ಜನಪರ ಕಾಳಜಿ ಇಲ್ಲದ ರಾಷ್ಟ್ರೀಯ ಪಕ್ಷಗಳ ವಿರುದ್ದ ಹೋರಾಟ : ಹೆಚ್.ಡಿ.ದೇವೇಗೌಡ

Update: 2017-10-04 13:36 GMT

ತುಮಕೂರು.ಅ.04:ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲದ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ದ ಹೋರಾಡಲೂ ಇಂದು ಸಿದ್ದಗಂಗಾ ಶ್ರೀಗಳು ಆಶೀರ್ವದಿಸುವ ಮೂಲಕ ಜೆಡಿಎಸ್ ಪಕ್ಷಕ್ಕೆ ಬಲ ತುಂಬಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಸೇರುವ ಸಿದ್ದಗಂಗಾ ಮಠದಲ್ಲಿ ಗ್ರಾಮಾಂತರ ಜೆಡಿಎಸ್ ಘಟಕ ಆಯೋಜಿಸಿದ್ದ ಕರ್ನಾಟಕಕ್ಕೆ ಹೆಚ್.ಡಿ.ಕುಮಾರಣ್ಣ, ತುಮಕೂರು ಗ್ರಾಮಾಂತರಕ್ಕೆ ಡಿ.ಸಿ.ಗೌರಿಶಂಕರಣ್ಣ,ಮನೆ ಮನೆಗೆ ಕುಮಾರಣ್ಣ , ಈ ಬಾರಿ ಜೆಡಿಎಸ್ ಸರಕಾರ, ಗೌರಿಶಂಕರ್ ನಡಿಗೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮುಂದಿನ ಆರು ತಿಂಗಳು ಮುಖಂಡರು,ಕಾರ್ಯಕರ್ತರು ಹಗರಲಿರುಳೆನ್ನದೆ ಕೆಲಸ ಮಾಡಬೇಕಾಗಿದೆ.ಮನೆ ಮನೆಗೆ ನಮ್ಮ 20 ತಿಂಗಳ ಅಧಿಕಾರದಲ್ಲಿ ಜಾರಿಗೆ ತಂದ ಕಾರ್ಯಕ್ರಮಗಳು ಮತ್ತು ಮುಂದೆ ನೀಡಬಹುದಾದ ಕಾರ್ಯಕ್ರಮಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.

ಮಾಜಿ ಸಚಿವ ಹೆಚ್.ವಿಶ್ವನಾಥ್ ಮಾತನಾಡಿ,ಜೆಡಿಎಸ್ ಕಾರ್ಯಕ್ರಮ ವಿನೂತನವಾಗಿದ್ದು, ಕುಮಾರಣ್ಣ ಮನೆ ಮನೆಗೆ ಅಷ್ಟೇ ಸಾಲದು ಮನೆ, ಪ್ರತಿಯೊಬ್ಬರ ಮನ ಮನಕ್ಕೆ ತಲುಪಿಸುವ ಕೆಲಸ ಆಗಬೇಕು.ದೇಶದಲ್ಲಿರುವ ಎರಡು ರಾಷ್ಟ್ರೀಯ ಪಕ್ಷಗಳು ಜನರ ವಿಶ್ವಾಸ ಕಳೆದುಕೊಂಡಿವೆ.ಪ್ರಧಾನಿ ಮೋದಿ ದೊಡ್ಡ ಸುಳ್ಳುಗಾರ,ಅಧಿಕಾರ ನೀಡಿದರೆ 100 ದಿನದೊಳಗೆ ಎಲ್ಲಾ ಜನರ ಖಾತೆಗೆ 15 ಲಕ್ಷ ರೂ ಹಾಕುವ ಭರವಸೆ ನೀಡಿದ್ದ ಮೋದಿ ಅದರನ್ನು ಈಡೇರಿಸಲು ಸಾಧ್ಯವಾಗಿಲ್ಲ.

ಮೈಸೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿ,ಗಣಿಯಿಂದ ಕೊಳ್ಳೆ ಹೊಡೆದ ಹಣವನ್ನು ರಾಜ್ಯದ ಖಜಾನೆಗೆ ಸೇರಿಸುವ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಮಾತಿಗೆ ತಪ್ಪಿದ್ದಾರೆ.ಆದ್ದರಿಂದ ಜನತೆ ಇವರ ಬಗ್ಗೆ ಭ್ರಮ ನಿರಶನಗೊಂಡಿದ್ದಾರೆ. ಹಾಗಾಗಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಪ್ರಯತ್ನಿಸ ಬೇಕಾಗಿದೆ.ಈ ನಿಟ್ಟಿನಲ್ಲಿ ಮುಂದಿನ ಆರು ತಿಂಗಳ ಕಾಲ ಕಾರ್ಯಕರ್ತರು ಶಕ್ತಿ ಮೀರಿ ದುಡಿಯ ಬೇಕಾಗಿದೆ. ಜೆಡಿಎಸ್ ಅಧಿಕಾರಕ್ಕೆ ಬರುವ್ಯದರಿಂದ ಕೇವಲ ಕುಮಾರಸ್ವಾಮಿ ಅವರಿಗೆ ಅಧಿಕಾರ ಸಿಗುವುದಿಲ್ಲ. ಕಾರ್ಯಕರ್ತರ ಕೈಗೆ ಅಧಿಕಾರ ಸಿಗುತ್ತದೆ ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ.ಸುರೇಶ್‍ಬಾಬು ಮಾತನಾಡಿದರು, ವೇದಿಕೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಚನ್ನಿಗಪ್ಪ,ಮಾಜಿ ಶಾಸಕ ಹಾಗೂ ತುಮಕೂರು ಗ್ರಾಮಾಂತರ ಅಭ್ಯರ್ಥಿ ಡಿ.ಸಿ.ಗೌರಿಶಂಕರ್,ಎಂ.ಎಲ್.ಸಿ.ಬೆಮೆಲ್ ಕಾಂತರಾಜು,ರಮೇಶ್ ಬಾಬು, ಸುಧಾಕರಲಾಲ್,ಮಾಜಿ ಸಚಿವ ಬಿ.ಸತ್ಯನಾರಾಯಣ, ಜಿ.ಪಂ.ಅಧ್ಯಕ್ಷೆ ಲತಾ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News