ಸದಸ್ಯರ ಸಕ್ರೀಯತೆಯಿಂದ ಸಂಘದ ಸದೃಢತೆ:ಚಂದ್ರಶೇಖರ ಪಾಲೆತ್ತಾಡಿ

Update: 2017-09-25 18:48 GMT

ಮುಂಬೈ, ಸೆ.24: ಸಂಘ ಒಬ್ಬನಿಗಾಗಿ ಅಲ್ಲ. ಎಲ್ಲಾ ಸದಸ್ಯರು ಪ್ರಯೋಜನ ಪಡೆದಾಗಲೇ ಸಂಘದ ಸೇವೆ ಫಲಪ್ರದವಾಗುವುದು. ಈ ಸಂಸ್ಥೆಯ ಮೂಲಕ ನಾವು ಸೇವೆಯನ್ನೀಡಲು ಸಾಧ್ಯವಾದಷ್ಟು ಶ್ರಮ ಮಾಡಿದ್ದೇವೆ, ಮಾಡುತ್ತಿದ್ದೇವೆ ಮುಂದೆಯೂ ಮಾಡುತ್ತೇವೆ. ಇವರೆಗೂ ಸಂಘವನ್ನು ಸಂವಿಧಾನ ಬದ್ಧವಾಗಿ ಮುನ್ನಡೆಸಿದ್ದು, ಭವಿಷ್ಯತ್ತಿನಲ್ಲೂ ಪ್ರಾಮಾಣಿಕವಾಗಿ ಸಂಘವನ್ನು ಪ್ರಗತಿಪರತೆಯತ್ತ ಒಯ್ಯುತ್ತೇವೆ. ಸಂಘದ ಬಗ್ಗೆ ಯಾರು ಕೆಟ್ಟದಾಗಿ ಮಾತನಾಡಬಾರದು. ಲೋಪದೋಷ ಅಥವಾ ಒಳ್ಳೆದಿದ್ದರೂ ಖುದ್ದಾಗಿ ತಿಳಿಸಿ ಇಲ್ಲವೇ ಸುಮ್ಮಗಿರಿ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ನುಡಿದರು.

ಇಂದಿಲ್ಲಿ  ಭಾನುವಾರ ಪೂರ್ವಾಹ್ನ  ಕುರ್ಲಾ ಪೂರ್ವದಲ್ಲಿನ ಬಂಟರ ಸಂಘದ ಅನೆಕ್ಸ್ ಕಟ್ಟಡದಲ್ಲಿನ ವಿಜಯಲಕ್ಷಿ ಮಹೇಶ್ ಶೆಟ್ಟಿ (ಬಾಬಾ ಗ್ರೂಪ್) ಕಿರು ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘದ 9ನೆ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಪಾಲೆತ್ತಾಡಿ ಮಾತನಾಡಿದರು.

ಸದಸ್ಯರ ಸಕ್ರೀಯತೆಯಿಂದಲೇ ಸಂಘದ ಸಧೃಡತೆ ಸಾಧ್ಯ. ಆದುದರಿಂದ ಸದಸ್ಯರಲ್ಲಿ ಸದ್ಧರ್ಮತೆ ಅವಶ್ಯಕತೆವಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಒಮ್ಮಸ್ಸಿನಿಂದ ಮುನ್ನಡೆಸೋಣ ಎಂದೂ ಪಾಲೆತ್ತಾಡಿ ಕರೆಯಿತ್ತರು.

