ಆರು ಬ್ಯಾಂಕ್‍ಗಳ ಚೆಕ್‍ಬುಕ್ ಸೆ.30ರ ನಂತರ ಅಮಾನ್ಯ

Update: 2017-09-22 07:20 GMT

ತೃಶೂರ್, ಸೆ. 22: ಎಪ್ರಿಲ್ ಒಂದರಂದು ಸ್ಟೇಟ್ ಬ್ಯಾಂಕ್‍ನೊಂದಿಗೆ ವಿಲೀನಗೊಂಡ ಆರು ಬ್ಯಾಂಕ್‍ಗಳ ಹಳೆಯ ಚೆಕ್ ಬುಕ್ ಸೆಪ್ಟೆಂಬರ್ 30ರಿಂದ ಅಮಾನ್ಯಗೊಳ್ಳಲಿದೆ.  ಹಳೆಯ ಇಟ್ಟುಕೊಂಡಿರುವವರು ಕೂಡಲೇ ಸ್ಟೇಟ್‍ಬ್ಯಾಂಕ್ ಚೆಕ್ ಬುಕ್‍ಗೆ ಅರ್ಜಿ ಸಲ್ಲಿಸಬೇಕು. ಇದರೊಂದಿಗೆ ಹಳೆಯ ಐಎಫ್‍ಎಸ್ ಕೋಡ್ ಕೂಡಾ ಬದಲಾವಣೆಗೊಳ್ಳಲಿದೆ. 

ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್, ಸ್ಟೇಟ್ ಬ್ಯಾಂಕ್ ಅಫ್ ಪಟ್ಯಾಲ, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್-ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಮತ್ತು ಭಾರತೀಯ ಮಹಿಳಾ ಬ್ಯಾಂಕ್‍ನ ಚೆಕ್ ಬುಕ್ ಅಮಾನ್ಯಗೊಳ್ಳಲಿದೆ. ಆನ್‍ಲೈನ್ ಮೂಲಕ ಮತ್ತು ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚೆಕ್ ಬುಕ್‍ಗಳು ಸಿಗುತ್ತವೆ. ತಮ್ಮ ವ್ಯವಹಾರಗಳಲ್ಲಿ ಹೊಸ ಐಎಫ್‍ಎಸ್ ಕೋಡ್ ಉಪಯೋಗಿಸುವತ್ತ ಗಮನಹರಿಸಬೇಕೆಂದು ಎಸ್‍ಬಿಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News