ಕೆರೆಯ ಹೂಳಿನಲ್ಲಿ ಸಿಲುಕಿ 6-8 ವರ್ಷದ ಗಂಡಾನೆ ಸಾವು

Update: 2017-10-06 14:44 GMT

ಮುಂಡಗೋಡ, ಅ. 6: ಅರಣ್ಯದಲ್ಲಿರುವ ಕೆರೆಯ ಹೂಳಿನಲ್ಲಿ ಸಿಲುಕಿ 6-8 ವರ್ಷದ ಗಂಡಾನೆ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ

 ತಾಲೂಕಿನ ಗುಂಜಾವತಿ ಅರಣ್ಯ ಪ್ರದೇಶದ ಮೈನಳ್ಳಿ ಬೀಟಿನ ಮೂಕನಕಟ್ಟೆ ಕರೆಯಲ್ಲಿ  ಈ ಘಟನೆ ನಡೆದಿದೆ

ಇತ್ತಿಚಿಗೆ ಉಗ್ಗಿನ ಕೇರಿ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ 1 ಒಂಟಿ ಸಲಗ, 1 ಟಸ್ಕರ, 2 ಹೆಣ್ಣಾನೆ 1 ಮರಿ ಆನೆ. ಇದರಲ್ಲಿಯ 6-8 ವರ್ಷದ ಗಂಡಾನೆ ಮೃತಪಟ್ಟಿದೆ.

ಮೂಕನ ಕಟ್ಟೆ ಕರೆಯಿಂದ ಹಾದು ಹೋಗಬೇಕಾದರೆ ಈ ಆನೆ ಹೂಳಿನಲ್ಲಿ ಸಿಲುಕಿ ಮೃತಪಟ್ಟಿರ ಬಹುದು ಎಂದು ಅಂದಾಜಿಸಲಾಗಿದೆ.

ಆನೆ ಸತ್ತು 5-6ದಿನ ವಾಗಿರಬಹುದು ಎಂದು ಅಂದಾಜಿಸಲಾಗಿದೆ. ಗುರುವಾರ ರಾತ್ರಿ ಆನೆ ಸತ್ತಿರುವ ಸುದ್ದಿ ಬರುತ್ತಿದ್ದಂತೆ  ಎಸಿಎಫ್ ಶಶಿಧರ, ಆರ್.ಎಫ್.ಓ ಸುರೇಶ ಕುಲ್ಲೋಳ್ಳಿ, ವನಪಾಲಕರಾದ ಕಲಾಲ, ಬಸವರಾಜ ಪೂಜಾರ ಹಾಗೂ ಸಿಬ್ಬಂದಿಆನೆಯನ್ನು ಶುಕ್ರವಾರ ಬೆಳಗ್ಗೆ ನೀರಿನಿಂದ ಹೋರಗೆ ತೆಗೆದಿದ್ದಾರೆ ಎಂದು ಹೇಳಲಾಗಿದೆ. ಆನೆಯನ್ನು ಎಸಿಎಫ್ ಸಮಕ್ಷಮದಲ್ಲಿ ಮೂಕನಕಟ್ಟೆ ಕರೆಯ ದಡದಲ್ಲಿ ಅಂತ್ಯಕ್ರೀಯೆ ನಡೆಸಲಾಯಿತು ಎಂದು ಆರ್.ಎಫ್.ಒ ಸುರೇಶ ಕುಲ್ಲೊಳ್ಳಿ ಪತ್ರಿಕೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News