ಜೆಎನ್‌ಯು: ವಿದ್ಯಾರ್ಥಿ ನಜೀಬ್ ನಾಪತ್ತೆ ಪ್ರಕರಣ: ಅಪರಿಚಿತ ಮೃತದೇಹದ ದಾಖಲೆ ಪರಿಶೀಲನೆಗೆ ಸಿಬಿಐ ನಿರ್ಧಾರ

Update: 2017-11-17 17:26 GMT

ಹೊಸದಿಲ್ಲಿ, ನ. 17: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲ ಯದ ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಈಗ ಗುರುತು ಪತ್ತೆಯಾಗದ ಮೃತದೇಹಗಳ ದಾಖಲೆಗಳನ್ನು ಹುಡುಕುತ್ತಿದೆ.

 ಕಳೆದ ಒಂದು ವರ್ಷದಲ್ಲಿ ದಿಲ್ಲಿ ಪೊಲೀಸರು ದಾಖಲಿಸಿದ ಅಪರಿಚಿತ ಶವ ಪತ್ತೆಯಾದ ಪ್ರಕರಣಗಳನ್ನು ಸಿಬಿಐ ಪರಿಶೀಲಿಸುತ್ತಿದೆ.

ನಜೀಬ್ ನಾಪತ್ತೆಯಾದ ಬಳಿಕ ಪತ್ತೆಯಾದ ಅಪರಿಚಿತ ಮೃತದೇಹಗಳ ಬಗ್ಗೆ ವಿವರ ನೀಡುವಂತೆ ಸಿಬಿಐ ಪೊಲೀಸರನ್ನು ಕೋರಿದೆ. ಇಂತಹ 3,000 ಪ್ರಕರಣಗಳು ಅಂಕಿ-ಅಂಶಗಳು ಪೊಲೀಸರಲ್ಲಿವೆ. ಉತ್ತಮ ಸಹಕಾರಕ್ಕಾಗಿ ನೋಡಲ್ ಅಧಿಕಾರಿ ನಿಯೋಜಿಸುವಂತೆ ಸಿಬಿಐ ಪೊಲೀಸರಲ್ಲಿ ವಿನಂತಿಸಿದೆ.

ಸಿಬಿಐ ಡಿಐಜಿ ಜಸ್ಬೀರ್ ಸಿಂಗ್ ವಿವರ ಕೋರಿ ದಿಲ್ಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News