ಸ್ವ ಸಹಾಯ ಸಂಘದ ಕುಟುಂಬಗಳ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕ್‍ಗಳ ಪಾತ್ರ ಮಹತ್ತರ: ಎಂ.ಐ ಗಣಗಿ

Update: 2017-09-22 18:39 GMT

ಹನೂರು, ಸೆ.22: ತಾಲೂಕಿನ ಬೆಟ್ಟಳ್ಳಿ ಮಾರಮ್ಮನ ಕಲ್ಯಾಣ ಮಂಟಪದಲ್ಲಿ ಸಿಂಡಿಕೇಟ್ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ಸ್ವ ಸಹಾಯ ಸಂಘಗಳ ಸಮಾವೇಶ ಮತ್ತು ಸಾಲ ವಿತರಣಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ನಬಾರ್ಡ್‍ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಂ.ಐ ಗಣಗಿ ಮಾತನಾಡಿದ ಅವರು, ಸ್ವ ಸಹಾಯ ಸಂಘದ ಕುಟುಂಬಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಬ್ಯಾಂಕ್‍ಗಳ ಪಾತ್ರ ದೊಡ್ಡದು ಎಂದು ತಿಳಿಸಿದರು. 

1989 ರಿಂದ 1992 ತನಕ ನಬಾರ್ಡ್ ಮತ್ತು ಮೈರಾಡ ಸರ್ಕಾರೇತರ ಸಂಸ್ಥೆಯ ಜೊತೆಗೂಡಿ ಹಲವಾರು ಪ್ರಯೋಗಗಳ ಮೂಲಕ ಸ್ವ ಸಹಾಯ ಸಂಘದ ಮೂಲ ಪರಿಕಲ್ಪನೆ ತರಲಾಯಿತು. 1992 ರಲ್ಲಿ ನಬಾರ್ಡ್ ಸಂಸ್ಥೆಯು ಸುಮಾರು 500 ಸ್ವ ಸಹಾಯ ಸಂಘಗಳಿಗೆ ಯಾವುದೇ ಆಧಾರವಿಲ್ಲದೇ ಸಾಲ ನೀಡಲು ಬ್ಯಾಂಕುಗಳಿಗೆ ಆದೇಶ ನೀಡಲಾಯಿತು. ಈಗ ದೇಶದಲ್ಲಿ 90 ಲಕ್ಷ ಸ್ವ ಸಹಾಯ ಸಂಘಗಳಿವೆ. ಬ್ಯಾಂಕಿನಿಂದ ದೊರೆಯುವ ಸಾಲ ಸೌಲಭ್ಯದಿಂದಾಗಿ ಸ್ವ ಸಹಾಯ ಸಂಘಗಳ ಕುಟುಂಬಗಳು ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದುವರೆಯುತ್ತಿದ್ದು, ಸಾಲ ಮರುಪಾವತಿ ಕೂಡ ಶೇ 98% ಆಗುತ್ತಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಮೈಸೂರಿನ ಸಿಂಡಿಕೇಟ್ ಪ್ರಾದೇಸಿಕ ಕಛೇರಿಯ ಮುರಳಿಧರ್ ಕಲ್ಕುರ್, ಹಿರಿಯ ವ್ಯವಸ್ಥಾಪಕರಾದ ಪ್ರವೀಣ್ ಎಂ.ಪಿ, ಪಿ,ಎಸ್ ಸಿಸಿ, ಎಪ್.ಐ ಮತ್ತು ಎಸ್ ಎಲ್ ಬಿಸಿ  ಜನರಲ್ ಮ್ಯಾನೇಜರ್ ಮೋಹನ್ ರೆಡ್ಡಿ, ಮೈರಾಡ ಕಾರ್ಯಕ್ರಮಾಧಿಕಾರಿ ವಿಜಯ್ ಕುಮಾರ್, ಹನೂರು ಸಿಂಡಿಕೇಟ್ ಶಾಖೆಯ ವ್ಯವಸ್ಥಾಪಕರಾದ ಪ್ರಭುಕುಮಾರ್, ಒಡೆಯರಪಾಳ್ಯ ಶಾಖೆಯ ಶ್ರೀಮತಿ ಭುವನೇಶ್ವರಿ, ಮೈರಾಡ ಸಿಬ್ಬಂದಿ ಮತ್ತು ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News