ಎಚ್ ಡಿ ಕುಮಾರಸ್ವಾಮಿಗೆ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ

Update: 2017-09-23 04:52 GMT

ಬೆಂಗಳೂರು, ಸೆ.23: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ  ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಹೃದಯದ ಶಸ್ತ್ರಚಿಕಿತ್ಸೆ ನಡೆಯಿತು.

ಡಾ. ಸತ್ಯಕಿ ನೇತೃತ್ವದ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ.ಹೃದಯದ ಶಸ್ತ್ರ ಚಿಕಿತ್ಸೆ 45 ನಿಮಿಷಗಳ ಕಾಲ ನಡೆಯಿತು.

ಹೃದಯದ ಶಸ್ತ್ರ ಚಿಕಿತ್ಸೆಗಾಗಿ ಗುರುವಾರ ಸಂಜೆ ಎಚ್‌.ಡಿ.ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದರು.ಲ್ಯಾಪ್ರೋಸ್ಕೋಪಿಕ್‌ ಕೀಹೋಲ್‌ ಪ್ರಕ್ರಿಯೆ ಮೂಲಕ ಟಿಶ್ಯೂವಾಲ್ವ್‌ ಬದಲಾವಣೆ ಮಾಡಲಾಗಿದೆ. ಹತ್ತು ವರ್ಷಗಳ ಹಿಂದೆ ಟಿಶ್ಯೂವಾಲ್ವ್‌ ಅಳವಡಿಸಲಾಗಿತ್ತು.  ಹಳೆಯ ವಾಲ್ವ್ ಕಾಲಾವಧಿ ಮುಗಿರುವುದರಿಂದ ಅದನ್ನು ಇದೀಗ ಬದಲಾಯಿಸಲಾಗಿದೆ. 

ಕುಮಾರಸ್ವಾಮಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಸೆ.26 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News