ಆಕ್ವೆಸ್ ಸಮೂಹದಿಂದ ಆಟೊಮೊಬೈಲ್ ಸರ್ವೀಸ್ ಲಾಜಿಸ್ಟಿಕ್ಸ್, ಸಾಸ್ ಸ್ಟಾರ್ಟ್ ಅಪ್ ಲೆಟ್ಸ್ ಸರ್ವೀಸ್.ಇನ್‌ಗೆ ನೆರವು

Update: 2017-10-11 13:46 GMT

ಬೆಂಗಳೂರು, ಅ. 11:  ಭಾರತದಲ್ಲಿ ವೈಮಾನಿಕ ಉತ್ಪಾದನೆ ವ್ಯವಸ್ಥೆಯ ಮುಂಚೂಣಿ ಸಂಸ್ಥೆಯಾಗಿರುವ ಆಕ್ವೆಸ್ ಸಮೂಹವು ತನ್ನ ಡಿಜಿಟಲ್ ಸ್ಪೇಸ್ ವ್ಯವಸ್ಥೆಗೆ ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಪ್ರಿ-ಸೀರೀಸ್‌ನಲ್ಲಿ ಅಘೋಷಿತ ಮೊತ್ತವನ್ನು ಹೂಡಿಕೆ ಮಾಡಿದೆ. ಬೆಂಗಳೂರು ಮೂಲದ ಆಟೊಮೊಬೈಲ್ ಸರ್ವೀಸ್ ಲಾಜಿಸ್ಟಿಕ್ಸ್ & ಸಾಸ್ ಸ್ಟಾರ್ಟ್‌ಅಪ್ ಲೆಟ್ಸ್‌ಸರ್ವೀಸ್.ಇನ್‌ಗೆ ನೆರವು ನೀಡಿದೆ.

ಲೆಟ್ಸ್‌ಸರ್ವೀಸ್.ಇನ್, ಅತಿವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮೂಲದ ಅಟೊಮೊಬೈಲ್ ಸರ್ವೀಸ್ ಲಾಜಿಸ್ಟಿಕ್  ಮತ್ತು ಸಾಸ್ ಸ್ಟಾರ್ಟ್ ಅಪ್ ಉದ್ಯಮವಾಗಿದ್ದು, ಭಾರತದ ಐದು ನಗರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಇದು ತಮ್ಮ ಮಾಲಕತ್ವದ ತಂತ್ರಜ್ಞಾನವನ್ನು ಬಳಸಿಕೊಂಡು, ತನ್ನ ವೈವಿಧ್ಯಮಯ ಉತ್ಪನ್ನಗಳ ಮೂಲಕ ಯಾವುದೇ ಆಟೊ ಬೊಬೈಲ್ ಸೇವಾ ಕೇಂದ್ರವು ಪಿಕಪ್ ಮತ್ತು ಡ್ರಾಪ್ ಲಕ್ಷಣವನ್ನು ಸೇರಿಸಿಕೊಳ್ಳಲು ಅವಕಾಶ ನೀಡುತ್ತದೆ. ಈ ಮೂಲಕ ಅಟೊ ಬೊಬೈಲ್ ಸರ್ವೀಸಿಂಗ್ ಕೇಂದ್ರಗಳು ಹಾಗೂ ಗ್ರಾಹಕರ ಅನುಕೂಲತೆಯನ್ನು ಹೆಚ್ಚಿಸುತ್ತದೆ.

