ದಿಲೀಪ್ ಗೆ ಜಾಮೀನು ನೀಡಿದ ಹೈಕೋರ್ಟ್

Update: 2017-10-03 09:21 GMT

ತಿರುವನಂತಪುರಂ, ಅ.3: ನಟಿಗೆ ಕಿರುಕುಳ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ರಿಗೆ ಕೇರಳ ಹೈಕೋರ್ಟ್ ಜಾಮೀನು ನೀಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾದ 85 ದಿನಗಳ ನಂತರ ದಿಲೀಪ್ ರಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.  ಕಳೆದ ತಿಂಗಳು 27ರಂದು ಜಾಮೀನು ಅರ್ಜಿಯ ವಿಚಾರಣೆ ಮುಗಿದಿದ್ದು, ತೀರ್ಪು ಕಾದಿರಿಸಲಾಗಿತ್ತು. ಜಾಮೀನು ಅರ್ಜಿಯನ್ನು ಪರಿಗಣಿಸಬಾರದೆಂದು ಸರಕಾರಿ ಪರ ವಕೀಲರು ಹೈಕೋರ್ಟ್ ಗೆ ಮನವಿ ಮಾಡಿದರು.

ಜಾಮೀನಿನ ಷರತ್ತುಗಳು ಹೀಗಿವೆ.
1. ಪಾಸ್‌ಪೋರ್ಟ್‌ನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಒಪ್ಪಿಸಬೇಕು.
2. ಬಂದು ಲಕ್ಷ ರೂ. ಠೇವಣಿ ಇಡಬೇಕು.
3. ಇಬ್ಬರು ಜಾಮೀನುದಾರರು.
4. ಸಾಕ್ಷಿಗಳು ನಾಶಪಡಿಸಬಾರು.
5. ತನಿಖೆಗೆ ಸಂಪೂರ್ಣವಾಗಿ ಸಹಕರಿಸಬೇಕು.

ಜಾಮೀನಿಗಾಗಿ ದಿಲೀಪ್ ಮೂರು ಬಾರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ಎರಡು ಬಾರಿಯೂ ಕೋರ್ಟ್ ಜಾಮೀನು ನಿರಾಕರಿಸಿತ್ತು. ಅಲ್ಲದೆ ಅಂಗಮಾಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಕೂಡ ಎರಡು ಬಾರಿ ಜಾಮೀನು ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News