ವೇದಿಕೆಯಲ್ಲಿ ಉಪಾಧ್ಯಕ್ಷ ದಯಾ ಸಾಗರ್ ಚೌಟ, ಪತ್ರಕರ್ತರ ಭವನ ಸಮಿತಿ ಕಾರ್ಯಧ್ಯಕ್ಷ ಡಾ| ಶಿವ ಮೂಡಿಗೆರೆ, ಕ್ರೀಡಾ ಸಮಿತಿ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ ಆಸೀನರಾಗಿದ್ದು, ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಸ್ವಾಗತಿಸಿ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಗೌ| ಕೋಶಾಧಿಕಾರಿ ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು ಗತ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ನಂತರ ಸಂಘದ 2017-2018ರ ಸಾಲಿನ ಲೆಕ್ಕಪರಿಶೋಧಕರನ್ನಾಗಿ ಮತ್ತೆ ನಾಡಿನ ಪ್ರತಿಷ್ಠಿತ ಚಾರ್ಟರ್ಡ್ ಎಕೌಂಟೆಂಟ್ ಸಿಎ| ಐ.ಆರ್ ಶೆಟ್ಟಿ ಎಂಡ್ ಕಂಪೆನಿ ಸಂಸ್ಥೆಯನ್ನೇ ಮರು ನೇಮಕ ಗೊಳಿಸಲಾಯಿತು. ಸಂಘದ ಸದಸ್ಯರಿಗೆ ಶೀಘ್ರವೇ ಹಮ್ಮಿಕೊಳ್ಳಲಾಗುವ ಕ್ರಿಕೆಟ್ ಪಂದ್ಯಾಟದ ಬಗ್ಗೆ ಜಯ ಸಿ.ಪೂಜಾರಿ ಮಾಹಿತಿಯನ್ನಿತ್ತರು.

ಸಂಘದ ಅಧ್ಯಕ್ಷರಾಗಿದ್ದು ಅವರ ಆತ್ಮಕಥನ `ನಾನು... ನನ್ನ ಸ್ವಗತ' ಪುಸ್ತಕ ಅನಾವರಣ ಹಾಗೂ ಅಭಿನಂದನ ಗ್ರಂಥ `ಆಪ್ತಮಿತ್ರ' ಬಿಡುಗಡೆ ಗೊಳಿಸಿ ಪೌರಸನ್ಮಾನಕ್ಕೆ ಭಾಜನರಾದ ಚಂದ್ರಶೇಖರ ಪಾಲೆತ್ತಾಡಿ ಅವರನ್ನು ಸಲಹಾ ಸಮಿತಿ ಸದಸ್ಯರಾದ ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಗ್ರೆಗೋರಿ ಡಿ'ಅಲ್ಮೇಡಾ, ಡಾ| ಸುನೀತಾ ಎಂ.ಶೆಟ್ಟಿ, ನ್ಯಾ| ರೋಹಿಣಿ ಜೆ.ಸಾಲ್ಯಾನ್, ನ್ಯಾ| ವಸಂತ ಎಸ್.ಕಲಕೋಟಿ ಅವರು ಸತ್ಕರಿಸಿ ಗೌರವಿಸಿದರು.

ಸಲಹಾ ಸಮಿತಿ ಸದಸ್ಯರನ್ನು, ವಿಶೇಷವಾಗಿ ಉಪಸ್ಥಿತರಿದ್ದ ಕಿರಣ್ ಬಿ.ರೈ ಕರ್ನೂರು, ಹರೀಶ್ ಮೂಡಬಿದ್ರಿ (ಪುಣೆ), ಆರೀಫ್ ಕಲಕಟ್ಟಾ ಮಂಗಳೂರು, ಬಂಟರ ಭವನದ ಪ್ರಧಾನ ವ್ಯವಸ್ಥಾಪಕ  ಪ್ರವೀಣ್ ಎಸ್.ಶೆಟ್ಟಿ ವಾರಂಗ, ಬಂಟರವಾಣಿ ಮಾಸಿಕದ ಸಂಪಾದಕ ಅಶೋಕ್ ಪಕ್ಕಳ ಮತ್ತು 2017ನೇ ಸಾಲಿನ ದಿ| ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಸಂಘದ ಸದಸ್ಯ ನವೀನ್ ಕೆ.ಇನ್ನ ಅವರಿಗೆ  ಅಧ್ಯಕ್ಷರು ಪುಷ್ಫಗುಪ್ಚವನ್ನಿತ್ತು ಗೌರವಿಸಿದರು ಮತ್ತು ಉಮೇಶ್ ಕುಮಾರ್ ಅಂಚನ್ ಅವರಿಗೆ ಸದಸ್ಯತ್ವ ಐಡಿ ಕಾರ್ಡ್ ಪ್ರದಾನಿಸಿದರು.

