ಗಾಯಾಳು ಮಗು ಸಂಜನಾಗೆ ಮುಂದುವರಿದ ಚಿಕಿತ್ಸೆ

Update: 2017-10-19 12:09 GMT

ಬೆಂಗಳೂರು, ಅ.19: ನಗರದ ಈಜೀಪುರದ ಗುಂಡಪ್ಪ ಲೇಔಟ್ ನಲ್ಲಿ ಸೋಮವಾರ ಎರಡಂತ್ತಿನ ಕಟ್ಟಡ ಕುಸಿದ ಪ್ರಕರಣದಲ್ಲಿ ಗಾಯಗೊಂಡು   ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂರು ವರ್ಷದ ಮಗು ಸಂಜನಾ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಸುಟ್ಟ ಗಾಯಗಳ ಚಿಕಿತ್ಸಾ ವಿಭಾಗದ ಸ್ಪೆಷಲ್ ವಾರ್ಡ್ ನಲ್ಲಿ ಮಗು ಸಂಜನಾ , ಗಾಯಾಳುಗಳಾದ ಜಾನಕಿ ಮತ್ತು ದಿಲೀಪ್ ಅವರು ಚಿಕತ್ಸೆ ಪಡೆಯುತ್ತಿದ್ದಾರೆ.

ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಬೆಂಗಳೂರಿನ ಮೇಯರ್ ಸಂಪತ್ ರಾಜ್ ಇಂದು ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ಗಾಯಾಳುಗಳ  ಯೋಗಕ್ಷೇಮ ವಿಚಾರಿಸಿದರು. ಸಂಜನಾ ಸೇರಿದಂತೆ ಗಾಯಾಳುಗಳಿಗೆ   ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ವೈದ್ಯರಿಂದ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ಪಡೆದರು.
 ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದು , ಸಂಜನಾ ತಂದೆ ಶರವಣ ಮತ್ತು ತಾಯಿ ಅಶ್ವಿನಿ ಸೇರಿದಂತೆ ಒಟ್ಟು  7 ಮಂದಿ ಸಾವನ್ನಪ್ಪಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News