ಸರಕಾರಿ ಶಾಲೆಗಳ ಬಗ್ಗೆ ಸರಕಾರ ಎಚ್ಚೆತ್ತುಕೊಳ್ಳಲಿ

Update: 2017-10-15 18:54 GMT

ಮಾನ್ಯರೆ,

ರಾಜ್ಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ಗ್ರಾಮೀಣ ಭಾಗದಲ್ಲಿ ಶಿಥಿಲಗೊಂಡಿರುವ ಸಾವಿರಾರು ಹಳೆಯ ಸರಕಾರಿ ಶಾಲೆಗಳ ಗೋಡೆ, ಮೇಲ್ಛಾವಣಿಗಳು ಸೋರುತ್ತಿವೆ.ಮತ್ತೆ ಕೆಲವು ಶಾಲೆಯ ಕಟ್ಟಡಗಳು ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಹಂತದಲ್ಲಿವೆ. ಹೀಗಿದ್ದರೂ ಕೂಡಾ ಮಕ್ಕಳನ್ನು ಅಂತಹ ಅಪಾಯಕಾರಿಯಾದ ಶಾಲಾ ಕೊಠಡಿಗಳಲ್ಲಿಯೇ ಕೂಡಿಸಿಕೊಂಡು ಪಾಠ ಮಾಡಲಾಗುತ್ತಿದೆ. ಇದು ಸರಕಾರಿ ಶಾಲೆಗಳ ನೈಜ ನಿರ್ವಹಣಾ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಇದರಿಂದ ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸುವುದೋ ಬೇಡವೋ ಎಂಬ ಆತಂಕದಲ್ಲಿದ್ದಾರೆ.

ಕಳೆದ ವರ್ಷ ಮಳೆಗಾಲದ ಸಮಯದಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮ ದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಗೋಡೆ ಕುಸಿದು ಇಬ್ಬರು ಪುಟ್ಟ ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದು, ಹನ್ನೊಂದು ವಿಧ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದರು.

ಈಗಲೂ ಇಂಥ ದುಸ್ಥಿತಿಗೆ ತಲುಪಿರುವ ಮತ್ತು ಮಳೆಯಿಂದ ಸೋರುತ್ತಿರುವ ಸಾಕಷ್ಟು ಸರಕಾರಿ ಶಾಲೆಗಳು ರಾಜ್ಯದಲ್ಲಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಇಂತಹ ಎಲ್ಲಾ ಸರಕಾರಿ ಶಾಲೆಗಳ ಸಮೀಕ್ಷೆ ನಡೆಸಿ ದುರ್ಬಲ ಮತ್ತು ಶಿಥಿಲವಾದ ಶಾಲಾ ಕಟ್ಟಡಗಳನ್ನು ತೆರವುಗೊಳಸಿ ಮೂಲ ಸೌಕರ್ಯಗಳನ್ನು ಒಳಗೊಂಡಂತೆ ಸುಸಜ್ಜಿತ ಸರಕಾರಿ ಶಾಲೆಗಳನ್ನು ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮತ್ತು ಸರಕಾರ ಗಂಭೀರವಾಗಿ ಚಿಂತಿಸಲಿ.

 ಮೌಲಾಲಿ ಕೆ. ಆಲಗೂರ, ಸಿಂದಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News