ಬಿಜೆಪಿಯ ಎರಡು ಬಣದ ಪೂರ್ವಭಾವಿ ಸಭೆ: ಗೊಂದಲದಲ್ಲಿ ಕಾರ್ಯಕರ್ತರು

Update: 2017-09-22 06:30 GMT

ಹನೂರು, ಸೆ. 22: ಪಟ್ಟಣದ ಆರ್.ಎಂ.ಸಿ ಆವರಣದಲ್ಲಿ ಹಾಗೂ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಒಂದೇ ಸಮಯದಲ್ಲಿ ನೆಡೆದ ಬಿಜೆಪಿಯ ಎರಡು ಬಣದ ಪೂರ್ವಭಾವಿ ಸಭೆಗೆ  ಯಾವ ಸಭೆಯಲ್ಲಿ ಭಾಗವಹಿಸಬೇಕು ಎಂಬ ಗೊಂದಲ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಹನೂರು ಕಾರ್ಯಕರ್ತರಲ್ಲಿ ಮೂಡಿದೆ.

ಇತ್ತಿಚ್ಚಿಗೆ ಚಾಮರಾಜನಗರ ಜಿಲ್ಲಾ ಉಸ್ತುವಾರಿಯಾಗಿ ಆಯ್ಕೆಯಾದ ವಿ. ಸೋಮ್ಮಣ್ಣ ಮತ್ತು ಸಹ ಉಸ್ತುವಾರಿ ರಾಮದಾಸ್ ಹಾಗೂ ಹಿರಿಯ ಮುಖಂಡ ರಾದ  ವಿ .ಶ್ರೀನಿವಾಸ್‌ ಪ್ರಸಾದ್ ಇದೇ ಪ್ರಪಥಮ ಭಾರಿಗೆ ಚಾಮರಾಜನಗರ ಪಟ್ಟಣದ ಜಿಲ್ಲಾ ಕೇಂದ್ರದಲ್ಲಿ ನೆಡೆಯುವ ಅಭಿನಂದನಾ ಸಮಾರಂಭದ ಕುರಿತು ಚರ್ಚೆಯ ಪೂರ್ವಭಾವಿ ಸಭೆ  ಹನೂರು ಪಟ್ಟಣದಲ್ಲಿ ಆಯೋಜಿಸಲಾಗಿತ್ತು . ಆದರೆ ಒಂದೆ ವಿಷಯದ ಚರ್ಚೆ ಎರಡು ಬಣದ ಕಾರ್ಯಕ್ರಮದ ಸಭೆಯ ನೆಡವಳಿಯಾಗಿತ್ತು . ಒಂದು ಸಭೆ ಆರ್.ಎಂ.ಸಿ ಆವರಣದಲ್ಲಿ ಹಾಗೂ ಮತ್ತೊಂದು ಸಭೆ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಒಂದೇ ಕಾಲಮಾನ ಅವಧಿಯಲ್ಲಿ ನೆಡೆದಿದೆ.

ಪ್ರತ್ಯೇಕ ಬಣಗಳಸಭೆ ಒಂದೇ ಸಮಯಕ್ಕೆ: ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ಮಾಜಿ ಶಾಸಕಿ ಪರಿಮಳ ನಾಗಪ್ಪನವರ ಅಧ್ಯಕ್ಷತೆಯಲ್ಲಿ ಪಟ್ಟಣದ ಆರ್.ಎಂ.ಸಿ,ಆವರಣದ ಮುಂಭಾಗ ನೆಡದ ಕಾರ್ಯಕ್ರಮದಲ್ಲಿ ಅಭಿನಂದನಾ ಸಮಾರಂಭಕ್ಕೆ ಕ್ಷೇತ್ರದಿಂದ ಕೇವಲ ಬೆರಳೆಣಿಕೆಯ ಕಾರ್ಯಕರ್ತರು ಆಗಮಿಸಿದ್ದು ಹಲವಾರು ಅನುಮಾನಕ್ಕೆ ಎಡೆಮಾಡಿಕೂಟ್ಟಿದ್ದು . ಆದರೆ ಕೆಲ ಮುಖಂಡರು ಸಭೆಯಿಂದ ಅರ್ಧಕ್ಕೆ ಮೊಟಕುಗೂಳಿಸಿ ಹೋದ ಪ್ರಸಂಗವು ಸಹ  ಜರುಗಿತು. ಇದೇ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಮಹ ದೇವಪ್ರಸಾದ್ ,ಕುಡ್ಲೂರು ರಾಜಣ್ಣ , ಡಿ ಕೆ ರಾಜು , ಲೊಕ್ಕನಳ್ಳಿ ಚಿನ್ನಸ್ವಾಮಿ , ಬೈರನಾಥ ಮಹೇಶ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News