ಗೋರಕ್ಷಣೆಗೆ ಅನೇಕ ಮುಸ್ಲಿಮರು ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ: ಮೋಹನ್ ಭಾಗವತ್

Update: 2017-09-30 06:43 GMT

ಹೊಸದಿಲ್ಲಿ, ಸೆ.30: ಗೋವುಗಳ ರಕ್ಷಣೆ ಯಾವುದೇ ಧರ್ಮಕ್ಕೆ ಸೀಮಿತಗೊಳ್ಳಬಾರದು. ಹಲವು ಮುಸ್ಲಿಮರು ಹಸುಗಳ ಪಾಲನೆ ಮತ್ತು ರಕ್ಷಣೆಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅನೇಕ ಮುಸ್ಲಿಮರು ಗೋವುಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.

ವಿಜಯ ದಶಮಿ ಅಂಗವಾಗಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಗೋರಕ್ಷಕರು ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು, ಧರ್ಮವನ್ನು ಮೀರಿ ನಾವು ಗೋವುಗಳ ರಕ್ಷಣೆ ಮಾಡಬೇಕು ಎಂದು ಹೇಳಿದ್ದಾರೆ.

 ಗೋವುಗಳನ್ನು  ನಮ್ಮ ದೇಶದಲ್ಲಿ ಹಾಲು, ಕೃಷಿಗಾಗಿ ಹೆಚ್ಚು ಬಳಸಲಾಗುತ್ತಿದೆ. ಸಣ್ಣ ರೈತರ ಪ್ರಗತಿಗೆ ಗೋವುಗಳು ಅತ್ಯಗತ್ಯವಾಗಿದ್ದು,  ಅನೇಕರು  ಜೀವನೋಪಾಯಕ್ಕಾಗಿ ಗೋವುಗಳನ್ನು ಅವಲಂಭಿಸಿದ್ದಾರೆ . ಗೋವುಗಳ ರಕ್ಷಣೆ ಹಾಗೂ ಗೋವುಗಳ ಆಧಾರಿತ ಕೃಷಿಯನ್ನು ಸಂರಕ್ಷಿಸಬೇಕೆಂದು ಸಂವಿಧಾನದಲ್ಲೇ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News