ರೆಡ್ಡಿ ಮಗಳ ಅದ್ದೂರಿ ಮದುವೆಯ ಬಗ್ಗೆ ಸಿಬಿಐ ತನಿಖೆ ?

Update: 2017-11-08 05:50 GMT

ಬೆಂಗಳೂರು, ನ.8:ಬಳ್ಳಾರಿಯ  ಗಣಿ ಉದ್ಯಮಿ ಹಾಗೂ ಮಾಜಿ ಸಚಿವ  ಗಾಲಿ ಜನಾರ್ದನ ರೆಡ್ಡಿ ಮಗಳ ಅದ್ದೂರಿ ಮದುವೆ ಬಗ್ಗೆ ಸಿಬಿಐ ತನಿಖೆ ನಡೆಯುವ ಸಾಧ್ಯತೆ ಕಂಡು ಬಂದಿದೆ.

ಬೆಂಗಳೂರಿನ ಅರಮನೆ ಆವರಣದಲ್ಲಿ  ನ.17, 2016ರಲ್ಲಿ ಬಹುಕೋಟಿ ರೂ ವೆಚ್ಚದಲ್ಲಿ ನಡೆದಿರುವ ಜನಾರ್ದನ ರೆಡ್ಡಿ ಅವರ ಮಗಳ ಮದುವೆ ನಡೆದಿತ್ತು. ಈ ಮದುವೆಗೆ ಆದಾಯದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಕೋರಿ   ಗಣಿ ಉದ್ಯಮಿ ಟಪಾಲ್ ಗಣೇಶ್ ಎಂಬವರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು.

ಪ್ರಧಾನಿ ಕಚೇರಿಯು ಟಪಾಲ್ ಗಣೇಶ್ ಪತ್ರಕ್ಕೆ ಸ್ಪಂದಿಸಿದ್ದು,  ಕೇಂದ್ರ ವಿಚಕ್ಷಣ ದಳ ಈ ಸಂಬಂಧ ಸಿಬಿಐಗೆ ಪತ್ರ ಬರೆದಿದೆ, ಇದೀಗ ಸಿಬಿಐ ರೆಡ್ಡಿ ಮಗಳ ಅದ್ದೂರಿ ಮದುವೆಗೆ ಆದಾಯದ ಮೂಲದ ಬಗ್ಗೆ ಸಿಬಿಐ ತನಿಖೆಗೆ ಮುಂದಾಗಿದೆ ಎಂದು ತಿಳಿದು ಬಂದಿದೆ.

ರೆಡ್ಡಿ ಮಗಳು ಬ್ರಹ್ಮಣಿ  - ರಾಜೀವ್‌ರೆಡ್ಡಿ ಮದುವೆಯ ಬೆನ್ನಲ್ಲೇ  ಆದಾಯ ತೆರಿಗೆ ಅಧಿಕಾರಿಗಳ ತಂಡ ರೆಡ್ಡಿ ಅವರ ಕಚೇರಿಯ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News