ರಫ್ತು ಪ್ರಶಸ್ತಿಗೆ ಅರ್ಜಿ ಆಹ್ವಾನ

Update: 2017-09-18 12:44 GMT

ಚಾಮರಾಜನಗರ, ಸೆ. 18. :  ರಾಜ್ಯ ಸರ್ಕಾರ ರಫ್ತುದಾರರನ್ನು ಉತ್ತೇಜಿಸುವ ಸಲುವಾಗಿ ನೀಡಲಿರುವ 2015-16ನೇ ಸಾಲಿನ ಶ್ರೇಷ್ಠ ರಫ್ತುದಾರ ಪ್ರಶಸ್ತಿಗೆ ಜಿಲ್ಲೆಯ ಸಣ್ಣ ಮತ್ತು ಭಾರಿ, ಅತಿ ಸಣ್ಣ, ಮದ್ಯಮ ಕೈಗಾರಿಕೆಗಳಿಂದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅರ್ಜಿ ಆಹ್ವಾನಿಸಿದೆ.

ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳು (ಕಾಫಿ, ಗೋಡಂಬಿ, ಸಾಂಬಾರ ಪದಾರ್ಥಗಳನ್ನು ಒಳಗೊಂಡು), ಸಿದ್ಧ ಉಡುಪುಗಳು (ಹತ್ತಿ, ಉಣ್ಣೆ, ರೇಷ್ಮೆ ಒಳಗೊಂಡು), ಖನಿಜಗಳು ಮತ್ತು ಖನಿಜ ಮೂಲಕ ಉತ್ಪನ್ನಗಳು (ಕಬ್ಬಿಣ ಅದಿರು ಹೊರತುಪಡಿಸಿ), ಜವಳಿ ಉತ್ಪನ್ನಗಳು (ಹತ್ತಿ, ಉಣ್ಣೆ, ರೇಷ್ಮೆ ಒಳಗೊಂಡು), ಪೆಟ್ರೋಲಿಯಂ ಹಾಗೂ ಇದರ ಉತ್ಪನ್ನಗಳು, ರತ್ನ ಮತ್ತು ಆಭರಣಗಳು, ಚರ್ಮದ ಉತ್ಪನ್ನಗಳು, ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ಸ್ (ಐಟಿ, ಬಿಟಿ ಮತ್ತು ಐಟಿಇಎಸ್ ವಲಯ ಹೊರತುಪಡಿಸಿ), ವಿದ್ಯುತ್ ಸಲಕರಣೆಗಳು, ಕರಕುಶಲ ವಸ್ತುಗಳು (ಕಲೆ, ಕ್ರಾಫ್ಟ್ ಒಳಗೊಂಡಂತೆ), ಎಂಜಿನಿಯರಿಂಗ್ ಉತ್ಪನ್ನಗಳು (ಮೆಷಿನ್ ಟೂಲ್ಸ್, ಆಟೋಮೊಬೈಲ್, ಏರೋಸ್ಪೇಸ್ ಒಳಗೊಂಡಂತೆ), ರಾಸಾಯನಿಕ ಮತ್ತು ಪ್ಲಾಸ್ಟಿಕ್ ಉತ್ಪನ್ನಗಳು, ಸಾಗರೋತ್ಪನ್ನಗಳು, ಸೇವೆಗಳು (ಪ್ರವಾಸೋದ್ಯಮ, ಆರೋಗ್ಯ, ಶಿಕ್ಷಣ, ಆತಿಥ್ಯ ಮತ್ತು ಎಂಜಿನಿಯರಿಂಗ್), ಕೈಗಾರಿಕೆಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ನಮೂನೆಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿನಿರ್ದೇಶಕರ ಕಚೇರಿ (ಕೊಠಡಿ ಸಂಖ್ಯೆ 323 ಹಾಗೂ 324)ಯಲ್ಲಿ ಅಥವಾ ವೆಬ್ ಸೈಟ್ , https://www.vtpckarnataka.co.in, www.kctu.kar.nic.in ನಿಂದ ಪಡೆಯಬಹುದು.

ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 25ರೊಳಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ನಗರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News