ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ವಾಪಸ್: ಅಭಿಮಾನಿಗಳಿಗೆ ಹಬ್ಬದ ಸಂಭ್ರಮ

Update: 2017-09-13 09:37 GMT

ಲಾಹೋರ್, ಸೆ.13: ಎರಡು ವರ್ಷಗಳ ಬಳಿಕ ದೇಶಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ವಾಪಸಾಗಿರುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ ಕಂಡುಬಂತು.

ಮಂಗಳವಾರ ಸಂಜೆ ಬಿಗಿ ಬಂದೋಬಸ್ತ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್ ಇಲೆವೆನ್ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಇಂಡಿಪೆಂಡೆನ್ಸ್ ಡೇ ಸರಣಿಯಲ್ಲಿ ದಕ್ಷಿಣ ಆಫ್ರಿಕದ ನಾಯಕ ಎಫ್‌ಡು ಪ್ಲೆಸಿಸ್ ನೇತೃತ್ವದ ವಿಶ್ವ ಇಲೆವೆನ್ ತಂಡ 20 ರನ್‌ಗಳಿಂದ ಸೋತಿತ್ತು.

 ಪಾಕ್‌ಗೆ ಬಹುದಿನದ ಬಳಿಕ ಕ್ರಿಕೆಟ್ ವಾಪಸಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ವೇಳೆ ಸಾಗರೋಪಾದಿಯಾಗಿ ಗಡ್ಡಾಫಿ ಸ್ಟೇಡಿಯಂನತ್ತ ಕ್ರಿಕೆಟ್ ಅಭಿಮಾನಿಗಳು ಹರಿದುಬಂದರು.

2015ರಲ್ಲಿ ಝಿಂಬಾಬ್ವೆ ತಂಡ ಪಾಕಿಸ್ತಾನಕ್ಕೆ ಸೀಮಿತ ಓವರ್ ಕ್ರಿಕೆಟ್ ಸರಣಿ ಆಡಲು ಪಾಕಿಸ್ತಾನಕ್ಕೆ ಬಂದಿತ್ತು. ಪ್ರಸ್ತುತ ನಡೆಯುತ್ತಿರುವ ವಿಶ್ವ ಇಲೆವೆನ್ ತಂಡದಲ್ಲಿ ಏಳು ರಾಷ್ಟ್ರಗಳ ಆಟಗಾರರಿದ್ದಾರೆ. ಝಿಂಬಾಬ್ವೆ ಮಾಜಿ ಕ್ರಿಕೆಟಿಗ ಆ್ಯಂಡಿ ಫ್ಲವರ್ ತಂಡಕ್ಕೆ ಕೋಚ್ ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News