ಕೋಲ್ಕತಾದ ಎಲ್ ಐಸಿ ಬಿಲ್ಡಿಂಗ್ ನಲ್ಲಿ ಬೆಂಕಿ ಆಕಸ್ಮಿಕ

Update: 2017-10-19 07:22 GMT

ಕೋಲ್ಕತಾ, ಅ.19: ಇಲ್ಲಿನ ಜೀವವಿಮಾ ನಿಗಮ ಕಚೇರಿ ‘ಜೀವನ ಸುಧಾ’ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯಿಂದ ಕಟ್ಟಡ ಧಗಧಗ ಉರಿಯುತ್ತಿದೆ.

ಜವಾಹರಲಾಲ್ ನೆಹರೂ ರಸ್ತೆಯಲ್ಲಿರುವ 19 ಮಹಡಿಗಳ   'ಜೀವನ ಸುಧಾ' ಕಟ್ಟಡದ 16ನೆ ಮಹಡಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ಲೋಬಲ್ ಮಾರ್ಕೆಟ್ ಕಚೇರಿಯ ಸರ್ವರ್ ರೂಮ್ ನಲ್ಲಿ ಬೆಂಕಿ ಕಾಣಿಸಿಕೊಂಡು , ಕಟ್ಟಡದ ಎಲ್ಲಡೆ ಬೆಂಕಿ ಹರಡಿದೆ. ಬೆಂಕಿಗೆ ಕಟ್ಟಡದೊಳಗಿದ್ದ ಮಹತ್ವದ ದಾಖಲೆಗಳು ಸುಟ್ಟು ಬೂದಿಯಾಗಿದೆ ಎಂದು ತಿಳಿದು ಬಂದಿದೆ.

ಈ ಕಟ್ಟಡದಲ್ಲಿ ಜೀವವಿಮಾ ನಿಗಮ , ಸ್ಟೇಟ್ ಬ್ಯಾಂಕ್  ಆಫ್ ಇಂಡಿಯಾ ಮತ್ತು ಇತರ ಹಣಕಾಸು ಸಂಸ್ಥೆಗಳ ಕಚೇರಿ ಕಾರ್ಯಾಚರಿಸುತ್ತಿದೆ. ಕಟ್ಟಡದ 17ನೆ ಮಹಡಿಗೂ ಬೆಂಕಿ ಹರಡಿದೆ ಪ್ರತ್ಯಕ್ಷ ದರ್ಶಿಗಳು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಅಗ್ನಿ ಶಾಮಕ ದಳದ 6 ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳ ಹರ ಸಾಹಸ ಮುಂದುವರಿದಿದೆ .

ಕಟ್ಟಡದಲ್ಲಿ  ಬೆಂಕಿ ದುರಂತದಿಂದಾಗಿ ಸಾವು ನೋವು ಮತ್ತು ಸಿಲುಕೊಂಡಿರುವ ಜನರ ಬಗ್ಗೆ ಯಾವುದೇ ಮಾಹಿತಿ ಇಲ್ಲ  ಎಂದು ಕೋಲ್ಕತಾ ವೃತ್ತದ ಚೀಪ್ ಜನರಲ್ ಮ್ಯಾನೇಜರ್ ಪಿ.ಪಿ.ಸೆನ್ ಗುಪ್ತಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News