ಲೆಟ್ಸ್ ಸರ್ವೀಸ್, ಗ್ರಾಹಕ ಕೇಂದ್ರಿತ ವ್ಯವಸ್ಥೆಗೆ ಒತ್ತು ನೀಡಲಿದ್ದು, ಸುಲಿತವಾದ ವಾಹನ ಮಾಲಕತ್ವದ ಅನುಭವವನ್ನು ಡಿಜಿಟಲ್ ಆಧರಿತ ಸೊಲ್ಯೂಶನ್ಸ್ ಮೂಲಕ (ಇದು ಮೆಷಿನ್ ಲರ್ನಿಂಗ್ ಲಾಗರಿಥಮ್ ಬಳಸಿಕೊಳ್ಳುತ್ತದೆ) ಕಾಯುವ ಅವಧಿಯನ್ನು ಕಡಿಮೆ ಮಾಡುತ್ತದೆ ಹಾಗೂ ಆಟೊಬೊಬೈಲ್ ಉತ್ಪಾದಕ ಸಂಸ್ಥೆಯ ಸೇವಾ ಜಾಲದ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಇತ್ತೀಚೆಗೆ ಬಿಡುಗಡೆಯಾದ "ಚೇಂಜಿಂಗ್ ಗೇರ್ಸ್‌ 2020- ಹೌ ಡಿಜಿಟಲ್ ಈಸ್ ಟ್ರಾನ್ಸ್‌ಫಾರ್ಮಿಂಗ್ ದ ಫೇಸ್ ಆಫ್ ಇಂಡಿಯನ್ ಅಟೋಮೇಟಿವ್ ಇಂಡಸ್ಟ್ರಿ" ಎಂಬ ಶೀರ್ಷಿಕೆಯ ಬಿಯಾನ್ & ಕಂಪನಿ ಹಾಗೂ ಫೇಸ್‌ಬುಕ್ ವರದಿಯ ಪ್ರಕಾರ, ಭಾರತದಲ್ಲಿ ಆಟೊಮೊಬೈಲ್ ಮಾರಾಟದ ಶೇಕಡ 40ರಷ್ಟು ಭಾಗ 2020ರ ವೇಳೆಗೆ ಡಿಜಿಟಲ್ ಪ್ರಭಾವಕ್ಕೆ ಒಳಗಾಗಲಿದೆ. 2020ರ ವೇಳೆಗೆ ಶೇಕಡ 40ರಷ್ಟು ಗ್ರಾಹಕರು ತಮ್ಮ ವಾಹನದ ದುರಸ್ತಿ ಮತ್ತು ನಿರ್ವಹಣೆ ಸೇವೆಯನ್ನು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಲಿದ್ದು, ಮುಂದಿನ ಮೂರು ವರ್ಷಗಳಲ್ಲಿ ಈ ಕ್ಷೇತ್ರ ಶೇಕಡ 26ರಷ್ಟು ಪ್ರಗತಿ ಸಾಧಿಸುವ ಸಾಧ್ಯತೆ ಇದೆ.

