ದಾವಣಗೆರೆ: ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಪರಿಶೀಲನಾ ಸಭೆ

Update: 2017-11-20 18:36 GMT

ದಾವಣಗೆರೆ, ನ.20: ಪ್ರತಿ ಸಾರ್ವಜನಿಕರ ಮಾನವ ಹಕ್ಕುಗಳನ್ನು ಕಾಪಾಡಿಕೊಂಡು ಬರುವುದು ಎಲ್ಲ ಸರಕಾರಿ ಇಲಾಖೆ, ಅಧಿಕಾರಿಗಳು ಮತ್ತು ಪ್ರಾಧಿಕಾರದ ಕತರ್ವ್ಯ ಎಂದು ರಾಜ್ಯ ವಾನವ ಹಕ್ಕು ಆಯೋಗದ ಸದಸ್ಯ ಸಿ.ಜಿ. ಹುನಗುಂದ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗದ್ದ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರ ವಿಚಾರದಲ್ಲಿ ಯಾವುದೇ ಅಧಿಕಾರಿಗಳ, ಪ್ರಾಧಿಕಾರದ ಕರ್ತವ್ಯಲೋಪ, ಅಧಿಕಾರದ ದುರುಪಯೋಗವನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಜುಲೈ 2007ರಲ್ಲಿ ರಾಜ್ಯದಲ್ಲಿ ಮಾನವ ಹಕ್ಕು ಆಯೋಗ ಆರಂಭಗೊಂಡಿದ್ದು, ಅಂದಿನಿಂದ ಪ್ರಸಕ್ತ ಸಾಲಿನ ಸೆಪ್ಟಂಬರ್‌ವರೆಗೆ 70,779 ಪ್ರಕರಣಗಳು ದಾಖಲಾಗಿವೆ. 64,728 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇನ್ನೂ 6,051 ಪ್ರಕರಣಗಳು ಬಾಕಿ ಇವೆ ಎಂದರು.

ಜಿಲ್ಲೆಯಲ್ಲಿ ಆಯೋಗ ಆರಂಭಗೊಂಡಾಗಿನಿಂದ ಇಲ್ಲಿಯವರೆಗೆ 1,387 ಪ್ರಕರಣಗಳು ಆಯೋಗದ ಮುಂದೆ ಬಂದಿದ್ದು, 1,281 ಪ್ರಕರಣಗಳು ಇತ್ಯರ್ಥಗೊಂಡಿವೆ. ಕೇವಲ 106 ಬಾಕಿ ಇವೆ ಎಂದು ಮಾಹಿತಿ ನೀಡಿದ ಅವರು, ಯಾವುದೇ ಇಲಾಖೆ, ಪ್ರಾಧಿಕಾರ ಸೇರಿದಂತೆ ಸರಕಾರಿ ಸಂಸ್ಥೆಯಿಂದ ಸಾರ್ವಜನಿಕರ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಾಗಿರುವುದು ಸರಕಾರದ ಎಲ್ಲ ಸಂಸ್ಥೆಗಳ ಕರ್ತವ್ಯವಾಗಿದೆ ಎಂದರು.

ಒಬ್ಬ ವ್ಯಕ್ತಿ ನಿವೃತ್ತಿಯಾಗುವ ಆರು ತಿಂಗಳು ಮೊದಲೇ ಆತನ ನಿವೃತ್ತಿ ಸೌಲಭ್ಯಗಳ ಕುರಿತ ಕಡತವನ್ನು ವಿಲೇವಾರಿಗೆ ಕ್ರಮ ಜರುಗಿಸಬೇಕು. ಪಿಂಚಣಿ ವೇತನ ಆತನ ಹಕ್ಕು. ವಿಳಂಬವಾಗದಂತೆ ಕ್ರಮ ವಹಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಪಂ ಸಿಇಒ ಎಸ್.ಅಶ್ವತಿ, ಎಎಸ್ಪಿಉಜ್ಜೇಶ್, ಎಡಿಸಿ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಪಾಲಿಕೆ ಆಯುಕ್ತ ಬಿ.ಎಚ್. ನಾರಾಯಣಪ್ಪ, ಉಪವಿಭಾಗಾಧಿಕಾರಿ ಸಿದ್ದೇಶ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News