×
Ad

ನಾಮಪತ್ರ ವಾಪಸ್‌ ಪಡೆದ ಇಂದೋರ್‌ ಕಾಂಗ್ರೆಸ್‌ ಅಭ್ಯರ್ಥಿ ; ಪಕ್ಷಕ್ಕೆ ಸ್ವಾಗತ ಎಂದ ಬಿಜೆಪಿ ಶಾಸಕ

Update: 2024-04-29 13:09 IST

Photo: X/Kailash Vijayvargiya

ಭೋಪಾಲ್‌ : ಇಂದೋರ್‌ನ ಕಾಂಗ್ರೆಸ್‌ ಅಭ್ಯರ್ಥಿ ಅಕ್ಷಯ್‌ ಕಾಂತಿ ಬಮ್‌ ಅವರು ಇಂದು ತಮ್ಮ ನಾಮಪತ್ರ ವಾಪಸ್‌ ಪಡೆದುಕೊಂಡಿದ್ದಾರೆ. ಈ ಸಂದರ್ಭ ಅವರೊಂದಿಗೆ ಬಿಜೆಪಿ ಶಾಸಕ ರಮೇಶ್‌ ಮೆಂಡೊಲ ಕೂಡ ಉಪಸ್ಥಿತರಿದ್ದರು. ಇಂದೋರ್‌ನಲ್ಲಿ ಲೋಕಸಭಾ ಚುನಾವಣೆಗೆ ಇನ್ನೇನು 15 ದಿನಗಳಿವೆ ಎನ್ನುವಾಗ ಈ ಬೆಳವಣಿಗೆ ನಡೆದಿದೆ.

ನಾಮಪತ್ರ ವಾಪಸ್‌ ಪಡೆದುಕೊಂಡ ಅಕ್ಷಯ್‌ ಕಾಂತಿ ಅವರನ್ನು ಬಿಜೆಪಿಗೆ ಸ್ವಾಗತಿಸಿ ಇಂದೋರ್‌ ಬಿಜೆಪಿ ಶಾಸಕ ಹಾಗೂ ಪಕ್ಷದ ಹಿರಿಯ ನಾಯಕ ಕೈಲಾಶ್‌ ವಿಜಯವರ್ಗಿಯಾ ಟ್ವೀಟ್‌ ಮಾಡಿದ್ದಾರೆ.

“ಇಂದೋರ್‌ನ ಕಾಂಗ್ರೆಸ್‌ ಲೋಕಸಭಾ ಅಭ್ಯರ್ಥಿ ಅಕ್ಷಯ್‌ ಕಾಂತಿ ಬಮ್‌ ಜೀ ಅವರನ್ನು ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಮುಖ್ಯಮಂತ್ರಿ ಮೋಹನ್‌ ಯಾದವ್‌ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ವಿ ಡಿ ಶರ್ಮ ಅವರ ಪರವಾಗಿ ಬಿಜೆಪಿಗೆ ಆಹ್ವಾನಿಸುತ್ತಿದ್ದೇವೆ.” ಎಂದು ಅಕ್ಷಯ್‌ ಕಾಂತಿ ಅವರ ಜೊತೆಗೆ ತಾವಿರುವ ಚಿತ್ರವನ್ನು ಪೋಸ್ಟ್‌ ಮಾಡಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News