ರೋಹಿಣಿ ಸಾಲ್ಯಾನ್ ಮಾತನಾಡಿ `ಪತ್ರಕರ್ತರು ನ್ಯಾಯಯುತವಾಗಿ ವಸ್ತುನಿಷ್ಠರಾಗಿ ಬರೆದಾಗ ವರದಿ ಮೌಲ್ಯಯುತವಾಗುವುದು. ಪ್ರಸಕ್ತ ಪತ್ರಕರ್ತರಲ್ಲಿ ಭಿನ್ನತೆ ಕಾಣುತ್ತಿದ್ದು, ಸತ್ಯವನ್ನು ಜನರಿಗೆ ತಿಳಿಸುವಲ್ಲಿ ವಿಫಲರಾಗುತ್ತಾರೆ. ಆದುದರಿಂದ ಸಾಮಾಜಿಕ ಚಿಂತನೆಯನ್ನು ಮೈಗೂಡಿಸಿರಿ. ಪೆನ್ ಶಕ್ತಿಯನ್ನು ಸಶಕ್ತವಾಗಿ ಬಳಸುವಲ್ಲಿ ಸರಸ್ವತಿ ದೇವಿ ಪತ್ರಕರ್ತರಿಗೆ ಶಕ್ತಿ ನೀಡಲಿ'  ನುಡಿದರು.

ಸುನೀತಾ ಶೆಟ್ಟಿ ಮಾತನಾಡಿ `ಸದ್ಯ ಪತ್ರಕರ್ತರ ಪೀಡಿಸುವಿಕೆ ಸಲ್ಲದು. ಪತ್ರಕರ್ತರಲ್ಲಿ ತುಡಿತದ ಅವಶ್ಯಕತೆಯಿದೆ. ನಿನ್ನೆ ಇಂದು ಮತ್ತು ನಾಳೆಯ ತಿಳುವಳಿಕೆಯ ಅರಿವಿನ ಅಗತ್ಯ ಪತ್ರಕರ್ತರಿಗಿದೆ. ಸದ್ಯದ ನಿಯತಕಾಲಿಕ ಪತ್ರಿಕೆಗಳನ್ನು ವರದಿ ಓದುದೇ ಭಯ ಪಡುವಂತ್ತಿದೆ. ಆದುದರಿಂದ ಪತ್ರಕರ್ತರು ಎಚ್ಚರದಿಂದ ಇದ್ದು ಒತ್ತಡರಹಿತರಾಗಿ ಮುನ್ನಡೆಯಬೇಕು. ಅಮೀಷ ಮುಕ್ತರಾಗಿ ಸ್ವಂತಿಕೆಯನ್ನು ಹೊಂದಿರಬೇಕು' ಎಂದರು.

ಮೋಹಿದ್ಧೀನ್ ಮಾತನಾಡಿ `ಪತ್ರಕರ್ತರಲ್ಲಿ ವರದಿಗಾರಿಕೆಯ ವಿಮರ್ಶೆ ಅವಶ್ಯವಾಗಿದೆ. ಬರೇ ವೃತ್ತಿಯ ಹಿಸ್ಸೆ ಪೂರೈಸುವ ಇಚ್ಛೆ ಸರಿಯಲ್ಲ. ಘಟನೆ, ವಿಷಯಗಳನ್ನು ಪರಮಾರ್ಶೆ ಮಾಡಿ ಸತ್ಯಾಸತ್ಯತೆ ತಿಳಿದು ವರದಿ ಮಾಡಬೇಕು. ಈ ಬಗ್ಗೆ ಸಂಘವು ಸದಸ್ಯರಲ್ಲಿ ಅರಿವು ಮೂಡಿಸುವಲ್ಲಿ ಶ್ರಮಿಸಬೇಕು. ದಶಮಾನೋತ್ಸವವನ್ನು ಅರ್ಥಗರ್ಭಿತವಾಗಿ ಆಚರಿಸುವ ಮೂಲಕ ರಾಷ್ಟ್ರದ ಸರ್ವ ಪತ್ರಕರ್ತರ ಗಮನ ಸೆಳೆಯುವಂತಾಗಲಿ' ಎಂದರು.