ಪ್ರಸ್ತುತ ಈ ಕ್ಷೇತ್ರದ ಪ್ರಗತಿ ದರ ಶೇಕಡ 14ರಷ್ಟಿದೆ. ಜೆ.ಡಿ.ಪವರ್ 2017 ಇಂಡಿಯಾ ದ್ವಿಚಕ್ರ ವಾಹನ ಗ್ರಾಹಕ ಸೇವಾ ಸೂಚ್ಯಂಕ (2ಡಬ್ಲ್ಯುಸಿಎಸ್‌ಐ) ಅಧ್ಯಯನದ ಪ್ರಕಾರ, "ಸರ್ವೀಸ್ ಕೆಂದ್ರಗಳ ಭೇಟಿಯ ವೇಳಾಪಟ್ಟಿ ನಿಗದಿ ಮತ್ತು ಪೂರ್ಣಗೊಳ್ಳುವ ಅವಧಿ ನಿಗದಿಪಡಿಸಿ ಗ್ರಾಹಕರ ಅನುಕೂಲತೆಗಳನ್ನು ಹೆಚ್ಚಿಸುವ ಮೂಲಕ ಗ್ರಾಹಕರ ತೃಪ್ತಿಯ ಮಟ್ಟವನ್ನು ಕೂಡಾ ಸುಧಾರಿಸಬಹುದು. ವಾಹನಗಳ ಪಿಕಪ್/ಡ್ರಾಪ್ ಸೇವೆಯನ್ನು ಪಡೆಯುವ ಶೇಕಡ 14ರಷ್ಟು ಗ್ರಾಹಕರು ಅಥವಾ ತಮ್ಮ ಮನೆ ಅಥವಾ ಕಚೇರಿಗಳಿಂದ ವಾಹನಗಳ ಪಿಕಪ್/ ಡ್ರಾಪ್ ವ್ಯವಸ್ಥೆ ಹೊಂದುವ ಗ್ರಾಹಕರು ತೃಪ್ತಿಪಡುವ ಸಾಧ್ಯತೆ ಈ ಸೇವೆ ಇಲ್ಲದ ಇತರ ಗ್ರಾಹಕರಿಗಿಂತ ಅಧಿಕ". ಲೆಟ್ಸ್‌ಸರ್ವೀಸ್.ಇನ್ ಇದಕ್ಕೆ ಅಗತ್ಯವಾದ ಮೂಲ ಸೌಕರ್ಯವನ್ನು ಭಾರತದ ಎಲ್ಲ ನಗರಗಳಲ್ಲಿ ತಳಮಟ್ಟದಲ್ಲಿ ಅಭಿವೃದ್ಧಿಪಡಿಸುತ್ತಿದ್ದು, ಇದು ಆಟೊಮೊಬೈಲ್ ಉತ್ಪಾದಕರು ಹಾಗೂ ಡೀಲರ್‌ಶಿಪ್ ನೆಟ್‌ವರ್ಕ್‌ಗೆ ಈ ವರ್ಗಾಂತರ ವ್ಯವಸ್ಥೆಯನ್ನು ಕಲ್ಪಿಸಿಕೊಡಲಿದೆ. ಲೆಟ್ಸ್‌ಸರ್ವೀಸ್.ಇನ್ ಪ್ರಸ್ತುತ ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಲೆಟ್ಸ್ ಸರ್ವೀಸ್ ಬ್ಯುಸಿನೆಸ್‌ಟೂಬ್ಯುಸಿನೆಸ್ ಸೇವೆಯನ್ನು ಒದಗಿಸುತ್ತಿದ್ದು, ಇದರ ಅನ್ವಯ ಉತ್ಪಾದಕರಿಂದ ಒಇಎಂ ಬೆಂಬಲ ಹೊಂದಿರುವ ಅಧಿಕೃತ ಸೇವಾ ಕೇಂದ್ರಗಳ ಜತೆ ಪಾಲುದಾರಿಕೆಯೊಂದಿಗೆ, ಇಂಥ ಕೇಂದ್ರಗಳು ತಮ್ಮ ಗ್ರಾಹಕರ ವಾಹನಗಳಿಗೆ ಪಿಕಪ್ ಮತ್ತು ಡ್ರಾಪ್ ಸೇವೆಯನ್ನು ಒದಗಿಸುತ್ತದೆ. ಲೆಟ್ಸ್ ಸರ್ವೀಸ್ ಬಹುತಂತ್ರಜ್ಞಾನ ಸೊಲ್ಯೂಶನ್ ಕೂಡಾ ಒದಗಿಸಲಿದ್ದು, ಇದು ಡೀಲರ್‌ಶಿಪ್ ಮತ್ತು ಸರ್ವೀಸ್ ಸೆಂಟರ್‌ಗಳು ಗ್ರಾಹಕರನ್ನು ತಲುಪಲು ಮತ್ತು ಸರ್ವೀಸ್ ವಿಧಿ ವಿಧಾನಗಳನ್ನು ಸುಧಾರಿಸಲು ಅನುಕೂಲಕರವಾಗಿದೆ.

