ಅಕ್ರಮ ಶಸ್ತ್ರಾಸ್ತ್ರ ವಶ: ಮೂವರ ಬಂಧನ

Update: 2017-11-18 14:37 GMT

ಬೀದರ್, ನ.18: ಉತ್ತರ ಪ್ರದೇಶದಿಂದ ಗಡಿ ಜಿಲ್ಲೆ ಬೀದರ್‌ಗೆ ಅಕ್ರಮ ಶಸ್ತ್ರಾಸ್ತ್ರಗಳು ಸರಬರಾಜಾಗುತ್ತಿರುವ ಜಾಲವನ್ನು ಬಯಲಿಗೆಳೆದಿರುವ ಪೊಲೀಸರು, ನಾಲ್ವರನ್ನು ಬಂಧಿಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಬಹಳ ದಿನಗಳಿಂದ ಉತ್ತರ ಪ್ರದೇಶ ಸೇರಿ ವಿವಿಧ ರಾಜ್ಯಗಳಿಂದ ಬೀದರ್‌ಗೆ ಅಕ್ರಮ ಶಸ್ತ್ರಾಸ್ತ್ರಗಳು ಪೂರೈಕೆಯಾಗುತ್ತಿದ್ದ ಬಗ್ಗೆ ಕಣ್ಣಿಟ್ಟಿದ್ದ ಪೊಲೀಸರು ಶನಿವಾರ ನಾಲ್ವರನ್ನು ಬಂಧಿಸಿ ಅವರಿಂದ 3 ನಾಡ ಪಿಸ್ತೂಲು ಹಾಗೂ 8 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News