ಹನೂರು: ಹಾಲು ಉತ್ಪಾದಕ ಸಹಕಾರ ಸಂಘದ ವಾರ್ಷಿಕ ಸಭೆ

Update: 2017-09-22 18:46 GMT

ಹನೂರು, ಸೆ.22: ತಾಲೂಕಿನ ಚಿಕ್ಕಮಾಲಪುರ, ಲೋಕ್ಕನಹಳ್ಳ, ಪಿಜಿ ಪಾಳ್ಯಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಶುಕ್ರವಾರ ನಡೆಯಿತು.

ಈ ವೇಳೆ  ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಚಾಮುಲ್‍ನ ನೂತನ ಅಧ್ಯಕ್ಷ ಸಿ.ಎನ್‍. ಗುರುಮಲ್ಲಪ್ಪ, ಹಾಲು ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದಿಸಿ ಸಹಕಾರ ಸಂಘಕ್ಕೆ ನೀಡಬೇಕು. ರಾಸುವಿಗೆ ಸಮತೋಲನ ಆಹಾರ ನೀಡಿ ಮತ್ತು ಹಾಲಿನಲ್ಲಿ ಕೊಬ್ಬಿನ ಅಂಶ ಇರುವಂತೆ ಹಾಲಿನ ಗುಣಮಟ್ಟ ಕಾಪಾಡಲು ಮನವಿ  ಮಾಡಿದರು.

ಈ ಸಂದರ್ಭದಲ್ಲಿಚಾಮುಲ್‍ನನೀರ್ದೆಶಕ ನಂಜುಂಡ ಸ್ವಾಮಿ, ಪ್ರಮೋದ ಶಂಕರ ಮೂರ್ತಿ, ಸಮಾಲೋಚಕ ವಿಸ್ತರಣಾಧಿಕಾರಿ ಕು.ಕೆ.ಮಂಜುಳ, ಮುಖಂಡರಾದ ಟಿ. ದೊರೆಸ್ವಾಮಿನಾಯ್ಡು ಚಿಕ್ಕಮಾಲಾಪುರ ಗ್ರಾಮದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಚಂದ್ರಕಲಾ, ಕಾರ್ಯದರ್ಶಿ ಕೆ. ವೆಂಕಟೇಶ್‍ ನಾಯ್ಡು ಸ್ವಾಮಿ, ಶ್ರೀ ವಿಜಯಶೆಟ್ಟಿ, ಜೆ.ರಾಧಿಕಾ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News