ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದಸಂಸ ಮನವಿ

Update: 2017-09-22 18:59 GMT

ಮುಂಡಗೋಡ, ಸೆ.22: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಬೇಜವಾಬ್ದಾರಿ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು  ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಯವರಿಗೆ ತಹಶೀಲ್ದಾರ ಮೂಲಕ ಶುಕ್ರವಾರ ಮನವಿ ಮನವಿ ಸಲ್ಲಿಸಿದರು.

ತಾಲೂಕ ಮಟ್ಟದ ಇಲಾಖಾ ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಎಸ್ಟಿ, ಎಸ್ಸಿ ಜನರಿಗೆ, ಅಲ್ಪಸಂಖ್ಯಾತರಿಗೆ, ಹಿಂದೂಳಿದ ವರ್ಗದ ಬಡ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದ ಕಾನೂನುಗಳನ್ನು ಜಾರಿಗೆ ತರದೆ ಇಂಪ್ಲಿಮೇಂಟ್ ಮಾಡದೇ ಮತ್ತು ಸೌಲಭ್ಯಗಳನ್ನು ಸರಿಯಾಗಿ ಒದಗಿಸದೇ ಅನ್ಯಾಯ ಮಾಡುತ್ತಿದ್ದಾರೆ ಹಾಗೂ ಕೆಲವು ಬೇಡಿಕೆಗಳನ್ನು ಕೇಂದ್ರಸರಕಾರ ಹಾಗೂ ರಾಜ್ಯ ಸರಕಾರ ಈಡೇರಿಸ ಬೇಕು. ಕಾನೂನಗಳನ್ನು ಜಾರಿಗೆ ಮಾಡದೇ ಅನ್ಯಾಯ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯವಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ, ಎಸ್.ಫಕ್ಕಿರಪ್ಪ, ತಾಲೂಕ ಅಧ್ಯಕ್ಷ ಬಸವರಾಜ ಹರಿಜನ, ಬಸವಂತಪ್ಪ ಮಡ್ಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತೀರುಪತಿ ಕೊಂಡ್ಲಿ, ಜಿಲ್ಲಾ ದಲಿತ ಯುವ ಒಕ್ಕೂಟ ಅಧ್ಯಕ್ಷ ಬಸವರಾಜ ಹಳ್ಳೆಮ್ಮನವರ, ಮಂಜುನಾಥ ಹರಿಜನ, ಭಾಸ್ಕರ ಭೋವಿ, ಮಂಜುನಾಥ ಹರಿಜನ, ಮೈಲಾರಿ ದೇವರಮನಿ, ಯಮುನಾಬಿ ಶಿಂದೆ, ಲಕ್ಷ್ಮೀಬಾಯಿ ರಾಠೋಡ, ಗಿರಿಜವ್ವಾ ಜೋಗೆರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News