‘ಪಪ್ಪು’ ಪದ ಬಳಸಬೇಡಿ: ಗುಜರಾತ್ ಬಿಜೆಪಿಗೆ ಚುನಾವಣಾ ಆಯೋಗ ಸೂಚನೆ

Update: 2017-11-15 05:32 GMT

ಅಹ್ಮದಾಬಾದ್, ನ.15: ಗುಜರಾತ್ ಅಸೆಂಬ್ಲಿ ಚುನಾವಣಾ ಜಾಹೀರಾತಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಅವಮಾನಿಸುವ ರೀತಿಯಲ್ಲಿ ‘ಪಪ್ಪು’ ಪದ ಬಳಕೆಗೆ ಮುಂದಾದ ಆಡಳಿತರೂಢ ಬಿಜೆಪಿಗೆ ಮುಖಭಂಗವಾಗಿದೆ. ಚುನಾವಣೆ ಆಯೋಗವು ಚುನಾವಣಾ ಜಾಹೀರಾತಿನಲ್ಲಿ ಇಂತಹ ಪದ ಬಳಸದಂತೆ ತಾಕೀತು ಮಾಡಿದೆ.

ರಾಹುಲ್ ಗಾಂಧಿಯನ್ನು ಗೇಲಿ ಮಾಡಲು ವಿರೋಧ ಪಕ್ಷಗಳು ಅದರಲ್ಲೂ ಬಿಜೆಪಿ ‘ಪಪ್ಪು’ ಎಂಬ ಪದವನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಥೇಚ್ಛವಾಗಿ ಬಳಸುತ್ತಾ ಬಂದಿದೆ. ಮುಂದಿನ ತಿಂಗಳು ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯನ್ನು ಹಣಿಯಲು ಎಲೆಕ್ಟ್ರಾನಿಕ್ ಜಾಹೀರಾತಿನಲ್ಲಿ ಪಪ್ಪು ಪದ ಬಳಕೆಗೆ ನಿರ್ಧರಿಸಿದ್ದ ರಾಜ್ಯ ಬಿಜೆಪಿ ಈ ಕುರಿತು ಅನುಮತಿಗಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ಕಳೆದ ತಿಂಗಳು ಅರ್ಜಿ ಸಲ್ಲಿಸಿತ್ತು.

 ಬಿಜೆಪಿಯ ಜಾಹೀರಾತಿನ ಪ್ರತಿಯನ್ನು ತಿರಸ್ಕರಿಸಿದ ಗುಜರಾತ್‌ನ ಮುಖ್ಯ ಚುನಾವಣಾ ಅಧಿಕಾರಿ(ಸಿಇಒ) ಜಾಹೀರಾತಿನಲ್ಲಿ ಯಾವುದೇ ವ್ಯಕ್ತಿಗೆ ಸಂಬಂಧ ಕಲ್ಪಿಸಿ ಪದ ಬಳಕೆ ಮಾಡಬಾರದು. ಪಪ್ಪು ಪದ ಬಳಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಚುನಾವಣಾ ಅಧಿಕಾರಿಗಳು ಅವಮಾನಕಾರಿ ಪದವನ್ನು ತಕ್ಷಣವೇ ತೆಗೆದುಹಾಕುವಂತೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News