ಮಹಾತ್ಮರ ಹೋಲಿಕೆ ಸಲ್ಲದು

Update: 2017-09-21 18:36 GMT

ಮಾನ್ಯರೆ,

ರಾಜ್ಯದಲ್ಲಿ 2018ಕ್ಕೆ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ಇನ್ನೇನು ಆರೇಳು ತಿಂಗಳು ಮಾತ್ರ ಬಾಕಿ ಉಳಿದಿರುವುದರಿಂದ ರಾಜಕೀಯ ಪಕ್ಷಗಳು ರಾಜ್ಯಾದ್ಯಂತ ರಾಜಕೀಯ ಸಮಾವೇಶಗಳನ್ನು ಹಮ್ಮಿಕೊಂಡು ತಮ್ಮ ತಮ್ಮ ಪಕ್ಷಗಳ ಬಲವರ್ಧನೆಗೆ ಹಾಗೂ ಈ ಬಾರಿ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರಲು ಮತದಾರರನ್ನು ಸೆಳೆಯಲು ಹಲವು ಬಗೆಯ ಕಸರತ್ತು ಆರಂಭಿಸಿವೆ.

ಆದರೆ ವಿಷಾದಕರ ಸಂಗತಿ ಏನೆಂದರೆ ರಾಜಕೀಯ ಸ್ವಾರ್ಥ ಸಾಧನೆಗಾಗಿ ಮತ್ತು ಅಧಿಕಾರದ ದುರಾಸೆಗಾಗಿ ಭ್ರಷ್ಟಾಚಾರ, ಅತ್ಯಾಚಾರ, ಕೊಲೆ ಒಳಗೊಂಡಂತೆ ಹಲವು ಅಪರಾಧದಡಿ ಜೈಲಿಗೆ ಹೋಗಿ ಬಂದು ಚುನಾವಣೆಯಲ್ಲಿ ಗೆಲುವು ಸಾಧಿಸಲು ಜನರಲ್ಲಿ ಜಾತಿ, ಮತ, ಪಂಥ ಭೇದದಡಿ ಸಮಾಜವನ್ನು ಒಡೆದು ಕೋಮು ಗಲಭೆಗೆ ಪ್ರಚೋದಿಸುವ ರಾಜಕೀಯ ಮುಖಂಡರನ್ನು ರಾಜಕೀಯ ಸಮಾವೇಶಗಳಲ್ಲಿ ಸಾಮಾಜದ ಸುಧಾರಣೆಗಾಗಿ ಹೋರಾಡಿದ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಇನ್ನಿತರ ಸಂತರಿಗೆ ಹೋಲಿಕೆ ಮಾಡಿ ವೈಭವೀಕರಿಸುವುದು ಎಷ್ಟರ ಮಟ್ಟಿಗೆ ಸರಿ? ಇಂದಿನ ರಾಜಕೀಯ ಮುಂಖಡರು ಸಮಾಜ ಪರಿವರ್ತನೆ ಮಾಡಿದ ಅಂತ ಮಹಾತ್ಮರ ಹೆಸರು ಹೇಳಲು ಕೂಡಾ ಅನರ್ಹರಾಗಿರುವಾಗ ರಾಷ್ಟ್ರೀಯ ನಾಯಕರಿಗೆ ಹೋಲಿಕೆ ಸಲ್ಲದು.

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News