ಉಗ್ರರ ಕೈಸೇರುತ್ತಾ ಪಾಕ್ ಅಣ್ವಸ್ತ್ರ?

Update: 2017-09-25 04:29 GMT

ಇಸ್ಲಾಮಾಬಾದ್, ಸೆ.25: ಪಾಕಿಸ್ತಾನ ಉತ್ಪಾದಿಸಿದ ಅಣ್ವಸ್ತ್ರಗಳನ್ನು ಒಂಬತ್ತು ರಹಸ್ಯ ಸ್ಥಳಗಳಲ್ಲಿ ಬಚ್ಚಿಟ್ಟಿದ್ದು, ಇದು ಉಗ್ರರ ಪಾಲಾಗುವ ಅಪಾಯವಿದೆ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಕಳೆದ ವಾರ ಹೇಳಿಕೆ ನೀಡಿ, ತಮ್ಮ ದೇಶದ ಅಣ್ವಸ್ತ್ರಗಳು ಭಾರತೀಯ ಸೇನೆಯ "ಕೋಲ್ಡ್ ಸ್ಟಾರ್ಟ್" ಸಿದ್ಧಾಂತವನ್ನು ತಡೆಯುವ ಸಲುವಾಗಿ ಬಳಕೆಯಾಗಲಿವೆ ಎಂದು ಹೇಳಿದ್ದರು. ಭಾರತದ ವಿರುದ್ಧದ ಸಂಘರ್ಷದ ಸಂದರ್ಭದಲ್ಲಿ ತಕ್ಷಣಕ್ಕೆ ಬಳಸಲು ಸಜ್ಜಾಗಿಸಿದ ಆಯಕಟ್ಟಿನ ಅಣ್ವಸ್ತ್ರಗಳು, ಆದೇಶ ಮತ್ತು ನಿಯಂತ್ರಣ ವ್ಯವಸ್ಥೆ ಮತ್ತು ಅಲ್ಪದೂರ ಸಾಮರ್ಥ್ಯದ ಶಸ್ತ್ರಾಸ್ತ್ರಗಳು ಅನಾಹುತಗಳಿಗೆ ಒಳಗಾಗುವ ಮತ್ತು ಉಗ್ರರ ಪಾಲಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಫೆಡರೇಷನ್ ಆಫ್ ಅಮೆರಿಕನ್ ಸೈಂಟಿಸ್ಟ್ಸ್ ವರದಿ ಹೇಳಿದೆ. ಒಂಬತ್ತು ಕಡೆಗಳಲ್ಲಿ ಇವುಗಳನ್ನು ಬಚ್ಚಿಡಲಾಗಿದೆ ಎಂದೂ ವರದಿ ವಿವರಿಸಿದೆ.

ಈ ತಂಡ ಪತ್ತೆ ಮಾಡಿದ ನೆಲೆಗಳ ಪಕ್ಕದಲ್ಲಿ ಇದನ್ನು ಹುದುಗಿಸಿಟ್ಟಿರುವ ಸಾಧ್ಯತೆ ಇದೆ ಎಂದು ವರದಿಯ ಸಹಲೇಖಕ ಹನ್ಸ್ ಕ್ರಿಸ್ಟೆನ್‌ಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News