ಗುಜರಾತಿ ವೃದ್ಧೆಯ ನೃತ್ಯದ ವಿಡಿಯೋ ಟ್ವೀಟ್ ಮಾಡಿ ಮುಜುಗರಕ್ಕೀಡಾದ ಕಿರಣ್ ಬೇಡಿ!

Update: 2017-10-20 10:20 GMT

ಹೊಸದಿಲ್ಲಿ, ಅ.20: ಗುಜರಾತಿ ಹಾಡೊಂದಕ್ಕೆ ನೃತ್ಯ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಎಂದ ಪುದುಚೇರಿಯ ಲೆ.ಗವರ್ನರ್ ಹಾಗು ಬಿಜೆಪಿ ನಾಯಕಿ ಕಿರಣ್ ಬೇಡಿ ತಮ್ಮ ಟ್ವೀಟ್ ನಿಂದ ಮುಜುಗರಕ್ಕೀಡಾಗಿದ್ದಾರೆ.

ಇದೇ ಟ್ವೀಟ್ ನಲ್ಲಿ ಕಿರಣ್ ಬೇಡಿಯವರು ಇಶಾ ಫೌಂಡೇಶನ್ ನ ಸದ್ಗುರು ಜಗ್ಗಿ ವಾಸುದೇವ್ ಅವರನ್ನೂ ಟ್ಯಾಗ್ ಮಾಡಿದ್ದರು. ಗುಜರಾತಿ ಹಾಡೊಂದಕ್ಕೆ ಸುಮಾರು 97 ವಯಸ್ಸಿನ ವೃದ್ಧೆಯೊಬ್ಬರು ನೃತ್ಯ ಮಾಡುತ್ತಿದ್ದ ವಿಡಿಯೋವನ್ನು ಟ್ವೀಟ್ ಮಾಡಿದ್ದ ಕಿರಣ್ ಬೇಡಿ, “97ನೆ ವಯಸ್ಸಿನಲ್ಲಿ ದೀಪಾವಳಿಯ ಉತ್ಸಾಹ. ಇವರು ನರೇಂದ್ರ ಮೋದಿಯವರ ತಾಯಿ (ಹಿರಾಬೆನ್ ಮೋದಿ-1920) ಮನೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ” ಎಂದು ಟ್ವೀಟ್ ಮಾಡಿ ಈ ಟ್ವೀಟ್ ಗೆ ಜಗ್ಗಿ ವಾಸುದೇವ್ ಅವರನ್ನು ಟ್ವೀಟ್ ಮಾಡಿದ್ದರು.

ತದನಂತರ ಕಿರಣ್ ಬೇಡಿಯವರಿಗೆ ಪ್ರಮಾದದ ಅರಿವಾಗಿ, ತಪ್ಪು ಮಾಹಿತಿಯಿಂದಾಗಿ ವಿಡಿಯೋ ಟ್ವೀಟ್ ಮಾಡಿ ಮೋದಿಯವರ ತಾಯಿ ಎಂದಿದ್ದೆ. ಆದರೆ ಈ ವಯಸ್ಸಿನಲ್ಲೂ ನೃತ್ಯ ಮಾಡುತ್ತಿರುವ ಇವರಿಗೆ ಸೆಲ್ಯೂಟ್” ಎಂದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News