ಸೆ.22 ರಂದು ವಾಲ್ಮೀಕಿ ಸಮಾಜದ ಸಭೆ

Update: 2017-09-19 11:16 GMT

ಹಾಸನ, ಸೆ.19: ನಗರದ ಅರಸೀಕೆರೆ ಜಲಜಾಕ್ಷಿ ಕಲ್ಯಾಣ ಮಂಟಪದಲ್ಲಿ ಸೆಪ್ಟಂಬರ್ 22 ರಂದು ವಾಲ್ಮೀಕಿ ಸಮಾಜದ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಬಿ.ಆರ್. ಪ್ರಕಾಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಅಕ್ಟೋಬರ್ 5 ರಂದು ವಿಧಾನ ಸೌಧದ ಪಶ್ಚಿಮ ಭಾಗದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗುವುದು. ಎರಡು ಎಕರೆ ಜಾಗವನ್ನು ಇದಕ್ಕಾಗಿ ಮೀಸಲಾಗಿರಿಸಲಾಗಿದೆ. ಇದರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಾಲ್ಮೀಕಿ ಮಹಾ ಸಂಸ್ಥಾನದ ಗುರುಪೀಠದ ಶ್ರೀ ಪ್ರಸಾನಂದ ಪುರಿ ಸ್ವಾಮೀಜಿ ಹಾಗೂ ಕರ್ನಾಟಕ ಸರಕಾರದ ಸಹಕಾರ ಸಚಿವರು ಮತ್ತು ಸಮಾಜದ ಮುಖಂಡರು ರಮೇಶ್ ಜಾರಕೀಹೋಳಿ, ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ವಾಲ್ಮೀಕಿ ಸಮಾಜದ ಮುಖಂಡರ ಸಭೆಯನ್ನು ಸೆಪ್ಟಂಬರ್ 22ರಂದು ಅರಸೀಕೆರೆ ಜಲಜಾಕ್ಷಿ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದೆ ಎಂದರು.

ಈ ಸಭೆಗೆ ವಾಲ್ಮೀಕಿ ಸಮಾಜದ ನೌಕರರು, ಸಮಾಜದ ಎಲ್ಲಾ ಮುಖಂಡರು ಹಾಗೂ ಜನಪ್ರತಿನಿಧಿಗಳು ಎಲ್ಲಾ ತಾಲೂಕಿನ ಸಮಾಜದ ಸಂಘ ಸಂಸ್ಥೆಯವರು, ಯುವಕರು, ವಿದ್ಯಾರ್ಥಿಗಳು ಭಾಗವಹಿಸಿ ಸಭೆಯನ್ನು ಯಶಸ್ವಿವಿಗೊಳಿಸಲು ಮನವಿ ಮಾಡಿದರು. 

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಗೌರವಧ್ಯಕ್ಷ ಬಿ.ಒ. ಮಹಾಂತಪ್ಪ, ಮುಖಂಡ ದೇವರಾಜು, ಶ್ರೀನಿವಾಸ್ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News