ಎಂಆರ್ ಪಿಎಲ್ ನಲ್ಲಿ ಉದ್ಯೋಗಾವಕಾಶ

Update: 2017-09-22 13:26 GMT

ಮಂಗಳೂರು, ಸೆ. 22: ದೇಶದ ಪ್ರಮುಖ ಇಂಧನ ಸಂಸ್ಥೆಯಾಗಿರುವ ಎಂಆರ್‌ಪಿಎಲ್‌ನಲ್ಲಿ ಸಾಕಷ್ಟು ಉದ್ಯೋಗಾವಾಕಾಶಗಳು ಲಭ್ಯವಿದ್ದು, ಆಸಕ್ತ ವೃತ್ತಿಪರರು ಜಿಎಟಿಇ- 2017 ಪರೀಕ್ಷೆಗಳ ಮೂಲಕ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ.

ಜಿಎಟಿಎ- 2017 ಪರೀಕ್ಷೆಗಳ ಮೂಲಕ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಇಂಜಿನಿಯರಿಂಗ್‌ನ ಕೆಮಿಕಲ್ ವಿಭಾಗದಲ್ಲಿ 23 ಹುದ್ದೆಗಳು ಲಭ್ಯವಿದ್ದು, ಜಿಎಟಿಇ- 2017 ಪೇಪರ್ ಮತ್ತು ಕೋಡ್ ಕೆಮಿಕಲ್ ಇಂಜಿನಿಯರಿಂಗ್ (ಸಿಎಚ್) ಆಗಿರುತ್ತದೆ. ವಿದ್ಯಾರ್ಹತೆ -ಕೆಮಿಕಲ್ ಇಂಜಿನಿಯರಿಂಗ್ ಅಥವಾ ಕೆಮಿಕಲ್ ಟೆಕ್ನಾಲಜಿ ಅಥವಾ ಪೆಟ್ರೋಕೆಮಿಕಲ್ ಇಂಜಿನಿಯರಿಂಗ್ ಅಥವಾ ಪೆಟ್ರೋಕೆಮಿಕಲ್ ತಂತ್ರಜ್ಞಾನ ಪದವೀಧರರು.

ಮೆಕ್ಯಾನಿಕಲ್ ವಿಭಾಗದಲ್ಲಿ 36 ಹುದ್ದೆಗಳಿದ್ದು, ಜಿಎಟಿಇ- 2017 ಪೇಪರ್‌ಗಳು ಮತ್ತು ಕೋಡ್ ಮೆಕ್ಯಾನಿಕಲ್ ಇಂಜಿನಿಯರಿಂಗ್ (ಎಂಇ) ಆಗಿರುತ್ತದೆ ವಿದ್ಯಾರ್ಹತೆ -ಮೆಕ್ಯಾನಿಕ್ ಇಂಜನಿಯರಿಂಗ್ ಪದವೀಧರರು.

ಇಲೆಕ್ಟ್ರಿಕಲ್ ವಿಭಾಗದಲ್ಲಿ 2 ಹುದ್ದೆಗಳಿದ್ದು, ಜಿಎಟಿಇ- 2017 ಪೇಪರ್‌ಗಳು ಹಾಗೂ ಕೋಡ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ (ಇಇ) ಆಗಿದ್ದು, ಇಲೆಕ್ಟ್ರಿಕಲ್ ಇಂಜಿನಿಯರ್ ಅಥವಾ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ ಇಂಜನಿಯರಿಂಗ್ ಪದವಿ ವಿದ್ಯಾರ್ಹತೆ ಹೊಂದಿರಬೇಕು.

ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದಲ್ಲಿ 5 ಹುದ್ದೆಗಳಿದ್ದು, ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್ (ಇಸಿ) ಕೋಡ್ ಆಗಿರುತ್ತದೆ. ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ಅಥವಾ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಅಥವಾ ಇಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ಸ್ ಇಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪಡೆದಿರಬೇಕು. 

ಸಿವಿಲ್ ವಿಭಾಗದಲ್ಲಿ ಎಂಟು ಹುದ್ದೆಗಳಿದ್ದು, ಸಿವಿಲ್ ಇಂಜಿನಿಯರಿಂಗ್ (ಸಿಇ) ಕೋಡ್ ಆಗಿರುತ್ತದೆ. ವಿದ್ಯಾರ್ಹತೆ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಗಳಿಸಿರಬೇಕು. 

ಮೇಲೆ ಸೂಚಿಸಲಾದ ನಿರ್ದಿಷ್ಟ ಪದವಿಗಳನ್ನು ಹೊಂದಿರುವವರು ಅಭ್ಯರ್ಥಿಗಳು ಮಾತ್ರವೇ ಅರ್ಜಿ ಸಲ್ಲಿಕೆಗೆ ಅರ್ಹರಾಗಿರುತ್ತಾರೆ. ತತ್ಸಮಾನ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ ಎಂದು ಕಂಪನಿ ಪ್ರಕಟನೆ ತಿಳಿಸಿದೆ.

ಅರ್ಜಿ ಸಲ್ಲಿಸಲು ಅಕ್ಟೋಬರ್ 19 ಕೊನೆಯ ದಿನವಾಗಿರುತ್ತದೆ. ಆನ್‌ಲೈನ್ ಪೋರ್ಟಲ್ ಈಗಾಗಲೇ ತೆರೆದಿದ್ದು, ಜಿಎಟಿಇ- 2017ನಲ್ಲಿ ಪಡೆಯಲಾಗುವ ಅಂಕಗಳ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಈ ಹಿಂದಿನ ಯಾವುದೇ ಪರೀಕ್ಷೆಗಳು ಮೌಲ್ಯವಾಗಿರುವುದಿಲ್ಲ. ಮೇಲೆ ತಿಳಿಸಲಾದ ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು, ಅವುಗಳ ಸಂಖ್ಯೆಯಲ್ಲಿ ಏರಿಕೆ ಅಥವಾ ಇಳಿಕೆ ಮಾಡುವ ವಿವೇಚನೆ ಆಡಳಿತ ಮಂಡಳಿಯದ್ದಾಗಿರುತ್ತದೆ. ಅರ್ಜಿಯನ್ನು ಆನ್‌ಲೈನ್ ಮೂಲಕವೇ ಸಲ್ಲಿಸತಕ್ಕದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News