"ಈ ಹೂಡಿಕೆಯು ಅತ್ಯಂತ ಪ್ರಮುಖ ಘಟ್ಟದಲ್ಲಿ ಬಂದಿದೆ. ದೇಶದ ಎಲ್ಲ ಡೀಲರ್‌ಶಿಪ್‌ಗಳಲ್ಲಿ ನಮ್ಮ ವಿಶಿಷ್ಟವಾಗಿ ನಿರ್ಮಿಸಿದ ಡಿಜಿಟಲ್ ಸೊಲ್ಯೂಶನ್ ಮೂಲಕ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನಾವು ಶ್ರಮಿಸುತ್ತಿದ್ದೇವೆ. ಬೆಂಗಳೂರು, ಮುಂಬೈ ಹಾಗೂ ಪುಣೆಯನ್ನು ಕೇಂದ್ರೀಕರಿಸಿ ಕಾರ್ಯ ನಿರ್ವಹಿಸಲಾಗುತ್ತಿದ್ದು, ಲೆಟ್ಸ್‌ಸರ್ವೀಸ್, ತಂತ್ರಜ್ಞಾನ ಆಧರಿತ ಉತ್ಪನ್ನವಾಗಿದ್ದು, ಗ್ರಾಹಕರನ್ನು ತಲುಪುವ ಹಾಗೂ ಪ್ರಕ್ರಿಯೆಯನ್ನು ಸುಧಾರಿಸುವಲ್ಲಿ ಮಹತ್ವದ ಸುಧಾರಣೆ ತರಲಿದೆ. ಈ ಹೂಡಿಕೆಯನ್ನು ನಮ್ಮ ತಂಡವನ್ನು ಬಲಗೊಳಿಸಲು ಬಳಸಿಕೊಳ್ಳಲಾಗುತ್ತದೆ ಹಾಗೂ ಇದನ್ನು ಹಲವು ನಗರಗಳಿಗೆ ವಿಸ್ತರಿಸಲು ಮತ್ತು ನಮ್ಮ ತಂತ್ರಜ್ಞಾನವನ್ನು ವಿಸ್ತತಪಡಿಸಲು ಬಳಸಲಾಗುತ್ತದೆ.

ಮುಂದಿನ 6-8 ತಿಂಗಳಲ್ಲಿ, ನಮ್ಮ ಒಇಎಂ ಸೇವೆಯ ಮೂಲಕ ಸೇವಾ ಕೇಂದ್ರಗಳ ಕ್ಷಮತೆ ಹೆಚ್ಚಿಸಲು ಮತ್ತು ಗರಿಷ್ಠಪಡಿಸುವ ನಿಟ್ಟಿನಲ್ಲಿ ದೃಷ್ಟಿ ಕೇಂದ್ರೀ ಕರಿಸುತ್ತೇವೆ. ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಡೀಲರ್‌ಗಳು ವಿಸ್ತರವಾಗಿ ನಮ್ಮ ಸೊಲ್ಯೂಶನ್ಸ್ ಬಳಸಿಕೊಳ್ಳುವಂತೆ ಮಾಡಲಿದ್ದೇವೆ" ಎಂದು ಲೆಟ್ಸ್ ಸರ್ವೀಸ್‌ನ ಸಹಸಂಸ್ಥಾಪಕ ಮತ್ತು ಸಿಇಒ ಸಚಿನ್ ವಸಂತ್ ಶಣೈ ಹೇಳುತ್ತಾರೆ.

