ಗೋಡೆಗಳನ್ನು ಮೀರಿದ ಮಹಿಳೆಯರು

Update: 2017-09-15 18:41 GMT

‘ನಮಗೆ ಗೋಡೆಗಳಿಲ್ಲ’ ಕೃತಿ, ತೆಲುಗಿನ ಫೆಮಿನಿಸ್ಟ್ ಸರ್ಕಲ್ ಮಾಡಿರುವ ಸ್ತ್ರೀವಾದ ಪರಿಚಯ. ಬಿ. ಸುಜ್ಞಾನ ಮೂರ್ತಿಯವರು ಇದನ್ನು ಕನ್ನಡಕ್ಕಿಳಿಸಿದ್ದಾರೆ. ಈ ಪುಸ್ತಕದಲ್ಲಿನ ನಾಲ್ಕು ಪ್ರಬಂಧಗಳಲ್ಲಿ ಮೊದಲನೆಯದು ವಸಂತ ಕಣ್ಣ್ಣಭಿರಾನ್ ಅವರ ‘ಸ್ತ್ರೀವಾದ ಅಂದರೆ ಏನು?’ 1988 ಆಗಸ್ಟ್‌ನಲ್ಲಿ ಕೊಟ್ಟ ಮೊದಲ ಉಪನ್ಯಾಸದ ಪೂರ್ಣಪಾಠ. ಇದರಲ್ಲಿ ಸ್ತ್ರೀ ವಾದದ ವ್ಯಾಖ್ಯಾನ, ಲಿಂಗಭೇದ, ಲೈಂಗಿಕತೆ, ಮಾತೃತ್ವದಂತಹ ಬಹುಮುಖ್ಯವಾದ ವಿಷಯಗಳನ್ನು ಚರ್ಚಿಸಲಾಗಿದೆ. ಎರಡನೆಯ ಪ್ರಬಂಧ ಅಂತಾರಾಷ್ಟ್ರೀಯ ಸ್ತ್ರೀ ವಿಮೋಚನಾ ಚಳವಳಿಯ ಇತಿಹಾಸ’ ಕೆ. ಲಲಿತಾ ಅವರು ಸೆಪ್ಟಂಬರ್‌ನಲ್ಲಿ ನೀಡಿದ ಉಪನ್ಯಾಸ. ಇದರಲ್ಲಿ ಪಾಶ್ಚಾತ್ಯ ದೇಶಗಳಲ್ಲಿ, ಮುಖ್ಯವಾಗಿ ರಷ್ಯಾ, ಚೀನಾ ದೇಶಗಳಲ್ಲಿ ಕ್ರಾಂತಿಯ ಸಂದರ್ಭದಲ್ಲಿ ಎತ್ತಿದ ಸಿದ್ಧಾಂತ ವಿಷಯಗಳು, ಅಮೆರಿಕದಲ್ಲಿ 70ನೆಯ ದಶಕದಲ್ಲಿ ಮಹಿಳೆಯರ ದೃಷ್ಟಿಕೋನದಲ್ಲಿ ಉಂಟಾದ ಕ್ರಾಂತಿಕಾರಕ ಬದಲಾವಣೆಗಳನ್ನುಚರ್ಚಿಸಲಾಗಿದೆ. ಮೂರನೆಯ ಪ್ರಬಂಧ ‘ಸ್ತ್ರೀವಾದಿ ಅರಿವು’ ಓಲ್ಗಾ ಅವರು ನೀಡಿದ ಉಪನ್ಯಾಸ. ಈ ಉಪನ್ಯಾಸದಲ್ಲಿ ಸ್ತ್ರೀವಾದಿ ದೃಷ್ಟಿಕೋನವನ್ನು ಭಾರತದ ದೇಶದ ಮಹಿಳೆಯರ ಅನುಭವದಿಂದ ಪರಿಶೀಲಿಸಲಾಗಿದೆ. ನಾಲ್ಕನೆಯ ಪ್ರಬಂಧ ‘ಮೂರನೆ ಜಗತ್ತಿನ ರಾಷ್ಟ್ರಗಳಲ್ಲಿ ಮಹಿಳೆಯರ ಹೋರಾಟಗಳು’ ರಮಾ ಮೇಲ್ಕೋಟೆಯವರದು. ಇದರಲ್ಲಿ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ನಡೆದ ಸ್ವಾತಂತ್ರ ಹೋರಾಟಗಳಲ್ಲಿ ಮಹಿಳೆಯರ ಪಾತ್ರವನ್ನು ಪರಿಶೀಲಿಸಲಾಗಿದೆ. ಆಯಾ ಹೋರಾಟಗಳಲ್ಲಿ ಮಹಿಳೆಯರ ಹಕ್ಕುಗಳನ್ನು, ಅವರು ಎತ್ತಿದ ಪ್ರಶ್ನೆಗಳನ್ನು ಚರ್ಚಿಸಲಾಗಿದೆ.

ಲಡಾಯಿ ಪ್ರಕಾಶನ, ಗದಗ ಹೊರತಂದಿರುವ ಈ ಕೃತಿಯ ಮುಖಬೆಲೆ 80 ರೂಪಾಯಿ.. 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News