ಜೂಜಾಟ ಆಡುತ್ತಿದ್ದ 15 ಮಂದಿಯ ಬಂಧನ

Update: 2017-09-13 11:52 GMT

ಬೆಂಗಳೂರು, ಸೆ.13: ವಿಡಿಯೋ ಗೇಮ್ಸ್ ಅಂಗಡಿಯೊಂದರಲ್ಲಿ ಜೂಜಾಟ ಆಡುತ್ತಿದ್ದ ಆರೋಪದ ಮೇಲೆ 15 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಗರದ ಹಸನ್‌ರಾಜ್, ಅಂತೋಣಿ ಸೇರಿದಂತೆ 15 ಜನರನ್ನು ಬಂಧಿಸಿದ್ದು, ಆರೋಪಿಗಳಿಂದ 42 ಸಾವಿರ ರೂ.ನಗದು ವಶಕ್ಕೆ ಪಡೆಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬ್ರಿಗೇಡ್ ರಸ್ತೆ, ಮೋಟಾ ರಾಯಲ್ ಆರ್ಕೆಡ್‌ನಲ್ಲಿ ಪುರದಮ್ಮ ರಿಕ್ರಿಯೇಷನ್ ಅಸೋಸಿಯೇಟ್ಸ್ ಎಂಬ ವಿಡಿಯೋ ಗೇಮ್ಸ್ ಅಂಗಡಿಯಲ್ಲಿ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News