ಪ್ರತಿಯೊಬ್ಬರು ರಾಜಕಾರಣ ಬದಿಗೊತ್ತಿ ಅಭಿವೃದ್ಧಿಗಾಗಿ ಸಹಕರಿಸಬೇಕು: ಮಧುಬಂಗಾರಪ್ಪ

Update: 2017-09-25 18:51 GMT

ಸೊರಬ, ಸೆ.25: ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ರಾಜಕಾರಣವನ್ನು ಬದಿಗೊತ್ತಿ ಪ್ರತಿಯೊಬ್ಬರೂ ಸಹಕರಿಸಬೇಕೆಂದು ಶಾಸಕ ಮಧುಬಂಗಾರಪ್ಪ ಮನವಿ ಮಾಡಿದರು.

ರವಿವಾರ ಸಂಜೆ ಪಟ್ಟಣದ ಶ್ರೀರಂಗನಾಥ ದೇವಾಲಯದ ಮುಂಭಾಗದಲ್ಲಿ 4ನೆ ದಿನದ ದಸರಾ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ಮುಗಿಯಬೇಕಿತ್ತು. ಮುಖ್ಯರಸ್ತೆ ಅಗಲೀಕರಣಕಾಗಿ 12ಕೊಟಿ ರೂ. ಮಂಜೂರಾಗಿದೆ. ಇನ್ನೂ ರೂ 8 ಕೋಟಿ ರೂ. ಹಣದ ಅವಶ್ಯಕತೆ ಇದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಲಾಗಿದೆ. ಸದ್ಯದಲ್ಲಿಯೇ ಬಾಕಿ ಹಣವೂ ಮಂಜೂರಾಗುವ ವಿಶ್ವಾಸವಿದೆ ಎಂದರು.

ಕಳೆದ 8 ವರ್ಷಗಳಿಂದ ಪಟ್ಟಣದಲ್ಲಿ ದಸರಾ ಉತ್ಸವ ನಡೆಯುತ್ತಿದ್ದು, ಶಿವಮೊಗ್ಗವನ್ನು ಹೊರತು ಪಡಿಸಿದರೆ ಜಿಲ್ಲೆಯಲ್ಲಿ ನಮ್ಮ ತಾಲೂಕಿನಲ್ಲಿ ಮಾತ್ರ ಸತತ ಒಂಬತ್ತು ದಿನಗಳೂ ಉತ್ಸವ ನಡೆಸಿಕೊಂಡು ಬರುತ್ತಿರುವುದು ಸಂತಸದಾಯಕವಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಮಧುರಾಯ್.ಜಿ.ಶೇಟ್, ಪಪಂ ಅಧ್ಯಕ್ಷೆ ಬೀಬಿ ಝುಲೇಖಾ, ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ಪ್ರಶಾಂತ ಮೇಸ್ತಿ, ಮೆಹಬೂಬಿ, ಗೀತಾಚಂದ್ರಶೇಖರ್, ಎಪಿಎಂಸಿ ಅಧ್ಯಕ್ಷ ರಾಜಶೇಖರ್ ಕುಪ್ಪಗಡ್ಡೆ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್.ಗಣಪತಿ, ವಕ್ತಾರ ಎಂ.ಡಿ.ಶೇಖರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News