ಹಾದಿಯಾ ಪ್ರಕರಣದಲ್ಲಿ ಕೋರ್ಟಿನಿಂದ ತಪ್ಪಾಗಿದೆ: ಸಾಹಿತಿ ಸಚ್ಚಿದಾನಂದನ್

Update: 2017-09-23 06:56 GMT

ತಿರುವನಂತಪುರಂ,ಸೆ.23: ಮದುವೆ ಅಮಾನ್ಯಗೊಳಿಸಿದ್ದು ಸೇರಿ ಹಾದಿಯಾ ಪ್ರಕರಣದಲ್ಲಿ ಕೋರ್ಟಿನಿಂದ ತಪ್ಪು ಸಂಭವಿಸಿದೆ ಎಂದು ಪ್ರಸಿದ್ಧ ಸಾಹಿತಿ ಕೆ.ಸಿ. ಸಚ್ಚಿದಾನಂದನ್ ಹೇಳಿದ್ದಾರೆ. “ಹಾದಿಯಾ- ಪೌರಹಕ್ಕುಗಳ ಆಕ್ರಂದನ” ಎನ್ನುವ ಶೀರ್ಷಿಕೆಯಲ್ಲಿ ಕೇರಳ ಸಾಲಿಡಾರಿಟಿ ಆಯೋಜಿಸಿದ್ದ ಸಂಗಮದಲ್ಲಿ ಅವರು ಮಾತಾಡುತ್ತಿದ್ದರು. ಪ್ರೌಢಾವಸ್ಥೆಗೆ ಬಂದ ಯುವತಿ ಸ್ವಂತ ಇಷ್ಟಪ್ರಕಾರ ಮದುವೆಯಾಗಿದ್ದನ್ನು ಕೋರ್ಟು ಅಮಾನ್ಯಗೊಳಿಸಿದ್ದು ಯಾವ ಕಾನೂನಿನ ಆಧಾರದಲ್ಲಿ ಎಂದು ಸಚ್ಚಿದಾನಂದನ್ ಪ್ರಶ್ನಿಸಿದರು. ಮಹಿಳಾವಿರೋಧ ಮತ್ತು ಇಸ್ಲಾಂ ವಿರೊಧ ಮಿಶ್ರಣದ ಪೂರ್ವಾಗ್ರಹ ಈ ಪ್ರಕರಣದಲ್ಲಿ ಕೋರ್ಟಿನ ಕಡೆಯಿಂದ ಸಂಭವಿಸಿದೆ.  ಕುಟುಂಬದೊಳಗಿನ ಹಿಂಸೆ ಕೂಡಾ ಹಾದಿಯಾ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿದೆ ಎಂದು ಸಚ್ಚಿದಾನಂದನ್ ಹೇಳಿದರು.

ಹಾದಿಯಾಳ ಅಭಿಪ್ರಾಯವನ್ನು ಕೇಳಲು ಯಾಕೆ ಕೋರ್ಟು ಸಿದ್ಧವಾಗಿಲ್ಲ ಎಂದುಸಂಸದ ಇ.ಟಿ. ಮುಹಮ್ಮದ್ ಬಶೀರ್ ಪ್ರಶ್ನಿಸಿದರು. ಹಾದಿಯಾಳನ್ನು ಮಾತನಾಡದಂತೆ ತಡೆಯುತ್ತಿರುವುದು ಯಾಕೆ ಎಂದು ಸಂಗಮವನ್ನು ಉದ್ಘಾಟಿಸಿ ಅವರು ಪ್ರಶ್ನಿಸಿದರು.

ಪ್ರಜಾಪ್ರಭುತ್ವ ಮತ್ತು ಜಾತ್ಯತೀತೆಯನ್ನು, ಕೋರ್ಟನ್ನು ಪ್ಯಾಶಿಸಂ ಬಳಸಿಕೊಳ್ಳುತ್ತಿರುವ ಕೆಟ್ಟ ಸೂಚನೆ ಹಾದಿಯಾ Pಪ್ರಕರಣದಿಂದ ವ್ಯಕ್ತವಾಗುತ್ತಿದೆ ಎಂದು ಸಾಹಿತಿ ಬಿ. ರಾಜೀವನ್ ಹೇಳಿದರು. ಸಿ.ಪಿ.ಜಾನ್, ಭಾಸುರೇಂದ್ರ ಬಾಬು, ಕೆ. ಬಾಬುರಾಜ್ ಮುಂತಾದ ಸಾಮಾಜಿಕ, ಸಾಂಸ್ಕತಿಕ ಕ್ಷೇತ್ರದ ಹಲವಾರು ಮಂದಿ ತಿರುವನಂತಪುರಂ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಲಾಗಿದ್ದ ಬಹುಜನ ಸಂಗಮದಲ್ಲಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News