ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ

Update: 2017-10-19 16:11 GMT

ಬೆಂಗಳೂರು, ಅ.19: ಬೆಂಗಳೂರು ವಿಶ್ವವಿದ್ಯಾನಿಲಯದ ದೃಶ್ಯಕಲಾ ವಿಭಾಗದಲ್ಲಿ ಸ್ನಾತಕೋತ್ತರ ತರಗತಿಗಳ ಕಲಾ ಇತಿಹಾಸ ವಿಷಯದ ಬೋಧನೆಗಾಗಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದೃಶ್ಯಕಲಾ ಇತಿಹಾಸ ವಿಷಯದಲ್ಲಿ ಎಂವಿಎ, ಎಂಎಫ್‌ಎ ಪದವಿ ಮತ್ತು ಬೋಧನಾ ಅನುಭವವಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಸಕ್ತರು ಶೀಘ್ರವೇ ಸ್ವವಿವರಗಳ ಎರಡು ಪ್ರತಿಗಳನ್ನು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ದೃಶ್ಯಕಲಾ ವಿಭಾಗದ ಸಮನ್ವಯಾಧಿಕಾರಿಗೆ (ದೂರವಾಣಿ ಸಂಖ್ಯೆ 22961710) ಅ.15ರೊಳಗೆ ತಲುಪಿಸುವಂತೆ ದೃಶ್ಯಕಲಾ ವಿಭಾಗದ ಸಂಚಾಲಕ ಪ್ರೊ.ಜಯಕುಮಾರ್ ಜಿ.ರೆಡ್ಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News