ಸೊರಬ: ದಸರಾ ಉತ್ಸವ ಸಮಿತಿ ಪೂರ್ವ ಭಾವಿ ಸಭೆ

Update: 2017-09-20 18:39 GMT

ಸೊರಬ, ಸೆ.20: ಪ್ರತೀ ವರ್ಷದಂತೆ ಈ ವರ್ಷವು ಕೂಡ ನಾಡಹಬ್ಬ ದಸರಾವನ್ನು ತಾಲೂಕು ಆಡಳಿತ ಪಟ್ಟಣ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರದಿಂದ  ಪಟ್ಟಣದಲ್ಲಿ ಸಂಭ್ರಮ ಸಡಗರದೊಂದಿಗೆ ಅತೀ ವಿಜ್ರಂಭಣೆಯಿಂದ ನಡೆಸಲಾಗುವುದು ಎಂದು ದಸರಾ ಉತ್ಸವ ಸಮಿತಿ ಅಧ್ಯಕ್ಷ ಮಧುರಾಯ ಜಿ. ಶೇಟ್ ತಿಳಿಸಿದರು. 

ಬುಧವಾರ ಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ನಡೆದ ದಸರಾ ಉತ್ಸವ ಸಮಿತಿ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. 
ಗುರುವಾರ ಬೆಳಗ್ಗೆ ದೇವಿಯ ಪ್ರತಿಷ್ಠಾಪನೆ ನಡೆಯುತ್ತದೆ. ಸೆ.27 ರಂದು ಬೆಳಗ್ಗೆ 6.30ರಿಂದ ಲೋಕಕಲ್ಯಾಣಕ್ಕಾಗಿ ಮತ್ತು ದೇವಿಯ ಅನುಗ್ರಹಕ್ಕಾಗಿ ಚಂಡಿಕಾ ಹೋಮ ನೆರವೇರಲಿದ್ದು. ನಂತರ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ ಎಂದರು.

ಮೊದಲ ದಿನದ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ.ಡಾ.ಮಹಾಂತ ಸ್ವಾಮಿಗಳು ಸಂಸ್ಥಾನ ಮಠ ಜಡೆ ಇವರು ನೆರವೇರಲಿಸದ್ದಾರೆ. ಈ ಸಂಧರ್ಭದಲ್ಲಿ ಶಾಸಕರಾದ ಶ್ರೀ ಎಸ್ ಮಧುಬಂಗಾರಪ್ಪನವರು ಉಪಸ್ಥಿತರಿರುವರು. ಪ್ರತಿದಿನ ಸಂಜೆ ಕಲಾವಿದರಿಂದ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು. ಸೆಪ್ಟಂಬರ್30ರ ಶುಕ್ರವಾರ ಶ್ರೀ ದೇವಿಯ ವೈಭವಯುತ ಮೆರವಣಿಗೆ ನಡೆಯಲ್ಲಿದೆ. ಬಯಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬನ್ನಿ ಮುಡಿಯುವಿಕೆ ಕಾರ್ಯಕ್ರಮದಲ್ಲಿ ಶಾಸಕ ಮಧುಬಂಗಾರಪ್ಪನವರು ಪಾಲ್ಗೊಂಳ್ಳಲಿದಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಪಪಂ ಅಧ್ಯಕ್ಷೆ ಬಿ.ಬಿ.ಝುಲೇಖಾ, ಉಪಾಧ್ಯಕ್ಷೆ ರತ್ನಮ್ಮ, ಮಂಚಿ ಹನುಮಂತಪ್ಪ, ಸವಿತಾ ಎಂ, ಭಟ್, ದಿನಕರ ಭಾವೆ, ಸುಬ್ಬಣ್ಣ ಗುಡಿಗಾರ್, ಗುರುಮೂರ್ತಿ ಹೆಚ್, ದೀಪಕ್ ಡೋಂಗ್ರೆ, ನೆಮ್ಮದಿ ಸುಬ್ಬು, ಷಣ್ಮುಖಾಚರ್, ಸಿದ್ದಬಸಪ್ಪ, ಬೆನವಪ್ಪ, ಯೋಗೀಶ್, ರೇವಣಕುಮಾರ್ ಇತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News