ಸಮ-ಬೆಸ ನಿಯಮ ಜಾರಿ ನಿರ್ಧಾರ ಹಿಂಪಡೆದ ದಿಲ್ಲಿ ಸರಕಾರ

Update: 2017-11-11 14:59 GMT

ಹೊಸದಿಲ್ಲಿ, ನ.11: ಸೋಮವಾರದಿಂದ ದಿಲ್ಲಿಯಲ್ಲಿ ಸಮ-ಬೆಸ ಸಂಚಾರ ನಿಯಮ ಯೋಜನೆ ಜಾರಿಗೊಳಿಸುವ ನಿರ್ಧಾರವನ್ನು ವಾಪಾಸು ಪಡೆಯಲಾಗಿದೆ ಎಂದು ದಿಲ್ಲಿಯ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ತಿಳಿಸಿದ್ದಾರೆ.

   ಯಾವುದೇ ವಿನಾಯಿತಿ(ದ್ವಿಚಕ್ರ ವಾಹನ ಸವಾರರಿಗೆ , ಮಹಿಳೆಯರು ಚಲಾಯಿಸುವ ವಾಹನಗಳಿಗೆ ಇತ್ಯಾದಿ) ಇಲ್ಲದೆ ನಿಯಮ ಜಾರಿಗೊಳಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ದಿಲ್ಲಿ ಸರಕಾರಕ್ಕೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಅವರು ಹೇಳಿದರು.

ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನ ಹೊರತುಪಡಿಸಿ ಇತರ ಯಾವುದೇ ವಾಹನಗಳಿಗೆ ಸಮ-ಬೆಸ ನಿಯಮದಿಂದ ವಿನಾಯಿತಿ ನೀಡಲಾಗದು ಎಂದು ಎನ್‌ಜಿಟಿ ಸೂಚಿಸಿದೆ. ಆದರೆ ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿಮಾಡಿಕೊಳ್ಳಲು ಸರಕಾರಕ್ಕೆ ಇಚ್ಛೆಯಿಲ್ಲ ಎಂದವರು ಹೇಳಿದರು. ರಾಜ್ಯದಲ್ಲಿ ದಟ್ಟವಾದ ಹೊಗೆ ಮಂಜು ಆವರಿಸಿದ ಕಾರಣ ಸಂಚಾರ ವ್ಯವಸ್ಥೆಗೆ ತೊಡಕಾಗಿರುವುದರಿಂದ ನ.13ರಿಂದ 17ರವರೆಗೆ ಸಮ-ಬೆಸ ವಾಹನ ಸಂಚಾರ ನಿಯಮ ಜಾರಿಗೊಳಿಸಲು ಈ ಹಿಂದೆ ದಿಲ್ಲಿ ಸರಕಾರ ನಿರ್ಧರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News