ಭಾರತೀಯ ವಿ. ಶಾಂತಾರಾಮ್‌ಗೆ ಗೂಗಲ್ ಗೌರವ

Update: 2017-11-18 14:56 GMT

ಮುಂಬೈ, ನ. 17: ಗೂಗಲ್ ಶನಿವಾರ ವಿ. ಶಾಂತಾರಾಮ್ ಆಲಿಯಾಸ್ ಅಣ್ಣಾಸಾಹೇಬ್ ಎಂದೇ ಖ್ಯಾತರಾದ ಭಾರತದ ಜನಪ್ರಿಯ ಚಿತ್ರನಿರ್ದೇಶಕ, ನಟ ಹಾಗೂ ಲೇಖಕ ಶಾಂತಾರಾಮ್ ರಾಜಾರಾಮ್ ವಾಂಕುಡ್ರೆ ಅವರ 116ನೇ ಜನ್ಮ ದಿನಾಚರಣೆಯನ್ನು ಡೂಗಲ್ ರಚಿಸುವ ಮೂಲಕ ಆಚರಿಸಿತು.

ಶಾಂತಾರಾಮ್ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮರಾಠಿ ಜೈನ್ ಕುಟುಂಬದಲ್ಲಿ 1901 ನವೆಂಬರ್ 18ರಂದು ಜನಿಸಿದರು.

ಅವರು ತನ್ನ 20ನೇ ವಯಸ್ಸಿನಲ್ಲಿ ಮೂಕಿ ಚಿತ್ರಗಳಲ್ಲಿ ಅಭಿನಯಿಸಲು ಆರಂಭಿಸಿದರು. 7 ವರ್ಷಗಳ ಬಳಿಕ ಅವರು ದಂತಕತೆ ದುಂಡಿರಾಜ್ ಗೋವಿಂದ ಫಾಲ್ಕೆ ಆಲಿಯಾಸ್ ದಾದಾ ಸಾಹೇಬ್ ಪಾಲ್ಕೆ ನಿರ್ಮಿಸಿದ ರಾಜಾ ಹರಿಶ್ಚಂದ್ರ (1913) ಎಂಬ ಪರಿಪೂರ್ಣ ಚಿತ್ರದಲ್ಲಿ ನಟಿಸಿದರು.

 ಅನಂತರ, ಬಹುಮುಖಿ ಪ್ರತಿಭೆಯ ಶಾಂತಾರಾಮ್ ನಟನೆಯನ್ನು ಮಾತ್ರ ಮುಂದುವರಿಸಲಿಲ್ಲ. ಬದಲಾಗಿ ಚಿತ್ರ ನಿರ್ಮಾಣಕ್ಕೆ ಇಳಿದರು. ನಟನೆ, ನಿರ್ಮಾಣ -ನಿರ್ದೇಶನ, ಮರಾಠಿ, ಹಿಂದಿಯಲ್ಲಿ ಸ್ಕ್ರಿಪ್ಟ್ ರಚನೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದರು.

  ಸಾಮಾಜಿಕ ಸಂದೇಶಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಿನೆಮಾ ಉತ್ತಮ ಮಾಧ್ಯಮ ಎಂಬ ಅರಿವನ್ನು ಆರಂಭದಲ್ಲೇ ಹೊಂದಿದವರಲ್ಲಿ ಶಾಂತಾರಾಮ್ ಕೂಡ ಒಬ್ಬರು. ಸಮಾಜದಲ್ಲಿ ಈಗಲೂ ತಾಂಡವ ಆಡುತ್ತಿರುವ ಜಾತಿ ಪದ್ಧತಿ, ವರದಕ್ಷಿಣೆ ಪಿಡುಗು, ಕೋಮಸೌಹಾರ್ದ, ಸಾಮಾಜಿಕ-ಆರ್ಥಿಕ ಭಿನ್ನತೆ, ಶ್ರೀಮಂತ-ಬಡವರ ನಡುವಿನ ಕಂದರ ಮೊದಲಾದ ವಿಷಯಗಳೇ ಆಗಿನ ಅವರ ಚಿತ್ರದ ವಸ್ತುವಾಗಿರುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News