ಅಂಬೇಡ್ಕರ್ ಅವರ ಆಯ್ದ ಬರಹಗಳು

Update: 2017-10-05 18:41 GMT

ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಬರಹಗಳ ಹರವು ದೊಡ್ಡದು. ಕನ್ನಡದಲ್ಲಿ ಈಗ ಸುಮಾರು ಇಪ್ಪತ್ತು ಸಾವಿರ ಪುಟಗಳಷ್ಟು ಅವರ ಬರಹ ಮತ್ತು ಮಾತುಗಳು ಓದಲು ದೊರೆಯುತ್ತವೆ. ಕನ್ನಡ ಸಂಸ್ಕೃತಿ ಇಲಾಖೆಯು ಈ ನಿಟ್ಟಿನಲ್ಲಿ ಬಹಳಷ್ಟು ಶ್ರಮವಹಿಸಿ ಕೆಲಸ ಮಾಡಿದೆ. ಆದರೆ ಅಂಬೇಡ್ಕರ್ ಅವರ ಚಿಂತನೆಗಳ ಮುಖ್ಯ ಎಳೆಗಳನ್ನು ಅರಿಯಲು ಈ ಎಲ್ಲ ಬರಹಗಳನ್ನು ಓದುವುದು ಆಗದ ಮಾತು. ಇಲ್ಲವೇ ತುಂಬ ಸಮಯ ಮತ್ತು ಶ್ರಮವನ್ನು ಬೇಡುವ ಕೆಲಸ. ಹಾಗಾಗಿ ಅಂಬೇಡ್ಕರ್ ಚಿಂತನೆಗಳ ಸಾರವನ್ನು ತಿಳಿಯಲು ಅನುಕೂಲ ಒದಗಿಸುವ ಅವರ ಕೆಲವು ಮುಖ್ಯ ಬರಹಗಳನ್ನು ಸಂಗ್ರಹಿಸಿ ಕೊಡುವ ಕೆಲಸವನ್ನು ಡಾ. ಸಿದ್ದಲಿಂಗಯ್ಯ ಅವರು ಮಾಡಿದ್ದಾರೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಇದನ್ನು ಪ್ರಕಟಿಸಿದೆ. ‘ಡಾ. ಬಿ. ಆರ್. ಅಂಬೇಡ್ಕರ್ ಅವರ ಆಯ್ದ ಬರಹಗಳು’ ಕೃತಿಯನ್ನು ಡಾ. ಸಿದ್ದಲಿಂಗಯ್ಯ ಸಂಪಾದನೆ ಮಾಡಿರುವುದರಿಂದಲೇ ಮಹತ್ವವನ್ನು ಪಡೆಯುತ್ತದೆ. ಯಾಕೆಂದರೆ ಶೋಷಿತ ಸಮುದಾಯದಿಂದ ಬಂದಿರುವ ಚಿಂತಕ, ಅಂಬೇಡ್ಕರ್ ಬರಹಗಳ ಒಳ ಧ್ವನಿಯನ್ನು ಅರ್ಥ ಮಾಡಿಕೊಂಡು ಅನುವಾದ ಮಾಡಬಲ್ಲ. ಮತ್ತು ವರ್ತಮಾನಕ್ಕೆ ಅಗತ್ಯವಾದ ಬರಹಗಳನ್ನು ಆಯ್ಕೆ ಮಾಡಬಲ್ಲ. ಈ ನಿಟ್ಟಿನಲ್ಲಿ ಅಂಬೇಡ್ಕರ್‌ರ ಸಂಗ್ರಹಿತ ಬರಹಗಳು ವರ್ತಮಾನದೊಂದಿಗೆ ಸಂವಾದಿಯಾಗಬಲ್ಲಂಥವುಗಳು.

ಜಾತಿಯ ನಿರ್ಮೂಲನೆ, ರಾನಡೆ ಗಾಂಧಿ ಮತ್ತು ಜಿನ್ನಾ, ಅಸ್ಪಶ್ಯತೆ-ಅದರ ಮೂಲಕ, ಭಾರತದ ಕೊಳೆಗೇರಿ, ಅಸ್ಪಶ್ಯರು ಎದುರಿಸಬೇಕಾದ ಸಂಗತಿಗಳು, ಯಾರು ಶೂದ್ರರಾಗಿದ್ದರು?, ಹತಾಶರಾದ ಜನರು ಅಸ್ಪಶ್ಯರಾದದ್ದು ಯಾವಾಗ? ಬುದ್ಧನ ಉಪದೇಶಗಳು, ದುರದೃಷ್ಟವಶಾತ್ ನಾನು ಒಬ್ಬ ಹಿಂದುವಾಗಿ ಹುಟ್ಟಿದೆ-ಆದರೆ ಹಿಂದೂವಾಗಿ ಸಾಯುವುದಿಲ್ಲ, ಸಂವಿಧಾನದ ಕರಡಿನ ಮೊದಲನೆಯ ವಾಚನ ಹೀಗೆ ಮುಖ್ಯವಾದ ಅಂಬೇಡ್ಕರ್ ಬರಹಗಳು ಕನ್ನಡಕ್ಕೆ ಅನುವಾದಗೊಂಡಿವೆ. 303 ಪುಟಗಳ ಈ ಕೃತಿಯ ಮುಖಬೆಲೆ 100 ರೂಪಾಯಿ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News