ಈ ಹೂಡಿಕೆ ಬಗ್ಗೆ ಮಾತನಾಡಿದ ಆಕ್ವೆಸ್ ಸಮೂಹದ ಅಧ್ಯಕ್ಷ ಮತ್ತು ಸಿಇಒ ಅರವಿಂದ್ ಮೆಲ್ಲಿಗೇರಿ, "ಲೆಟ್ಸ್ ಸರ್ವೀಸ್ ಭಾರತದ ಆಟೊಮೊಬೈಲ್ ಮಾರಾಟ ಹಾಗೂ ಸೇವೆಯ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಿಸುವ ವ್ಯವಸ್ಥೆಗೆ ಚಾಲನೆ ನೀಡಿದೆ. ಇವು ಗ್ರಾಹಕರ ತೃಪ್ತಿಯ ಅಂಕದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಿದೆ. ಸೀಮಿತ ಸಂಪನ್ಮೂಲ ಮತ್ತು ಅವಧಿಯಲ್ಲಿ 350ಕ್ಕೂ ಅಧಿಕ ಕೇಂದ್ರಗಳಲ್ಲಿ ದುರಸ್ತಿ ಹಾಗೂ ನಿರ್ವಹಣೆಯನ್ನು ಡಿಜಿಟಲೀಕರಿಸಿದೆ. ಅವರ ಧೀರ್ಘಾವಧಿ ದೃಷ್ಟಿಯನ್ನು ಸಾಧಿಸುವ ನಿಟ್ಟಿನಲ್ಲಿ ನಾವು ಅವರ ಜತೆ ಪಾಲುದಾರಿಕೆಗೆ ಮುಂದಾಗಿದ್ದೇವೆ" ಎಂದು ವಿವರಿಸಿದರು.

ಲೆಟ್ಸ್ ಸರ್ವೀಸ್‌ಗೆ ಕ್ವೆಸ್ಟ್ ಗ್ಲೋಬಲ್‌ನ ಸಿಓಓ ಡಾ.ಅಜಯ್ ಪ್ರಭು, ಜ್ಯೂಲಿಯಾ ಕಂಪ್ಯೂಟಿಂಗ್ ಇನ್‌ಕಾರ್ಪೊರೇಷನ್‌ನ ಸಿಒಒ ಹಾಗೂ ಸಹಸಂಸ್ಥಾಪಕ ದೀಪಕ್ ವಿಂಚಿಯಂಥ ಉದ್ಯಮಿಗಳು ನೆರವು ನೀಡಿದ್ದಾರೆ.

ಆಕ್ವೆಸ್ ಸಮೂಹದ ಬಗ್ಗೆ: ಆಕ್ವೆಸ್ ಸಮೂಹವು 2500ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ವೈಮಾನಿಕ, ತೈಲ ಮತ್ತು ಅನಿಲ, ಅಟೋಮೋಟಿವ್ ಹಾಗೂ ಗ್ರಾಹಕ ಉತ್ಪನ್ನ ಕ್ಷೇತ್ರದ ಉತ್ಪಾದನೆ ಹಾಗೂ ಮೂಲ ಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಿದೆ. ಇದರ ಕಾರ್ಯಾಚರಣೆಯು ಆಕ್ವೆಸ್ ಎಸ್‌ಇಝೆಡ್, ಬೆಳಗಾವಿ (ಕರ್ನಾಟಕ, ಭಾರತ), ಹೂಸ್ಟನ್ (ಟಿಎಕ್ಸ್, ಅಮೆರಿಕ) ಪ್ಯಾರೀಸ್ (ಟಿಎಕ್ಸ್ ಅಮೆರಿಕ), ಒಬಿಗ್ನಿ (ಫ್ರಾನ್ಸ್), ಕೊಹ್ಲೆಟ್ (ಫ್ರಾನ್ಸ್), ಬೆಸಾನ್‌ಕಾನ್ (ಫ್ರಾನ್ಸ್) ಮತ್ತು ಪ್ಯಾರೀಸ್ (ಫ್ರಾನ್ಸ್)ನಲ್ಲಿ ಇದೆ.

