ಮೃತನ ಕುಟುಂಬಕ್ಕೆ10 ಲಕ್ಷ ರೂ. ಪರಿಹಾರ ನೀಡುವಂತೆ ಒತ್ತಾಯಿಸಿ ಸಿಎಂಗೆ ಮನವಿ

Update: 2017-09-21 18:38 GMT

ಮುಂಡಗೋಡ, ಸೆ.21: ಭಟ್ಕಳದಲ್ಲಿ ಮೃತನಾದ ರಾಮಚಂದ್ರ ನಾಯಕ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವಂತೆ ಹಾಗೂ ರೋಹಿಂಗ್ಯ ಮುಸ್ಲಿಂ ನುಸುಳುಕೋರರನ್ನು ಪತ್ತೆಹಚ್ಚಿ ಭಾರತದಿಂದ ಹೊರಹಾಕಬೇಕೆಂದು ಒತ್ತಾಯಿಸಿ ಬಿಜೆಪಿ ತಾಲೂಕಾ ಘಟಕ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ಭಟ್ಕಳದಲ್ಲಿ ಸಣ್ಣ ಅಂಗಡಿ ಹೊಂದಿದ ಕೆಲವರನ್ನು ಬಿಡಿಸುವ  ಹುನ್ನಾರದಿಂದ ಬಾಡಿಗೆಯನ್ನು ವಿಪರಿತ ಏರಿಸಲಾಯಿತು. ಇದರಿಂದ ಹಲವಾರು  ಬಾರಿ ನಗರ ಸಭೆ ಅಧಿಕಾರಿಗಳಿಗೂ ಜಿಲ್ಲಾ ಆಡಳಿತಕ್ಕೂ ಸ್ಥಳೀಯರು ಮನವಿ ಮಾಡಿಕೊಂಡ ಬಳಿಕ ಸದ್ರಿ ಅಂಗಡಿಕಾರರನ್ನು ಹೆದರಿಸಿ ಬೆದರಿಸಿ ಅಂಗಡಿ ತೆರವುಗೊಳಿಸಿ ಸಾಕಷ್ಟು ಜನರನ್ನು ಜಿಲ್ಲಾ ಆಡಳಿತ ಬೀದಿ ಪಾಲು ಮಾಡಿತ್ತು.  ಜೀವನೋಪಾಯಕ್ಕೆ  ಏನೆಂದು ತೋಚದೆ ಏನೂ ಮಾಡಲಾಗದೇ ದೃತಿಗೆಟ್ಟ ರಾಮಚಂದ್ರ ನಾಯ್ಕ ಪ್ರತಿ ಭಟಿಸಿ ಸಾವಿಗೀಡಾದರು. ಇದಕ್ಕೆ ಪರಿಹಾರವಾಗಿ ಸರರ್ಕಾವು ಕೂಡಲೇ ಹತ್ತು ಲಕ್ಷ ರೂ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ಮುಂಡಗೋಡ ಭಾಜಪ ಘಟಕ ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ ಎಂದು ತಹಶೀಲ್ದಾರರಿಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.

ತಾಲೂಕ ಬಿಜೆಪಿ ಅಧ್ಯಕ್ಷ ಗುಡ್ಡಪ್ಪ ಕಾತೂರ, ಮಾಜಿ ಶಾಸಕ ವಿ.ಎಸ್.ಪಾಟೀಲ, ಪ.ಪಂ ಸದಸ್ಯ ರಾಯ್ಕರ, ಗುರು ಕಾಮತ, ಉಮೇಶ ಬಿಜಾಪುರ, ಜಿಲ್ಲಾ ಎಸ್.ಸಿ ಯುವಮೊರ್ಚಾ ಆಧ್ಯಕ್ಷ ಅಶೋಕ ಚಲವಾದಿ ವಿಠ್ಠಲ ಬಾಳಂಬೀಡ, ಡಿ.ಜೆ.ಕುಲಕರ್ಣಿ, ಸುಮನ ಕುಲಕರ್ಣಿ, ಮಲ್ಲಿಕಾರ್ಜುನ ಗೌಳಿ, ಶರೀಫ ಮುಗಳಗಟ್ಟಿ, ರಮೇಶ ಸವಣೂರ ಮುಂತಾದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News