ಎನ್ನೆಸ್ಸೆಸ್ ವ್ಯಕ್ತಿತ್ವ ವಿಕಾಸನಕ್ಕೆ ಸಹಕಾರಿ: ಎಚ್.ಎಸ್. ಅನೀಲ್ ಕುಮಾರ್

Update: 2017-09-15 19:13 GMT

ಹಾಸನ, ಸೆ.15: ರಾಷ್ಟ್ರೀಯ ಸೇವಾ ಯೋಜನೆ ಎಂಬುದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಕ್ಕೆ ಸಹಕಾರಿಯಾಗಲಿದೆ ಎಂದು ನಗರಸಭೆ ಅಧ್ಯಕ್ಷ ಎಚ್.ಎಸ್. ಅನೀಲ್ ಕುಮಾರ್ ತಿಳಿಸಿದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಸರಕಾರಿ ವಿಜ್ಞಾನ ಕಾಲೇಜು ನೂತನ ಕಟ್ಟಡದ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಕಾಲೇಜು ಇವರ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಎರಡು ದಿನದ ಕಾರ್ಯಾಗಾರವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನೆ ಎಂಬುದನ್ನು ಅಂದೆ ಮಹಾತ್ಮ ಗಾಂಧೀಜಿಯವರು ಕಂಡ ಕನಸ್ಸು ಆಗಿತ್ತು. ಇಂದು ಅವರ ಆಸೆಯಂತೆ ಪ್ರಾರಂಭವಾಗಿದೆ. ಇದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನವಾಗುವುದಲ್ಲದೆ ಮುಂದಿನ ಭವಿಷ್ಯ ಕೂಡ ಉಜ್ವಲವಾಗಿರುತ್ತದೆ ಎಂದು ಕಿವಿಮಾತು ಹೇಳಿದರು.

ಎನ್ನೆಸ್ಸೆಸ್  ಎಂಬುದು ಸಮಾಜಕ್ಕೆ ಒಂದು ದೊಡ್ಡ ಶಕ್ತಿ. ಅದರಲ್ಲಿ ರಕ್ತದಾನ ಶಿಬಿರವೂ ಕೂಡ ಸೇರುತ್ತದೆ. ಇಂತಹ ಸೇವೆಯು ಇತರೆ ಜನರಿಗೆ ಸಹಕಾರಿ ಆಗಲಿದೆ ಎಂದರು. ಇದರಿಂದ ಸಾಂಸ್ಕೃತಿ ಕ ಚಟುವಟಿಕೆ ವೇದಿಕೆಗಳಲ್ಲಿ. ಇತರೆ ಸ್ಪರ್ಧೆಗಳಲ್ಲಿ ಸೇರಿದಂತೆ ಜೀವನದ ಶೈಲಿಗೂ ಉತ್ತಮ ಸೇತುವೆ ಆಗಿದೆ. ಕಾಲೇಜಿನಿಂದ ಯಾವ ಹಳ್ಳಿಗಳಲ್ಲಿ ಎನ್.ಎಸ್.ಎಸ್. ಶಿಬಿರ ಹಮ್ಮಿಕೊಳ್ಳುತ್ತಾರೆ ಅಲ್ಲಿ ಒಂದು ರೀತಿ ಹಬ್ಬದ ವಾತವರಣವೇ ಸೃಷ್ಠಿಯಾಗುತ್ತದೆ. ಸಂಘಟನೆ ಮಾಡುವುದು, ಜಾತ್ಯಾತೀತ ಭಾವನೆ ಹಾಗೂ ಲಿಂಗಭೇದವಿಲ್ಲದೆ ಮಕ್ಕಳಲ್ಲಿ ಒಳ್ಳೆಯ ವ್ಯಕ್ತಿತ್ವ ಬೆಳೆಸುವ ಕನಸ್ಸು ಗಾಂಧೀಜಿಯವರದಾಗಿತ್ತು ಎಂದು ಹೇಳಿದರು.

ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಮೈಸೂರಿನ ಚಂದ್ರಶೇಖರ್ ಪ್ರಾಸ್ತವಿಕ ನುಡಿಯಲ್ಲಿ ಮಾತನಾಡುತ್ತಾ, ಎನ್ನೆಸ್ಸೆಸ್ ದೈಹಿಕ ಚಟುವಟುಕೆಯಲ್ಲಿ ತೊಡಗಿಸುವುದು. ಜೊತೆಗೆ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ, ಆಲೋಚನೆಗಳೂ ತಮ್ಮನ್ನು ತಾವು ಜಾಗೃತಗೊಳಿಸುವುದಲ್ಲದೆ ಇತರರಿಗೆ ಅರಿವು ಮೂಡಿಸಲು ಸಹಕಾರಿ ಆಗುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದರು.

ಕಾರ್ಯಾಗಾರದಲ್ಲಿ ಕರ್ನಾಟಕ ಗಾಂಧಿ ಸಂರಕ್ಷಣಾ ನಿಧಿ ಬೆಂಗಳೂರಿನ ಜಿ.ಬಿ. ಶಿವರಾಜು, ಸರಕಾರಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಎಸ್.ಹೆಚ್. ಗಂಗೇಗೌಡ, ಎನ್.ಎಸ್.ಎಸ್. ಘಟಕ-1 ಅಧಿಕಾರಿ ಸಿ.ಎಸ್. ಮೋಹನ್, ಆಂತರಿಕ ಗುಣಮಟ್ಟ ಕೊಶ ಸಂಚಾಲಕ ಅಬ್ದೂಲ್ ರಹಿಮಾನ್ ಇತರರು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಘಟಕ-2 ಹೆಚ್.ಕೆ. ಸೌಮ್ಯ ಅವರು ಸ್ವಾಗತಿಸಿದರು. ಗಂಗಾಧರ್ ರೈತಗೀತೆ ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News