ಸರಿಯಾದ ಜೀವನ ಶೈಲಿಯಿಂದ ನಮ್ಮ ಆರೋಗ್ಯ ರಕ್ಷಿಸಬಹುದು: ಹಿರೇಮಗಳೂರು ಕಣ್ಣನ್

Update: 2017-10-20 11:32 GMT

ಚಿಕ್ಕಮಗಳೂರು, ಅ.20: ಪ್ರತಿಯೊಬ್ಬ ಮನುಷ್ಯನು ತನ್ನ ಆರೋಗ್ಯವನ್ನು ಕಾಪಡಿಕೊಳ್ಳುವುದು ಅವರವರ ಕೈಯಲ್ಲಿದೆ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕೋಟೆ ಬಡಾವಣೆಯಲ್ಲಿ ಸ್ವಾಸ್ಥ್ಯ ಆಯುರ್ವೇದ ಆಸ್ಪತ್ರೆ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಿಯಾದ ಜೀವನ ಶೈಲಿಯಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದ ಅವರು, ಭಾರತ ದೇಶವು ವಿಶ್ವಕ್ಕೆ ಆಯುರ್ವೇದ ಪದ್ಧತಿಯನ್ನು ನೀಡಿದೆ. ಇದಕ್ಕೆ ಭಾರತೀಯ ವೈದ್ಯರು ಉತ್ತಮ ಕೊಡುಗೆ ನೀಡಿದ್ದಾರೆ. ಅನೇಕ ಕಾಯಿಲೆಗಳಿಗೆ ಇಂದು ಆಯುರ್ವೇದದಲ್ಲಿ ಔಷಧಿ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಉಚಿತ ತಪಾಸಣಾ ಶಿಬಿರಗಳನ್ನು ಆಯೋಜಿಸುವುದರಿಂದ ಬಡ ಜನತೆಗೆ ಉಪಯೋಗವಿದ್ದು, ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರೇಖಾ ಪ್ರೇಂ ಕುಮಾರ್ ಪ್ರಾರ್ಥಿಸಿದರು, ವೈದ್ಯರಾದ ಶ್ರೀ ವಿಕ್ರಂ ಸ್ವಾಗತ ಭಾಷಣ ಮಾಡಿದರು. ವೈದ್ಯ ರಾಮಾನುಜ ಕೆ.ಕೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News