ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ಶುಲ್ಕ ಪಾವತಿಗೆ ಅವಧಿ ವಿಸ್ತರಣೆ

Update: 2017-10-25 14:03 GMT

ಬೆಂಗಳೂರು, ಅ. 25: ಮಾರ್ಚ್ 2018ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಪುನರಾವರ್ತಿತ ಅಭ್ಯರ್ಥಿಗಳ ಶುಲ್ಕ ಸಂದಾಯ ಮಾಡಲು ಅ.31ರ ವರೆಗೆ ಅವಧಿ ವಿಸ್ತರಿಸಲಾಗಿದೆ.

ಸದರಿ ಪರೀಕ್ಷಗೆ ಖಾಸಗಿ ಅಭ್ಯರ್ಥಿಗಳನ್ನು ನೋಂದಾಯಿಸಿಕೊಳ್ಳಲು ಕಾಲಾವಕಾಶವನ್ನು ಅ.31ರ ವರೆಗೆ ವಿಸ್ತರಣೆ ಮಾಡಲಾಗಿದೆ.

ಈ ಸಂಬಂಧ ಇಲಾಖೆ ಹೊರಡಿಸುವ ಸುತ್ತೋಲೆ ಹಾಗೂ ಅಧಿಸೂಚನೆ ಹೆಚ್ಚಿನ ವಿವರಗಳನ್ನು ಇಲಾಖೆ ವೆಬ್‌ಸೈಟ್  www.puc.kar.inc.in ನಲ್ಲಿ ಪ್ರಕಟಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News