ಸರಕಾರದ ದ್ವಂದ್ವ ನೀತಿ

Update: 2017-11-01 18:44 GMT

ಮಾನ್ಯರೆ,

ಕೇಂದ್ರ ಸರಕಾರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಆಧಾರ್ ಸಂಖ್ಯೆ ಜೋಡಣೆ ಮಾಡದ ಪಡಿತರ ಚೀಟಿದಾರರಿಗೂ, ಪಡಿತರ ವಿತರಣೆಯನ್ನು ನಿರಾಕರಿಸಬಾರದೆಂದು ರಾಜ್ಯಗಳಿಗೆ ಸೂಚಿಸಿದೆ.

ಆದರೆ ರಾಜ್ಯ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಆಧಾರ್ ಜೋಡಣೆ ಮಾಡದ ಪಡಿತರದಾರರಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲು ನಿರಾಕರಿಸುತ್ತಿದೆ. ಅಲ್ಲದೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ಪಡಿತರದಾರರಿಗೆ ಸೌಲಭ್ಯ ಕಲ್ಪಿಸದೆ ವಂಚಿಸಲಾಗುತ್ತಿದೆ
ನ್ಯಾಯ ಬೆಲೆ ಅಂಗಡಿಗಳಲ್ಲಿ ತೂಕದ ಯಂತ್ರಗಳು ಇದ್ದರೂ ಬಳಸುತ್ತಿಲ್ಲ. ಹಾಗಾಗಿ ಪ್ರತೀ ವ್ಯಕ್ತಿಗೆ ನೀಡಲಾಗುವ ಧಾನ್ಯಗಳ ತೂಕದಲ್ಲಿ ಸುಮಾರು ಒಂದು ಕೆ.ಜಿ ಕಡಿಮೆ ತೂಕ ಬರುತ್ತಿದೆ. ಗಣಕಯಂತ್ರ ವ್ಯವಸ್ಥಿತವಾಗಿ ಹಾಗೂ ಶೀಘ್ರವಾಗಿ ಕಾರ್ಯ ನಿರ್ವಹಿಸದ ಕಾರಣ ಉದ್ದನೆಯ ಸಾಲಿನಲ್ಲಿ ನಿಲ್ಲಬೇಕಾದ ಮತ್ತು ಕಾಲಹರಣ ಮಾಡಬೇಕಾದ ಸ್ಥಿತಿ ತಲೆದೋರಿದೆ.
ಹೆಚ್ಚಿನ ಕಡೆ ನಿಗದಿತ ಸಮಯದಲ್ಲಿ ಅಂಗಡಿಗಳನ್ನು ತೆರೆಯುತ್ತಿಲ್ಲ. ಅಲ್ಲದೆ ಪ್ರತೀ ತಿಂಗಳ ದಿನಾಂಕ 28 ಹಾಗೂ ನಂತರದ ದಿನಗಳಲ್ಲಿ ಪಡಿತರ ವಿತರಣೆಯನ್ನು ನಿರಾಕರಿಸಲಾಗುತ್ತಿದೆ

ಆದ್ದರಿಂದ ಸಂಬಂಧಪಟ್ಟ ಸರಕಾರದ ಸಚಿವರು ಹಾಗೂ ಅಧಿಕಾರಿಗಳು, ಗ್ರಾಹಕರು ಅನುಭವಿಸುತ್ತಿರುವ ನಿರಂತರ ತೊಂದರೆಗಳನ್ನು ಹಾಗೂ ವಂಚನೆಗಳನ್ನು ಶಾಶ್ವತವಾಗಿ ತಡೆಗಟ್ಟಲು ಪ್ರಯತ್ನಿಸಬೇಕಾಗಿದೆ.

Writer - -ಜಯರಾಮು, ಬೆಂಗಳೂರು

contributor

Editor - -ಜಯರಾಮು, ಬೆಂಗಳೂರು

contributor

Similar News