್ಮಲಾ ಸೀತಾರಾಮ ಅವರಿಗೆ ಮನವಿ ಸಲ್ಲಿಸಿದ್ದು. ರೈತರು ತೊಂದರೆಗೆ ಒಳಗಾಗಿದ್ದಾರೆ. ಇವರನ್ನು ಸಂಕಷ್ಟದಿಂದ ಪಾರು ಮಾಡಲು ಕೆಲವು ಕ್ರಮಗಳನ್ನು ಕೈಗಳ್ಳಬೇಕು ಎಂದು ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

ಜೂ.15 ರಂದು ಕೇಂದ್ರ ವಾಣಿಜ್ಯ ಮಂತ್ರಿ ನಿರ್ಮಲಾ ಸೀತಾರಾಮ ಮೂಡಿಗೆರೆ ಪ್ಲಾಂಟರ್ಸ್ ಕೋರ್ಟಿಗೆ ಆಗಮಿಸಿದ್ದಾಗ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಲಾಗಿತ್ತು. ಆದರೆ ಬೇರೆ ದೇಶಗಳಿಂದ ಮೆಣಸು ಆಮದು ಮಾಡಿಕೊಳ್ಳುತ್ತಿರುವುದರಿಂದ ಭಾರತದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಕೆಲವು ಕ್ರಮಗಳನ್ನು ಕೈಗೊಳ್ಳುವಂತೆ ಬೆಳೆಗಾರರ ಪರವಾಗಿ ಮನವಿ ಸಲ್ಲಿಸಲಾಗಿತ್ತು. ಭಾರತೀಯ ಬೆಳೆಗಾರರ ಹಿತಕಾಯಬೇಕು. ಹಾಗೂ ದೇಶದ ಬೊಕ್ಕಸಕ್ಕೆ ಆಮದು ಶುಲ್ಕ ನಷ್ಟವಾಗುವುದನ್ನು ತಡೆಗಟ್ಟಲು ಒತ್ತಾಯಿಸಿದ್ದಾಗಿ ಹೇಳಿದ್ದಾರೆ.

ವಿದೇಶ ವ್ಯವಹಾರ ನಿಯಮದನ್ವಯ ಶ್ರೀಲಂಕದಿಂದ 2500 ಟನ್ ಮೆಣಸು ಆಮದು ಪರವಾನಗೆಯ ಹೊಣೆ ಮತ್ತು ಜವಾಬ್ದಾರಿಯನ್ನು ಸಂಬಾರಮಂಡಲಿಗೆ ನೀಡಬೇಕು ಹಾಗೂ ಅಮಾದು ಪರವಾನಗಿ 100 ರಷ್ಟು ಬಳಕೆ ಸಾಂಪ್ರದಾಯಕ ಹಾಗೂ ಜೆನ್ಯೂನ್ , ಮೆಣಸು ಆಮಾದುದಾರರಿಗೆ ಪರವಾನಗೆ ನೀಡಲು ಮನವಿ, ಏಷ್ಯನ್ ಮತ್ತು ಶಾರ್ಕ್ ದೇಶಗಳು ನೀಡುವ ಮೂಲ ಧೃಢಿಕರಣ ಪತ್ರವನ್ನು ಆಯಾಯಾ ದೇಶದ ಸಂಬಂಧಿತ ಸಚಿವಾಲಯ ಮತ್ತು ಇಲಾಖೆಗೆ ನಿರ್ದೆಶಕರಿಗೆ ಮಾತ್ರ ನೀಡಬೇಕು, ಟ್ರಡ್ ಅಸೋಶಿಯನ್ ಮತ್ತು ಛೇಂಬರ್ ನೀಡುವ ಪ್ರಮಾಣ ಪತ್ರ ವನ್ನು ಆಮದು ಸಂಬಾರು ಸರಕನ್ನು ಕಸ್ಟಂಸ್ ಅಧಿಕಾರಿಗಳನ್ನು ಒಪ್ಪಿಗೆ ನೀಡುವುದನ್ನು ಪರಿಗಣಿಸಬಾರದು. 

ವಿಯೇಟ್‍ನಾಂನಿಂದ ಬರುವ ಮೆಣಸಿನಲ್ಲಿ ಕೀಟಾನಾಶಕ ಅಂಶ ಕಂಡು ಬಂದ ವರದಿ ಹಿನ್ನೆಲೆಯಲ್ಲಿ ಆಮದು ಸರಕನ್ನು ಎಫ್‍ಎಸ್‍ಎಸ್‍ಎಐ ಸ್ಪಷಿಕೇಶನ್ ಪ್ರಕರ ಪರೀಕ್ಷೆಗೆ ಒಳಪಡಿಸಬೇಕು. ಇದರ ಸ್ಟಾಂಡರ್ಡ್ ಪರಿಶೀಲಿಸದೆ ಇರುವ ಕಾರಣ ಸ್ಥಳಿಯ ಮೆಣಸು ಕೈಗಾರಿಕೆಗೆ ದುಷ್ಪರಿಣಾಮ ಬೀರಿದೆ. ಸಿಐಎಫ್ ವ್ಯಾಲ್ಯೂ ದಾರವನ್ನು 600 ಕನಿಷ್ಟ ಅಮದು ಬೆಲೆ 600 ಇರುವಂತೆ ಪರಿಗಣಿಸಬೇಕು. ಅಲ್ಲದೇ ಏಷ್ಯಾನ್ ಮತ್ತು ಶಾರ್ಕ್ ದೇಶಗಳಿಂದ ಬರುವ ಮೆಣಸಿಗೆ 30 ಆಮದು ಶುಲ್ಕ ವಿಧಿಸಬೇಕು ಎಂದು ಆಗ್ರಹಿಸಿದ್ದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News