`ಪತ್ರಕರ್ತರು ವರದಿಗಳನ್ನು ಸೂಕ್ಷ್ಮಗ್ರಹಿಕೆಯಿಂದ ರೂಪಿಸುವ ಮೂಲಕ ಸಮಾಜದ ಮತ್ತು ಪತ್ರಿಕೆಯ ನಿರ್ದಿಷ್ಟಮಾನತೆ ಉಳಿಸುವುದು ಅವಶ್ಯವಾಗಿದೆ. ವ್ಯಕ್ತಿಸ್ತುತಿ ಅಥವಾ ಮುಖಸ್ತುತಿಗಿಂತ ಸರಸ್ವತಿ ನಿಷ್ಠೆ ಮುಖ್ಯವಾಗಿರಲಿ. ಇದಕ್ಕಾಗಿ ಸಂಘವು ಸದಸ್ಯರಿಗೆ ಪ್ರಾಯೋಜನಕಾರಿ ಆಗುವಲ್ಲಿ ಶ್ರಮಿಸುವಂತಾಗಲಿ' ಎಂದು ಪ್ರಕಾಶ್ ಎಲ್.ಶೆಟ್ಟಿ ತಿಳಿಸಿದರು.

ವಸಂತ ಕಲಕೋಟಿ ಮಾತನಾಡಿ `ದಶ ವರ್ಷದ ಮುನ್ನಡೆಯತ್ತ ಸಾಗುತ್ತಿರುವ ಈ ಸಂಘವು ಮಾಧ್ಯಮ ವಿಚಾರಿತ ಕಾರ್ಯಗಾರ ನಡೆಸುವ ಅವಶ್ಯವಿದೆ. ಪತ್ರಕರ್ತರ ದಿನಾಚರಣೆಯನ್ನು ಕನಿಷ್ಠ ಸಾಂಕೇತಿಕವಾಗಿ ಆದರೂ ಆಚರಿಸಿ ಸಂಘದ ಸಾಂಘಿಕತೆಯನ್ನು ಬಲಪಡಿಸುವಲ್ಲಿ ಶ್ರಮಿಸಲಿ' ಎಂದರು.

ಸದಸ್ಯರ ಪರವಾಗಿ ಕಿರಣ್ ಬಿ.ರೈ, ಹರೀಶ್ ಮೂಡಬಿದ್ರಿ, ಗೋಪಾಲ ತ್ರಾಸಿ, ಜನಾರ್ದನ ಪುರಿಯಾ,  ಮಮತಾ ಆರ್.ನಾಯ್ಕ್, ಡಾ| ಈಶ್ವರ ಅಲೆವೂರು, ನವೀನ್ ಕೆ.ಇನ್ನಾ, ದಿನೇಶ್ ಶೆಟ್ಟಿ ರೆಂಜಾಳ, ದಯಾ ಸಾಗರ್ ಚೌಟ, ಶಿವ ಮೂಡಿಗೆರೆ, ಹರೀಶ್ ಹೆಜ್ಮಾಡಿ ಮಾತನಾಡಿದರು.

ಸಭೆಯಲ್ಲಿ ಜತೆ ಕಾರ್ಯದರ್ಶಿ ಬಾಬು ಕೆ.ಬೆಳ್ಚಡ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶ್ಯಾಮ್ ಎಂ.ಹಂಧೆ, ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಗುರುದತ್ತ್ ಎಸ್. ಪೂಂಜಾ ಮುಂಡ್ಕೂರು, ಡಾ| ದಿನೇಶ್ ಶೆಟ್ಟಿ ರೆಂಜಾಳ, ಸುಜಾನ್ಹಾ ಲಾರೆನ್ಸ್ ಕುವೆಲ್ಲೋ, ಜನಾರ್ಧನ ಎಸ್.ಪುರಿಯಾ, ವಿಶೇಷ ಆಮಂತ್ರಿತ ಸದಸ್ಯರುಗಳಾದ ಸುರೇಶ್ ಶೆಟ್ಟಿ ಯೆಯ್ಯಾಡಿ, ಶ್ರೀಧರ್ ಉಚ್ಚಿಲ್ ಸೇರಿದಂತೆ ಸದಸ್ಯರನೇಕರು ಹಾಜರಿದ್ದರು. ಮಮತಾ ಆರ್.ನಾಯ್ಕ್ ಪ್ರಾರ್ಥನೆಯನ್ನಾಡಿದರು. ಬಳಿಕ ಗತ ಸಾಲಿನಲ್ಲಿ ಅಗಲಿದ ಎಲ್ಲಾ ಪತ್ರಕರ್ತರಿಗೆ ಶ್ರದ್ಧಾಂಜಲಿ ಸಲ್ಲಿಲಾಯಿತು. ಗೌರವ ಕಾರ್ಯದರ್ಶಿ ಹರೀಶ್ ಹೆಜ್ಮಾಡಿ ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News