ಜಮ್ಮು-ಕಾಶ್ಮೀರದಲ್ಲಿ ಪ್ಯಾಲೆಟ್ ಗುಂಡಿನಿಂದ 1,725 ಜನರಿಗೆ ಗಾಯ: ಸರಕಾರ

Update: 2017-11-18 16:35 GMT

ಶ್ರೀಗನರ, ನ. 18: ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನಿ ವಾನಿ ಹತ್ಯೆ ಬಳಿಕ 2016ರ ಜುಲೈ ಯಿಂದ ಕಣಿವೆಯಲ್ಲಿ ಸಂಭವಿಸಿದ ಗಲಭೆ ಅವಧಿಯಲ್ಲಿ ಭದ್ರತಾ ಪಡೆ ಯೋಧರು ಹಾರಿಸಿದ ಪ್ಯಾಲೆಟ್ ಗುಂಡಿಗೆ 1,725ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಜಮ್ಮು ಹಾಗೂ ಕಾಶ್ಮೀರದಲ್ಲಿರುವ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರ ಹೇಳಿದೆ.

ಕಾಶ್ಮೀರದಲ್ಲಿ ಎರಡು ತಿಂಗಳು ನಿರಂತರ ಕರ್ಫ್ಯೂ ವಿಧಿಸಿದ ಸಂದರ್ಭ ಹಾಗೂ ನಾಲ್ಕು ತಿಂಗಳು ಬಂದ್ ಆದ ಸಂದರ್ಭ ಪ್ಯಾಲೆಟ್ ಗುಂಡಿನಿಂದ ಗಾಯಗೊಂಡ ವ್ಯಕ್ತಿಗಳ ವಿವರಗಳನ್ನು ಸರಕಾರ ಮಾನವ ಹಕ್ಕು ಆಯೋಗಕ್ಕೆ ಕಳುಹಿಸಿ ಕೊಟ್ಟಿದೆ.

 ಕಾಶ್ಮೀರದ 10ರ ಪೈಕಿ 8 ಜಿಲ್ಲೆಗಳ ಉಪ ಆಯುಕ್ತರು ನೀಡಿದ ವರದಿ ಆಧಾರದ ಅಧಿಕೃತ ಅಂಕಿ-ಅಂಶದ ಪ್ರಕಾರ 2016 ಜುಲೈ 8ರಂದು ಬುರ್ಹಾನಿ ವಾನಿ ಹತ್ಯೆಯಾದ ಬಳಿಕ 1,725 ಮಂದಿ ಪ್ಯಾಲೆಟ್ ಗುಂಡಿನಿಂದ ಗಾಯ ಗೊಂಡಿದ್ದಾರೆ.

ಹೆಚ್ಚಿನ ಜನರಿಗೆ ಕಣ್ಣಿಗೆ ಗಾಯವಾಗಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿ ಕನಿಷ್ಠ 6 ಮಂದಿ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಇತರರಿಗೆ ಕಾಲು, ಕಣ್ಣುಗುಡ್ಡೆ, ಶ್ವಾಸಕೋಶ, ಮುಖ, ಎದೆ, ತಲೆ, ಭುಜಕ್ಕೆ ಗಾಯಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News