ಹೆಚ್ಚಿನ ವಿವರಗಳಿಗೆ ಭೇಟಿ ನೀಡಿ, www.aequs.com ವಿವರಗಳಿಗೆ ಭೇಟಿ ನೀಡಿ: www.aequs.com

ಲೆಟ್ಸ್ ಸರ್ವೀಸ್ ಅಟೊಮೋಟಿವ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಬಗ್ಗೆ: ಲೆಟ್ಸ್ ಸರ್ವೀಸ್ ಅಟೊಮೋಟಿವ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಮೂಲದ ತಂತ್ರಜ್ಞಾನ ಆಧರಿತ ಆಟೊಮೊಬೈಲ್ ಸರ್ವೀಸ್ ಲಾಜಿಸ್ಟಿಕ್ & ಸಾಸ್ ಸ್ಟಾರ್ಟ್‌ಅಪ್ ಕಂಪನಿ. ಸಚಿತ್ ವಸಂತ್ ಶಣೈ, ಗಿರೀಶ್ ಗಂಗಾಧರ್ ಹಾಗೂ ಸಚಿನ್ ಶ್ರೀಕಾಂತ್ ರಡ್ಡರ್ ಇದನ್ನು 2015ರ ಅಕ್ಟೋಬರ್‌ನಲ್ಲಿ ಆರಂಭಿಸಿದರು. ಲೆಟ್ಸ್ ಸರ್ವೀಸ್ ಕಂಪನಿ, ಎಲ್ಲ ದ್ವಿಚಕ್ರ ಮತ್ತು ಚತುಶ್ಚಕ್ರ ಒಇಎಂಗಳಿಗೆ ಜಾಗತಿಕಬಮಟ್ಟದಲ್ಲಿ ವಿಶ್ವಾಸಾರ್ಹ ಗ್ರಾಹಕ ಸೇವಾ ಡಿಜಿಟಲೀಕರಣ ಪಾಲುದಾರನಾಗುವ ಗುರಿಯನ್ನು ಹೊಂದಿದೆ.
ಹೆಚ್ಚಿನ ವಿವರಗಳಿಗೆ ಭೇಟಿ ನೀಡಿ: www.letsservice.in.

ಸಚಿನ್ ವಸಂತ್ ಶಣೈ ಬಗ್ಗೆ: ಸಚಿನ್ ವಸಂತ್ ಶಣೈ ಅವರು ಲೆಟ್ಸ್ ಸರ್ವೀಸ್ ಅಟೊಮೋಟಿವ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸಹಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಇವರು ಎರಡನೇ ಅವಧಿಯ ಉದ್ಯಮಿಯಾಗಿದ್ದು, ಇದು ಆನ್‌ಲೈನ್‌ನಿಂದ ಆಫ್‌ಲೈನ್ ಕೇತ್ರದ ಮೊದಲ ಉದ್ಯಮಸಾಹಸವಾಗಿದೆ. ಬೆಂಗಳೂರಿನ ಸೆಂಟ್ ಜೋಸೆಫ್ಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಸ್ನಾತಕೋತ್ತರ ಪದವಿ ಪಡೆದ ಇವರು, ಮಂಗಳೂರು ವಿಶ್ವವಿದ್ಯಾನಿಲಯದ ಪದವೀಧರ. ಸ್ಟಾರ್ಟ್‌ಅಪ್ ಉದ್ಯಮಿಯಾಗುವ ಮುನ್ನ ಇವರು ಐಬಿಎಂ ಮತ್ತು ಮೆಟ್ರಿಕ್‌ಸ್ಟ್ರೀಮ್‌ನಂಥ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ವೃತ್ತಿಪರ ಕ್ರಿಕೆಟ್ ಪಟುವಾಗಿರುವ ಇವರು ವಯೋಮಿತಿಯ ಕ್ರಿಕೆಟ್‌ನಲ್ಲಿ ರಾಜ್ಯತಂಡವನ್ನು ಪ್ರತಿನಿಧಿಸಿದ್ದರು. ಬೆಂಗಳೂರಿನ ನ್ಯಾಷನಲ್ ಕ್ರಿಕೆಎಟ್ ಅಕಾಡಮಿಯಲ್ಲಿ ಇಂಗ್ಲೆಂಡಿನ ವೇಗದ ಬೌಲರ್ ಫ್ರಾಂಕ್ ಟೈಸನ್ ಅವರಿಂದ ತರಬೇತಿಯನ್ನೂ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News