ಹನೂರು: ಮಲೈ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ

Update: 2017-10-20 11:46 GMT

ಹನೂರು, ಅ.20:  ರಾಜ್ಯದ ಸುಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಯ ಪ್ರಯುಕ್ತ ಶ್ರೀ ಸ್ವಾಮಿಯ ಮಹಾರಥೋತ್ಸವ ಹಾಗೂ ಹಲವು ಪೂಜಾ ಕೈಕಂರ್ಯಗಳು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಶುಕ್ರವಾರ ಜರಗಿತು.

ಮಲೈಮಹದೇಶ್ವರ ಸನ್ನಿದ್ಧಿಯಲ್ಲಿ ಮುಂಜಾನೆಯಿಂದಲೇ ಎಳ್ಳು ಕಟ್ಟಿದ ಎಣ್ಣೆಯಿಂದ ಸ್ವಾಮಿಗೆ ಎಣ್ಣೆ ಮಜ್ಜಿನ ಸೇವೆ, ಬಿಲ್ಪಾರ್ಚನೆ, ವಿಶೇಷ ಅಭಿಷೇಕ ಇನ್ನಿತರ ಪೂಜಾ ಕೈಂಕರ್ಯಗಳು ನೆರವೇರಿತು. ಮಲೈಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ ಲಕ್ಷಾಂತರ ಭಕ್ತರು ದೇವಸ್ಥಾನದ ಅಂತರ ಗಂಗೆಯಲ್ಲಿ ಪುಣ್ಯಸ್ಥಾನ ಮಾಡಿ ಸರಧಿ ಸಾಲಿನಲ್ಲಿ ದೇವರ ದರ್ಶನ ಪಡೆದದರು. 

ಮಹಾರಥೋತ್ಸವದಲ್ಲಿ ಲಕ್ಷಾಂತರ ಮಂದಿ ಭಾಗಿ: ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ಹಾಗೂ ರಾಜ್ಯದ ರಾಮನಗರ, ಕನಕಪುರ, ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಇನ್ನಿತರ ರಾಜ್ಯದ ನಾನಾ ಭಾಗಗಳಿಂದ ಬಂದ  ಲಕ್ಷಾಂತರ ಭಕ್ತರ ದಂಡೇ  ಮಲೈಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಮಹರಥೋತ್ಸವದಲ್ಲಿವ ಪಾಲ್ಗೂಂಡು ಪುನೀತರಾದರು. ಅಲ್ಲದೆ, ರಥೋತ್ಸವದ ವೇಳೆ ಹರಕೆ ಹೂತ್ತ ಭಕ್ತರು  ಧವಸ ಧಾನ್ಯಗಳು, ಹಣ್ಣು,  ನಾಣ್ಯದ ಜೊತೆಗೆ ಇನ್ನಿತರ ಪದಾರ್ಥಗಳನ್ನು ರಥಕ್ಕೆ ಎಸುವುದರ ಮುಖಾಂತರ ತಮ್ಮ ಹರಕೆಗಳನ್ನು ಸಲ್ಲಸಿದರು. ಇದೇ ವೇಳೆ ಮಂಗಳವಾದ್ಯಕ್ಕ ತಕ್ಕಂತೆ ಕುಣಿದು ಕುಪ್ಪಳಿಸಿ, ಮಾದಪ್ಪನಿಗೆ ಉಘೇ ಉಘೇ ಎಂಬುದರ ಘೋಷವಾಕ್ಯಗಳನ್ನು ಕೂಗಿದರು. ಇದೇ ವೇಳೆಯಲ್ಲಿ ಶ್ರೀ ಸಾಲೂರು ಬೃಹನ್ಮಠದ ಶ್ರೀ ಗುರುಸ್ವಾಮಿ, ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಎಂ.ಜೆ.ರೂಪ, ಮಾಧುರಾಜು , ಬೇಡಗಂಪಣ ಹಾಗೂ ಸಹಸ್ರಾರು ಭಕ್ತರು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.

ವಾಹನಗಳ ದಟ್ಟನೆ: ಮಲೈಮಹದೇಶ್ವರ ಬೆಟ್ಟಕ್ಕೆ ತರಳುವ ಸಂದರ್ಭದಲ್ಲಿ ಹನೂರು ಪಟ್ಟಣದ  ಮುಖ್ಯ ರಸ್ತೆಯು ಕಿರಿದಾದ ಪರಿಣಾಮ ವಾಹನಗಳ ದಟ್ಟನೆಯಿಂದ ಅರ್ಧ ತಾಸುಗಳ ಕಾಲ ಸಾಲಾಗಿ ನಿಂತ ಪ್ರಸಂಗವು ನೆಡಯಿತು. 


   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News